ಹುಲಿಹೈದರ್ ಸಹಜ ಸ್ಥಿತಿಗೆ ಬರಬೇಕು: ಬಸವಣ್ಣೆಪ್ಪ ಕಲಶೆಟ್ಟಿ.
ಕನಕಗಿರಿ: ಹುಲಿಹೈದರ ಗ್ರಾಮ ಸ್ಥಿತಿ ನಿರ್ಮಾಣವಾಗಲು ತಾಲುಕು ಆಡಳಿತ ಸ್ಥಳೀಯ ಗ್ರಾಮ ಪಂಚಾಯಿತಿಯವರು ಪೂರ್ಣ ಪ್ರಮಾಣದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಸೂಚಿಸಿದರು. ಅವರು ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದ ಕೋಮು ಗಲಭೆಯಿಂದಾಗಿ 144ಕಾಯ್ದೆ ಜಾರಿಗೊಳಿಸದ ಹಿನ್ನೆಲೆಯಲ್ಲಿ ಸಾಕಷ್ಟು ಕುಟುಂಬಗಳು ಗ್ರಾಮ ತ್ಯಜಿಸಿದ ಪರಿಣಾಮ ಶಾಲೆಗೆ ರಜೆ ಘೋಷಿಸಲಾಗಿ ಪುನಃ ಪ್ರಾರಂಭ ಮಾಡಿದ್ದರೂ ಭಯದ ವಾತಾವರಣ ನಿರ್ಮಾಣದಿಂದ ಹೊರ ಬರದ ವಿದ್ಯಾರ್ಥಿಗಳು ಶಾಲೆಗೆ ಮಕ್ಕಳು ಗೈರಾಗುತ್ತಿರುವ ಕಾರಣ ಗುರುವಾರ ಉಪ ವಿಭಾಗಾಧಿಕಾರಿಗಳು ಹಾಗೂ ಮಾನ್ಯ ತಹಶೀಲ್ದಾರರು ಎಲ್ಲಾ ಸರ್ಕಾರಿ ಶಾಲೆಗಳಿಗೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ಮಾಡಿ ವಿದ್ಯಾರ್ಥಿಗಳಿಗೆ ಗ್ರಾಮದಲ್ಲಿ ನಡೆದ ಘಟನೆಯ ಬಗ್ಗೆ ಭಯ ಪಡೆದೆ ತರಗತಿಗಳಿಗೆ ಹಾಜರಾಗಲು ಹಾಗೂ ತಮ್ಮ ಸ್ನೇಹಿತರನ್ನು ಕರೆತರಲು ಮಕ್ಕಳಿಗೆ ಹೇಳಿದರು ತದನಂತರ ಎಲ್ಲ ಶಿಕ್ಷಕರಿಗೆ ಸಭೆ ಕರೆದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಪೋಷಕರಿಗೆ ಹಾಗೂ ಮಕ್ಕಳಿಗೆ ಧೈರ್ಯವನ್ನು ನೀಡಿ ಮಕ್ಕಳನ್ನು ತರಗತಿಗಳಿಗೆ ಹಾಜರಾಗುವಂತೆ ಮನವೊಲಿಸಲು ತಿಳಿಸಿದರು. ನಂತರ ಗ್ರಾಮದಲ್ಲಿ ಸಂಚಾರ ಮಾಡಿ ಉರ್ದು ಶಾಲೆಗೆ ಭೇಟಿ ನೀಡಿ ಅಲ್ಲಿಯೂ ಸಹ ಮಕ್ಕಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಸಂವಾದ ಮಾಡಿ ಹೆಚ್ಚಿನ ರೀತಿಯಲ್ಲಿ ಮಕ್ಕಳನ್ನು ತರಗತಿಗೆ ಹಾಜರಾಗುವಂತೆ ತಿಳಿಸಿದರು ನಂತರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಡಂಗೂರದ ಮೂಲಕ ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸುವಂತೆ ಹಾಗೂ ಸಹಜ ಸ್ಥಿತಿಯಲ್ಲಿ ಸಾರ್ವಜನಿಕರು ತಮ್ಮ ಕಾರ್ಯಗಳನ್ನು ನಿರ್ವಹಿಸುವಂತೆ ಪ್ರಚರಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಧನಂಜಯ್ ಮಾಲಗಿತ್ತಿ, ,ಕಂದಾಯ ನಿರೀಕ್ಷಕರಾದ ಹಾಲೇಶ್ ಗುಂಡಿ, ಗ್ರಾಮ ಲೆಕ್ಕಾಧಿಕಾರಿ ಪ್ರವೀಣ್ ಜೋನ್ಸ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ಕುಲಕರ್ಣಿ ಹಾಗೂ ಶಾಲೆಯ ಮುಖ್ಯೋಪಾಧ್ಯಯರಾದ ಹಂಪಣ್ಣ. ಸಿ ಮತ್ತು ಉರ್ದು ಶಾಲೆಯ ಮುಖ್ಯೋಪಾಧ್ಯಾಯರಾದ ನಗ್ಮ ಬಾನು ಹಾಗೂ ಎಲ್ಲಾ ಶಾಲಾ ಶಿಕ್ಷಕರು ಇದ್ದರು.
ವರದಿ – ಆದಪ್ಪ ಮಾಲಿಪಾಟೀಲ್