ಲಂಚದಾಸೆಗೆ ನೂರಾರು ಯುವಕ ಯುವತಿಯರಿಗೆ ಸಂಧ್ಯಾ ಸುರಕ್ಷಾ ಪಿಂಚಣಿ ಆರ್ಡರ್ ಪ್ರತಿ ನೀಡಿದ. ಮಹಾ ಲಂಚಬಕಾಸುರಮ್ಮ. ವಿಜಯಲಕ್ಷ್ಮೀ ಮುಂಡರಗಿ..

Spread the love

ಲಂಚದಾಸೆಗೆ ನೂರಾರು ಯುವಕ ಯುವತಿಯರಿಗೆ ಸಂಧ್ಯಾ ಸುರಕ್ಷಾ ಪಿಂಚಣಿ ಆರ್ಡರ್ ಪ್ರತಿ ನೀಡಿದ. ಮಹಾ ಲಂಚಬಕಾಸುರಮ್ಮ. ವಿಜಯಲಕ್ಷ್ಮೀ ಮುಂಡರಗಿ..

  

ತಾವರಗೇರಾ ನಾಡ ಕಚೇರಿ ಉಪ ತಹಶೀಲ್ದಾರಾಗಿದ್ದ. ವಿಜಯಲಕ್ಷ್ಮಿ ಇವರ ವಿರುದ್ಧ. ಸೂಕ್ತ ಕ್ರಮಕ್ಕಾಗಿ  ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ದೂರು ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿಯ ನಾಡ ಕಾರ್ಯಲಯದ ಉಪ ತಹಶೀಲ್ದಾರ್ ಆಗಿದ್ದಂತಹ ವಿಜಯಲಕ್ಷ್ಮಿ ಮುಂಡರಗಿ ಯವರು. ತಮ್ಮ ಅಧಿಕಾರವಧಿಯಲ್ಲಿ. ಹಣದಾಸೆಗೆ ಹದಿಹರೆಯದ ನೂರಾರು ಯುವಕ ಯುವತಿಯರಿಗೆ  ಸಂಧ್ಯಾ ಸುರಕ್ಷಾ ಪಿಂಚಣಿ ಆರ್ಡರ್ ಪ್ರತಿ ನೀಡಿರುವದು ಬೆಳಕಿಗೆ ಬಂದಿದೆ. ದುಡಿಯಲು ಆಗದಿರುವ 65 ವರ್ಷದ ಮೇಲ್ಪಟ್ಟವರಿಗೆ ಸರ್ಕಾರ ಮಾಡಿರುವ ಈ ಯೋಜನೆಯ ಸದುಪಯೋಗವನ್ನು.ತಾವರಗೇರಾ ನಾಡ ಕಚೇರಿ ಭ್ರಷ್ಟ ಅಧಿಕಾರಿಯಾಗಿರುವ.  ವಿಜಯಲಕ್ಷ್ಮಿ ಮುಂಡರಗಿ. ಒಬ್ಬ ಫಲಾನುಭವಿಗಳಿಗೆ 5000 ದಂತೆ ಮದ್ಯವರ್ತಿಗಳಿಂದ ಹಣ ಪಡೆದು ಸುಮಾರು 300 ಜನರಿಗೆ ಮದ್ಯ ವಯಸ್ಕರರಿಗೆ ಪಿಂಚಣಿ ಆರ್ಡರ್ ಪ್ರತಿ ನಿಡಿರುವದು ಬೆಳಕಿಗೆ ಬಂದಿದೆ. ತಾವರಗೇರಾ ಹೋಬಳಿಯ ವ್ಯಾಪ್ತಿಯಲ್ಲಿ ಬರುವ 30 ಗ್ರಾಮಗಳ ಪೈಕಿ ಪ್ರತಿ ಗ್ರಾಮಗಳಲ್ಲಿ 30, 40, 50, ವರ್ಷದ ಕೆಲವು ಫಲಾನುಭವಿಗಳಿಗೆ ಅಕ್ರಮವಾಗಿ ಪಿಂಚಣಿ ಯೋಜನೆ ಮಂಜೂರು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿಲಿದೆ. ಅದರಲ್ಲಿ ವಿಶೇಷವಾಗಿ ಜುಮಲಾಪೂರ ಹಾಗೂ ಸಾಸ್ವಿಹಾಳ ಗ್ರಾಮದಲ್ಲಿ ಪ್ರತ್ಯಕ್ಷ ಕಂಡಂತೆ ಸುಮಾರು 120 ಫಲಾನುಭವಿಗಳಿಗೆ ಲಂಚದಾಸೆಗೆ ಅಕ್ರಮವಾಗಿ ಪಿಂಚಣಿ ಆರ್ಡರ್ ಪ್ರತಿ ನಿಡಿರುವದು ತಿಳಿದಿದ್ದು ಇರುತ್ತದೆ.

