ರೈತರ ಕೊಂದುಕೊರತೆ ವಿಚಾರಿಸಿದ #ಪವಿತ್ರ_ರಾಮಯ್ಯಅಧ್ಯಕ್ಷರು #ಭದ್ರಾ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ …..
ದಾವಣಗೆರೆ: ಮಳೆಗಾಲ ಆರಂಭವಾಗಿ ಎರಡು ತಿಂಗಳು ಕಳೆದಿದ್ದು, ಈ ಸಮಯದಲ್ಲಿ ಭತ್ತ ನಾಟಿ ಮಾಡುವ ಕಾರ್ಯವೂ ಸಹ ಬರದಿಂದ ಸಾಗಿದೆ. ಆದರೆ ಮಳೆ ಮಾತ್ರ ಕಣ್ಣಾ ಮುಚ್ಚಾಲೆ ಆರಂಭಿಸಿದೆ. ಭದ್ರಾ ಜಲಾಶಯದಿಂದ ನೀರು ಬಿಟ್ಟರೂ ಸಹ ಬಲದಂಡೆ ನಾಲೆಯ ಅಚ್ಚು ಕಟ್ಟು ವ್ಯಾಪ್ತಿಯ ಕೊನೆಯ ರೈತರ ಜಮೀನಿಗೆ ನೀರು ಸಮರ್ಪಕವಾಗಿ ತಲುಪುತ್ತಿಲ್ಲ. ಅದ್ದರಿಂದ ನಾಟಿ ಮಾಡುವುದಕ್ಕೆ ತುಂಬಾ ತೊಂದರೆ ಆಗುತ್ತಿದೆ ಎಂಬ ರೈತರ ದೂರಿನ ಮೇರೆಗೆ ಮಲೆಬೆನ್ನೂರು ನೀರಾವರಿ ಇಲಾಖೆಯಲ್ಲಿ ಈ ಕುರಿತು ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ರೈತರ ಜೊತೆಗೆ ಚರ್ಚಿಸಿ, ತಮ್ಮ ಕುಂದು ಕೊರತೆಗಳನ್ನು ವಿಚಾರಿಸಲಾಯಿತು. ರೈತರು ತಾಲ್ಲೂಕಿನ ದಿಬ್ಬದ ಹಳ್ಳಿ 9B ನಾಲಾ ವಲಯ (LPO – 1st Left pipe outlet) ಹಾಗೂ ಭಾನುವಳ್ಳಿ 11ನೇ ವಲಯ ನಾಲೆಯಲ್ಲಿ ರೈತರ ಜಮೀನಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂದು ಸಭೆಯಲ್ಲಿ ದೂರಿದರು. ಇದರಿಂದ ನಾಟಿ ಕಾರ್ಯಕ್ಕೆ ತುಂಬಾ ತೊಂದರೆ ಉಂಟಾಗಿದೆ ಎಂದು ತಿಳಿಸಿದರು. ಈ ದೂರಿನನ್ವಯ ನೀರು ಸಮರ್ಪಕವಾಗಿ ತಲುಪದ ರೈತರ ಜಮೀನಿಗೆ ಸಂಬಂಧ ಪಟ್ಟ ನೀರಾವರಿ ಇಲಾಖೆ ಅಭಿಯಂತರರು ಹಾಗೂ ಮಾಧ್ಯಮದವರೊಂದಿಗೆ ತೆರಳಿ ಸ್ಥಳ ವೀಕ್ಷಣೆ ಮಾಡಲಾಯಿತು. ನಂತರ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ನಾಟಿ ಕಾರ್ಯಕ್ಕೆ ತೊಂದರೆ ಆಗದಂತೆ ನೀರು ಹರಿಸಲು ಸೂಚಿಸಲಾಯಿತು.ಈ ಸಂದರ್ಭದಲ್ಲಿ ಮಾನ್ಯ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ವೀರೇಶ್ ರವರು, ಮತ್ತು ನೀರಾವರಿ ಇಲಾಖೆಯ ಅಭಿಯಂತರರು, ಮಾಧ್ಯಮ ಮಿತ್ರರು, ಹಾಗೂ ರೈತ ಮುಖಂಡರು ಹಾಜರಿದ್ದರು. #ಪವಿತ್ರ_ರಾಮಯ್ಯಅಧ್ಯಕ್ಷರು #ಭದ್ರಾಅಚ್ಚುಕಟ್ಟುಪ್ರದೇಶಾಭಿವೃದ್ಧಿ_ಪ್ರಾಧಿಕಾರ.
ವರದಿ – ಮಹೇಶ ಶ್ರರ್ಮಾ