ಜಾಗೃತಿ ಓಟಗಾರ ಸಿಜಿಸಿ ಮೋಹನ್ ಕುಮಾರ್ ದಾನಪ್ಪಗೆ ಹೈ ಕೋರ್ಟ್ ಎಎಜಿ ಯಿಂದ ಅಭಿನಂದನೆ!
ಬೆಂಗಳೂರು ಆ18: ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಂಬುಲೆನ್ಸ್ ಗೆ ದಾರಿ ಬಿಡಿ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ ಕುರಿತು ಜಾಗೃತಿಗಾಗಿ ಬೆಂಗಳೂರು ಮಹಾನಗರದಲ್ಲಿ ರಾಷ್ಟ್ರಧ್ವಜ ಹಿಡಿದು 21 ಕಿ ಮೀ ಮ್ಯಾರಥಾನ್ ಓಟ ನಡೆಸಿ ಜನ ಜಾಗೃತಿ ಮೂಡಿಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪ ನವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ರಾದ ಎಂ. ಅರುಣ್ ಶ್ಯಾಮ್ ರವರು ಪದಕ ತೊಡಸಿ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು! ಯುವಕರು ಸಧೃಡ ಅರೋಗ್ಯ, ಸಧೃಡ ದೇಹ ಹೊಂದಲು ಕ್ರೀಡಾ ಚಟುವಟಿಕೆಯಲ್ಲಿ ತೊಡಗುವುದು ಅಗತ್ಯ, ಮೋಹನ್ ಕುಮಾರ್ ದಾನಪ್ಪನವರು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಯುವ ಸಮೂಹಕ್ಕೆ ಮಾದರಿಯಾಗಿದ್ದು ಇಂತಹ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ರಾದ ಎಂ. ಅರುಣ್ ಶ್ಯಾಮ್ ರವರು ತಿಳಿಸಿದರು! ಈ ಸಂಧರ್ಭದಲ್ಲಿ ಕರ್ನಾಟಕ ಹೈ ಕೋರ್ಟ್ ನ ಕೇಂದ್ರ ಸರ್ಕಾರದ ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಹೆಚ್. ಶಾಂತಿ ಭೂಷಣ್ ರವರು ಉಪಸ್ಥಿತಿಯಲ್ಲಿದ್ದರು.
ವರದಿ – ಉಪ್ಪಳೇಶ ವಿ.ನಾರಿನಾಳ