ವಿಶೇಷವಾಗಿ ತಾವರಗೇರಾ ಹೋಬಳಿಯ ಕಳಮಳ್ಳಿ ಎನ್ನುವ ಗ್ರಾಮದಲ್ಲಿ ಒಟ್ಟು ಮತದಾರರು. 1050.. ಅಲ್ಲಿನ ಮಾಸಾಶನ ಪಿಂಚಣಿ ಪಡೆಯುವವರ ಸಂಖ್ಯೆ 520 ಆಗಿರುವುದು ಕಂಡು ಬಂದಿದ್ದು, ಇನ್ನೂ ಬಹಳಷ್ಟು ಅಕ್ರಮವಾಗಿರುವದರ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ವ್ಯಕ್ತವಾಗುತ್ತದೆ. ಈಗಾಗಲೇ ದಿನಾಂಕ 5=8=2022 ರಂದು ಅಮಾಜಪ್ಪ ಜುಮಲಾಪೂರ ಎನ್ನುವ ದೂರುದಾರರು ಲಿಖಿತವಾಗಿ ಶ್ರೀ ಮಾನ್ಯ ತಹಶೀಲ್ದಾರ್ ಸಾಹೇಬರು ಮುಖಾಂತರ ಶ್ರೀ ಮಾನ್ಯ ಜಿಲ್ಲಾಧಿಕಾರಿಗಳಿಗೆ. ಅಕ್ರಮವಾಗಿ ಪಿಂಚಣಿ ಮಂಜೂರು ಮಾಡಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಮತ್ತು  ಅಕ್ರಮವಾಗಿ ಪಡೆದಿರುವ ಪಿಂಚಣಿ ಆರ್ಡರ್ ಪ್ರತಿಯನ್ನು ಕೂಡಲೇ ರದ್ದುಗೊಳಿಸಬೇಕು. ಸರ್ಕಾರದ ದುಡ್ಡನ್ನು ಅನವಶ್ಯಕವಾಗಿ ಪೋಲು ಮಾಡಿರುವ ಅಧಿಕಾರಿಗಳಿಂದ ಹಾಗೂ ಅಕ್ರಮವಾಗಿ ಪಿಂಚಣಿ ಆರ್ಡರ್ ಪ್ರತಿ ಪಡೆದುಕೊಂಡಿರುವ ಫಲಾನುಭವಿಗಳ ಮೇಲೆ  ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಅಕ್ರಮದಲ್ಲಿ ಪೋಲು ಆಗಿರುವ ದುಡ್ಡನ್ನು ಅವರಿಂದ ಪಡೆದು ಮರಳಿ ಸರ್ಕಾರದ ಖಜಾನೆಗೆ ತುಂಬಬೇಕೆಂದು ದೂರುದಾರರು ದೂರು ಸಲ್ಲಿಸಿದ್ದಾರೆ. ಈ ಬಹು ದೊಡ್ಡ ಅಕ್ರಮಗಳಲ್ಲಿ ದಲ್ಲಾಳಿಗಳಿಂದ ಹಿಡಿದು ಅಧಿಕಾರಿ ವರ್ಗದವರು ಭಾಗಿಯಾಗಿರುವ ಬ್ರಷ್ಟ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಯಾವ ರೀತಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ.?

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *