ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಎಮ್ಮೆ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವ ಘಟನೆ.
ದಿನಾಂಕ 17/08/2022 ರಂದು ಸಮಯ 12:04 ಕ್ಕೆ ಬುಧವಾರ ನಡೆದಿದೆ. ತಕ್ಷಣ ಊರಿನ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿದ ತಕ್ಷಣ ಸ್ಥಳಕ್ಕೆ ಜಲವಾಹನ ಮತ್ತು ಸಿಬ್ಬಂದಿಯವರು ರಕ್ಷಣಾ ಸಾಮಗ್ರಿಗಳೊಂದಿಗೆ ಶ್ರೀ ವಾಯ್.ಬಿ.ಕೌಜಲಗಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರವರ ನೇತೃತ್ವದಲ್ಲಿ ಸಿಬ್ಬಂದಿಯವರು ಒಳಗೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ತೆರೆದ ನೀರಿರುವ ಬಾವಿಯಲ್ಲಿ ಅಂದಾಜು 30ರಿಂದ 50ಅಡಿ ಆಳದಲ್ಲಿ ಎಮ್ಮೆ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವುದನ್ನು ಎಮ್ಮೆ ಮಾಲೀಕರು ಬಸವಂತ್ ಶ್ರೀಶೈಲ್ ತೇಲಿ ಸರ್ವೇ ನಂಬರ್ 108 ಜಮೀನ ತೋಟದ ಬಾವಿ ಮಾಲೀಕರು ತುಕಾರಾಂ ಗುರವ್ ಸುಮಾರು 01 ಗಂಟೆ 00 ನಿಮಿಷಗಳ ಕಾಲ ಕಷ್ಟಕರ ಕಾರ್ಯಚರಣೆಯಲ್ಲಿ ಎಮ್ಮೆ ಯನ್ನು ಜೀವಂತವಾಗಿ ರಕ್ಷಣೆ ಮಾಡಲಾಯಿತು. *ಈ ರಕ್ಷಣಾ ಕಾರ್ಯಚರಣೆ ಭಾಗವಹಿಸಿದ ಸಿಬ್ಬಂದಿಯ ವಿವರಗಳು*01) ಶ್ರೀ ವಾಯ್ ಬಿ.ಕೌಜಲಗಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ 02) ಶ್ರೀ ಗಜಾನನ ಮದಬಾವಿ ಅಗ್ನಿಶಾಮಕ ಚಾಲಕರು 03) ಶ್ರೀ ಪ್ರಕಾಶ ಆಲಿಶೇಟ್ವಿ ಅಗ್ನಿಶಾಮಕರು 04)ಶ್ರೀ ಸಿದ್ದಪ್ಪಅ ಗಲಂಬಿ.ಅಗ್ನಿಶಾಮಕರು. 05) ಶ್ರೀ.ಸಂತೋಷ.ಚೌಗುಲಾ ಅಗ್ನಿಶಾಮಕರು 06) ಎಂ ಬ ಚೌಗುಲೆ ಅಗ್ನಿಶಾಮಕರು ಇತರರು ಮತ್ತು ಊರಿನ ಗ್ರಾಮಸ್ಥರು ಕಾರ್ಯಾಚರಣೆ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ಕೆಂಪವಾಡ ಗ್ರಾಮದಲ್ಲಿ ಅಗ್ನಿಶಾಮಕ ಇಲಾಖೆಗೆ ಅಗ್ನಿಶಾಮಕದ ಅಧಿಕಾರಿಗಳಿಗೆ ಅಗ್ನಿಶಾಮಕದ ಸಿಬ್ಬಂದಿಗಳಿಗೆ ತುಂಬಾ ತುಂಬಾ ಧನ್ಯವಾದಗಳು ತಿಳಿಸಿದರು ನೀವು ಮಾಡುವ ಕೆಲಸ ಜೀವರಕ್ಷಿಸುವ ಕೆಲಸವಾಗಿದೆ ಭಗವಂತ ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಸದಾಕಾಲ ಉನ್ನತಮಟ್ಟಕ್ಕೆ ಮತ್ತು ದೊಡ್ಡ ಹುದ್ದೆಗಳನ್ನು ಸ್ವೀಕರಿಸಲಿ ಎಂದು ಹೇಳಿದರು.
ವರದಿ – ಮಹೇಶ ಶರ್ಮಾ