ಮುದ್ದಲಗುಂದಿ ಗ್ರಾಮದಲ್ಲಿ ಜುಮಲಾಪೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸುರೇಂದ್ರ ಕಾಂಬಳೆಯವರಿಂದಉಧ್ಘಾಟನೆ……
ಕುಷ್ಟಗಿ ತಾಲೂಕಿನ ವಿಸ್ತರಣೆಯಲ್ಲಿ ಕಟ್ಟ ಕಡೆ ಗ್ರಾಮವಾಗಿರುವ. ಮುದ್ದಲಗುಂದಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜುಮಲಾಪೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಮತ್ತು ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪಂಪನಗೌಡ ಚಾಗಬಾವಿ ವಹಿಸಿದ್ದರು. ಈ ಸಂಧರ್ಭದಲ್ಲಿ ಸುಮಾರು 11 ಗ್ರಾಮಗಳ ಶಾಲೆಯ ಮಕ್ಕಳು ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಆಗಮಿಸಿದ್ದವು. ಈ ಸಂಧರ್ಭದಲ್ಲಿ ಉಧ್ಘಾಟನೆ ಬಾಷಣೆ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸುರೇಂದ್ರ ಕಾಂಬಳೆಯವರು. ಈ ಶಿಕ್ಷಣ ಇಲಾಖೆಯ ಜೋತೆಗೆ ಗ್ರಾಮದ ಸಮುದಾಯಗಳು ಕೈ ಜೋಡಿಸಿದರೆ ನಮ್ಮ ಸರ್ಕಾರಿ ಶಾಲೆಗಳು ರಾಜ್ಯ ಮಟ್ಟದ ಎತ್ತರಕ್ಕೆ ಸಾಗುವುದರಲ್ಲಿ ಅನುಮಾನವಿಲ್ಲ. ಶಿಕ್ಷಣದ ಜೊತೆ ಇಂತಹ ಸಹಪಠ್ಯ ಚಟುವಟಿಕೆಗಳನ್ನು ಇಲಾಖೆ ಸಮುದಾಯದ ಸಹಕಾರವಿದ್ದರೆ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಪಾತ್ರ ಅತಿಮುಖ್ಯ..ಎಂದರು. ನಂತರ BRP ಲೋಕೇಶ ಅವರು ಪ್ರಸ್ತಾವಿಕವಾಗಿ ಮಾತನಾಡಿ 2 ವರ್ಷಗಳ ಕಾಲ COVID ಸಂದರ್ಭದಲ್ಲಿ ಮಕ್ಕಳು ಇಂತಹ ಸಾಂಸ್ಕೃತಿಕ ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ. ಆದರೆ ಇದು ಮತ್ತೆ ನಡೆಯುತ್ತಿರುವುದು ಸಂತಾಸ ತಂದಿದೆ ಎಂದರು. ಜುಮಾಲಪೂರ ಸರಕಾರಿ ಪ್ರೌಡಶಾಲೆ ಶಾಲೆಯ ಮುಖ್ಯ ಶಿಕ್ಷಕರು ಸೋಮನಗೌಡ ಅವರು ಮಾತನಾಡಿ. ನಮ್ಮ ಈ ಬಾಗದಲ್ಲಿ ಮಕ್ಕಳು ಹೆಚ್ಚಾಗಿ ಬಡತನದಿಂದ ಕೂಡಿದ ಕುಟುಂಬದ ಹಿನ್ನೆಲೆ ಉಳ್ಳವರಾಗಿರುತ್ತರೆ. ಅಂತಹ ಮಕ್ಕಳಿಗೆ ನಾವು ಉತ್ತಮವಾಗಿ ಶಿಕ್ಷಣ ಕೊಡೋಣ ಸರಕಾರಿ ಶಾಲೆ ಬೆಳೆಸೋಣ ಎಂದರು. ಮುದ್ದಲಗುಂದಿ ಗ್ರಾಮಸ್ಥರು ಶಾಲೆಗೆ ಆಗಮಿಸಿದ ಅಧಿಕಾರಿಗಳನ್ನು ಸನ್ಮಾನಿಸಿದರು..ಕಾರ್ಯಕ್ರಮದಲ್ಲಿ ಕ್ಲಸ್ಟರ್ ನ ಜುಮಲಪುರ್ ನಂದಾಪೂರ್ ಮ್ಯದದರದೊಕ್ಕಿ ತಾಂಡ ಮಾದಾಪುರ ಅಡವಿಭಾವಿ ಇದ್ಲಾಪೂರ್ ಹಾಗಲದಾಳ ರಾಂಪುರ ಶಾಲೆ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರ ಉಡುಪು ಧರಿಸಿ ಅವರಂತೆ ಅಭಿನಯಸಿ ಭಕ್ತಿ ಗೀತೆ ಜಾನಪದ ಹಾಸ್ಯ ಮತ್ತು ಚಿತ್ರ ಕಲಾ ಕ್ಷೇತ್ರದಲ್ಲಿ ಭಾವಹಿಸಿದ್ದರು. ಜೊತೆಗೆ ಶಾಲೆಯ ಮುಖ್ಯ ಶಿಕ್ಷರಾದ ರುದ್ರೇಶ್ ಬೂದಿಹಾಳ ಶಿಕ್ಷಕ ದಂಪತಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸನ್ಮಾನಿಸಿದರು ಕಾರ್ಯಕ್ರಮದಲ್ಲಿ SDMC ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ದ್ದೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.ಅಧ್ಯಕ್ಷರಾದ ಪಂಪನಗೌಡ ಶಿಕ್ಷಣ ಸಂಯೋಜಕರಾದ ಶ್ರೀರಾಘಪ್ಪ. ಗ್ರಾಮದವರಾದ ಹನಮಂತ ಗುರಿಕಾರ. ಪಂಪನಗೌಡ. ದೊಡ್ಡಬಸನಗೌಡ. ರಮೇಶ್ ವಡ್ಡರ. ಶೇಖರಗೌಡ. ಬಸವರಾಜ್. CRP ಗಳಾದ ಯಮನಪ್ಪ ಗುರಿಕಾರ. ಸೋಮಲಿಂಗಪ್ಪ ಗುರಿಕಾರ. ಶಿಕ್ಷಕರಾದ ರಮೇಶ. ಯೋಗಿಶಪ್ಪಾ. ಬಸವರಾಜ್. ರಾಜೇಶ್ವರಿ, ಮೈತ್ರಾ. ಅನಿತಾ. ಕಸ್ತೂರಿ. ಗೀತಾ. ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.
ವರದಿ.-ಅಮಾಜಪ್ಪ ಜುಮಲಾಪೂರ ಪತ್ರಕರ್ತರು