*ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ “ತಾಜ್ ಮಹಲ್-೨ “ಚಲನಚಿತ್ರ  ತಂಡ ಭೇಟಿ *

Spread the love

*ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆತಾಜ್ ಮಹಲ್ಚಲನಚಿತ್ರ  ತಂಡ ಭೇಟಿ *

ಗದಗ : ಶ್ರೀ ಗಂಗಾಂಬಿಕೆ ಎಂಟರ್ ಪ್ರೈಸೆಸ್ ನಿರ್ಮಾಣದಲ್ಲಿ ದೇವರಾಜ್‌ಕುಮಾರ ನಿರ್ದೇಶನದ ‘ತಾಜ್‌ಮಹಲ್-೨’ ಚಲನಚಿತ್ರ ತಂಡ  ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಪೀಠಾಧೀಪತಿಗಳಾದ ಶ್ರೀ ಕಲ್ಲಯ್ಯಜ್ಜನವರ ಆಶೀರ್ವಾದ ಪಡೆದುಕೊಂಡಿತು.ಈ ಸಂದರ್ಭದಲ್ಲಿ ಪೀಠಾಧೀಪತಿಗಳಾದ ಪೂಜ್ಯ ಶ್ರೀ ಕಲ್ಲಯ್ಯಜ್ಜನವರು  ತಾಜ್‌ಮಹಲ್-೨ ಚಿತ್ರದ ನಟ,ನಿರ್ದೇಶಕ, ದೇವರಾಜ್ ಕುಮಾರ್, ಹಾಸ್ಯನಟ ರಿತೇಶ್, ಸಾಹಿತಿ, ಸಹನಿರ್ದೇಶಕ ಮನ್ವರ್ಷಿ ನವಲಗುಂದ, ಚಿತ್ರಪ್ರಚಾರಕ ಡಾ.ಪ್ರಭು ಗಂಜಿಹಾಳ ಅವರನ್ನು  ಶಾಲು ಹೊದಿಸಿ ಸನ್ಮಾನಿಸಿ ಮಾತನಾಡಿ, ಮೂಲತ:  ಗದಗನವರೇ ಆದ  ದೇವರಾಜ್ ಕುಮಾರ್, ಸಾಹಿತ್ಯ ರಚಿಸಿ ಸಹನಿರ್ದೇಶನ ಮಾಡಿದ ನವಲಗುಂದದ, ಮೂಲತ: ಹರ್ಲಾಪೂರ ಗ್ರಾಮದ ಮನ್ವರ್ಷಿ ನವಲಗುಂದ, ಈ ಚಿತ್ರದ ಪ್ರಚಾರಕರಾದ ಡಾ.ಪ್ರಭು ಗಂಜಿಹಾಳ ಅವರು ಎಲ್ಲರೂ ಗದಗನವರೇ ಎನ್ನುವದು ವಿಶೇಷ . ಈ ಭಾಗದ ಜನ ಕಲೆಗೆ ಯಾವಾಗಲೂ ಬೆಲೆಕೊಡುತ್ತ ಬಂದಿದ್ದಾರೆ. ನಿಮ್ಮ ಶ್ರಮಕ್ಕೆ ಯಶಸ್ಸು ಸಿಗುತ್ತೆ. ಚಿತ್ರ ಇದೇ ಸಪ್ಟಂಬರ್  ೨ರಿಂದ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದ್ದು ,ಗದಗ ನಗರದಲ್ಲೂ ಪ್ರದರ್ಶನವಾಗುತ್ತಿರುವದು ಸಂತೋಷ. ನಮ್ಮ ಕಲಾಭಿಮಾನಿ ಪ್ರೇಕ್ಷಕರು ಚಿತ್ರನೋಡಿ ನಿಮಗೆ ಬೆಂಬಲ ನೀಡುತ್ತಾರೆ .ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಚಿತ್ರತಂಡಕ್ಕೆ ಅಶೀರ್ವದಿಸಿದರು.   ತಾಜ್‌ಮಹಲ್-೨ ಚಿತ್ರದ ನಿರ್ದೇಶಕ ಹಾಗೂ ನಟ ದೇವರಾಜ್‌ಕುಮಾರ್ ಮಾತನಾಡಿ ಹಲವಾರು ವರ್ಷಗಳ ಕಾಲ ಚಿತ್ರರಂಗದಲ್ಲಿ ಮೇಕಪ್ ಕಲಾವಿದರಾಗಿ   ಕಾರ್ಯನಿರ್ವಹಿಸಿದ್ದು ಈಗಾಗಲೇ ಎರಡು ಚಿತ್ರಗಳನ್ನು ನಿರ್ದೇಶನ ಮಾಡಿದ್ದೇನೆ. ಇದು ನನ್ನ ಮೂರನೇ ಚಿತ್ರ. ನಿರ್ದೇಶನದ ಜೊತೆಗೆ ಚಿತ್ರದ ನಾಯಕನಟನಾಗಿ ನಟಿಸಿದ್ದೇನೆ. ಎಪ್ಪತ್ತುದಿನಗಳ ಕಾಲ ಸಕಲೇಶಪುರ, ಬೆಂಗಳೂರು, ಗಗನಚುಕ್ಕಿ, ಬರಚುಕ್ಕಿ ಮೊದಲಾದ ಕಡೆ ಚಿತ್ರೀಕರಣ ನಡೆಸಲಾಗಿದ್ದು ಮನೆಮಂದಿಯೆಲ್ಲ ಕುಳಿತು ನೋಡುವ ಚಿತ್ರ ಇದಾಗಿದೆ. ತಮ್ಮ ಚಿತ್ರಕ್ಕೆ ಸಂಗೀತ, ಕಲಾಪೋಷಕರ ಮಠದ ಆಶೀರ್ವಾದ ಇರಲಿ ಎಂದರು.  ಸಾಹಿತಿ, ಸಹನಿರ್ದೇಶಕ ಮನ್ವರ್ಷಿ ನವಲಗುಂದ ಚಿತ್ರದ ಕುರಿತು, ಸಾಹಿತ್ಯದ ಕುರಿತು ವಿವರಿಸಿದರು. ಹಾಸ್ಯನಟ ರಿತೇಶ್ , ಚಿತ್ರ ಪ್ರಚಾರಕ ಡಾ.ಪ್ರಭು ಗಂಜಿಹಾಳ, ಪುರಾಣ ಪ್ರವಚನಕಾರರಾದ ಶಿವಲಿಂಗಯ್ಯಶಾಸ್ತ್ರಿಗಳು ಹೊನ್ನಿಗನೂರ ಉಪಸ್ಥಿತರಿದ್ದರು. ನಂತರದಲ್ಲಿ ಚಿತ್ರತಂಡ ಶ್ರೀ ಜಗದ್ಗುರು ತೋಂಟದಾರ್ಯಮಠಕ್ಕೆ   ಭೇಟಿ ನೀಡಿ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಆಶೀರ್ವಾದ ಪಡೆದುಕೊಂಡರು.

