ಮುಧೋಳ ಗ್ರಾಮದ ಐತಿಹಾಸಿಕ ಸ್ಥಳಗಳಿಗೆ ಸ್ವಚ್ಛತೆಗೆ ಎಲ್ಲರೂ ಕೈಜೋಡಿಸಿ :
ಯಲಬುರ್ಗಾ : ಜಿಲ್ಲೆಯಾದ್ಯಂತ ನಿರಂತರವಾಗಿ ಪ್ರತಿ ಶುಕ್ರವಾರ ಹಮ್ಮಿಕೊಂಡಿರುವ ಸ್ವಚ್ಛ ಭಾರತ್ ಮಿಷನ್ ಗ್ರಾಮ ಪಂಚಾಯಿತಿ ಯೋಜನೆ ಅಡಿಯಲ್ಲಿ ಐತಿಹಾಸಿಕ ಸ್ಥಳಗಳನ್ನು ಸ್ವಚ್ಛತೆ ಗೆ ಚಾಲನೆ ನೀಡಿ ಮಾತನಾಡಿದರು,ತಾಲೂಕಿನ ಮುಧೋಳ ಗ್ರಾಮದ ಶ್ರೀ ತ್ರಿಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಡೆಯಿತು, ಗ್ರಾಮವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಗ್ರಾಮಗಳು ಸ್ವಚ್ಛವಾದರೆ ಜಿಲ್ಲೆ, ರಾಜ್ಯ ಸ್ವಚ್ಛತೆಯಾದಂತೆ’ ಪ್ರತಿಯೊಬ್ಬರು ಗ್ರಾಮದ ಸ್ವಚ್ಛತೆಗೆ ಮುಂದಾಗಬೇಕು ಎಂದು ಕೊಪ್ಪಳ ಜಿಲ್ಲಾ ಪಂ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ ಅವರು ಹೇಳಿದರು. ನಂತರ ಮಾತನಾಡಿದ ತಾಲೂಕ ಪಂ ಇಒ ಸಂತೋಷ್ ಬಿರಾದರ್ ಅವರು ಸ್ವಚ್ಛ ಭಾರತ್ ಮಿಷನ್ ಗ್ರಾಮ ಪಂಚಾಯಿತಿ ಯೋಜನೆ ಅಡಿಯಲ್ಲಿ ಈ ಸ್ವಚ್ಛತೆಗೆ ಅಧಿಕಾರಿಗಳು ಪೌರಕಾರ್ಮಿಕರು ಶ್ರಮಿಸಿದರೆ ಸಾಲದು ಗ್ರಾಮದ ಪ್ರತಿಯೊಬ್ಬರೂ ಸ್ವಚ್ಛತೆಯ ಬಗ್ಗೆ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಲು ಸಹಕರಿಸಿದರೆ ಮಾತ್ರ ಮುಧೋಳ ಗ್ರಾಮ ಮಾದರಿ ಗ್ರಾಮ ವಾಗಲು ಸಾಧ್ಯ ಎಂದರು, ಶ್ರೀ ತ್ರಿಲಿಂಗೇಶ್ವರ ದೇವಸ್ಥಾನ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ಸ್ವಚ್ಛತೆ ಗೊಳಿಸಿದರು, ಇದೆ ಸಂದರ್ಭದಲ್ಲಿ ಗ್ರಾಂ ಪಂ ಅಧ್ಯಕ್ಷರಾದ ಭಾರತಿ ಶಿವಾನಂದ ಚಲವಾದಿ, ಪಿಡಿಓ ರವಿಕುಮಾರ್ ಲಿಂಗಣ್ಣನವರ ಎ ಡಿ ಲಿಂಗನಗೌಡರ್, ಆರೋಗ್ಯ ಇಲಾಖೆಯ ಶಂಕ್ರಣ್ಣ ಅಂಗಡಿ, ಮಹಿಳಾ ಒಕ್ಕೂಟದ ಅಧ್ಯಕ್ಷರು ಸದಸ್ಯರು, ಗ್ರಾಂ ಪಂ ಸರ್ವ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಗ್ರಾಂ ಪಂ ಸಿಬ್ಬಂದಿ ವರ್ಗದವರು ಪೌರ ಕಾರ್ಮಿಕರು ಭಾಗವಹಿಸಿದ್ದರು.
ವರದಿ – ಹುಸೇನಬಾಷ ಮೋತೆಖಾನ್