ತಾರಾಗಣದಲ್ಲಿ ಸಮೃದ್ಧಿ ಶುಕ್ಲಾ, ದೇವರಾಜ್ ಕುಮಾರ್, ರಿತೇಶ್, ಜಿಮ್ ರವಿ, ವಿಕ್ಟರಿ ವಾಸು, ಶೋಭರಾಜ್, ತಬಲಾನಾಣಿ, ಕಾಕ್ರೋಚ್ ಸುಧಿ, ಶಿವರಾಂ, ವಾಣಿಶ್ರೀ, ಲಕ್ಷ್ಮೀ ಸಿದ್ದಯ್ಯ ಮೊದಲಾವರಿದ್ದಾರೆ. ತಾಂತ್ರಿಕವರ್ಗದಲ್ಲಿ ಛಾಯಾಗ್ರಹಣ ವಿನಸ್ ಮೂರ್ತಿ, ಸಂಗೀತ ವಿಕ್ರಂ ಸೆಲ್ವಾ, ಸಾಹಿತ್ಯ ಸಂಭಾಷಣೆ, ಸಹನಿರ್ದೇಶನ ಮನ್ವರ್ಷಿ ನವಲಗುಂದ, ಗಾಯಕರು ವಿಜಯ್ ಪ್ರಕಾಶ್,ರಾಜೇಶ್ ಕೃಷ್ಣನ್, ವರ್ಷ ಬಿ ಸುರೇಶ್, ಶ್ರೀರಕ್ಷಾ, ಪ್ರಿಯಾರಾಮ್ , ನೃತ್ಯ ಸಂಯೋಜನೆ ಬಿ.ಧನಂಜಯ್, ಸಾಹಸ ಚಂದ್ರು ಬಂಡೆ, ಸಂಕಲನ ವಿಜಯ್ ಎಮ್ ಕುಮಾರ್, ಪಿಆರ್‌ಓ ಸುಧೀಂದ್ರ ವೆಂಕಟೇಶ್, ಪ್ರಚಾರಕಲೆ ಡಾ.ಪ್ರಭು ಗಂಜಿಹಾಳ್, ಡಾ.ವೀರೇಶ್ ಹಂಡಗಿ ಅವರದಿದ್ದು,  ನಿರ್ದೇಶನವನ್ನು ದೇವರಾಜ್ ಕುಮಾರ್ ಮಾಡಿದ್ದಾರೆ. ಶ್ರೀ ಗಂಗಾಂಬಿಕೆ ಎಂಟರ್ ಪ್ರೈಸೆಸ್ ನಿರ್ಮಾಪಕರಾಗಿದ್ದಾರೆ.

ವರದಿ: ಡಾ.ಪ್ರಭು ಗಂಜಿಹಾಳಮೊ: ೯೪೪೮೭೭೫೩೪೬

Leave a Reply

Your email address will not be published. Required fields are marked *