ಶ್ರೀ ಭಗವಾನ ಗಿರಿ ಮಹಾರಾಜರ ಮಠದಲ್ಲಿ ನೂರಾರು ವಿದ್ಯಾರ್ಥಿಗಳು ಸಂಸ್ಕೃತ ಅಧ್ಯಯನ ಮಾಡುತ್ತಿರುವುದು ವಿಶೇಷ ಸಂಗತಿ.
ಗಡಿಂಗ್ಲಜ ತಾಲೂಕಿನ ಕ|| ನೂಲ ಗ್ರಾಮದ ರಾಮನಾಥಗಿರಿ ಸಮಾಧಿ ಸಂಸ್ಥಾನ ಮಠಕ್ಕೆ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿ ನೀಡಿ, ಪ.ಪೂಜ್ಯ ರಾಮನಾಥ ಗಿರಿ ಮಹಾರಾಜರ ಹಾಗೂ ಪ.ಪೂಜ್ಯ ಶ್ರೀ ಭಗವಾನ ಗಿರಿ ಮಹಾರಾಜರ ಗದ್ದುಗೆಯ ದರ್ಶನ ಪಡೆದರು. ಬಳಿಕ ಭಂಡಾರ ಉತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಧರ್ಮಚಾರ್ಯ ಪ.ಪೂಜ್ಯ ಶ್ರೀ ಭಗವಾನ ಗಿರಿ ಮಹಾರಾಜರ, ನಿಡಸೋಸಿ ದುರದುಂಡಿಶ್ವರ ಸಿದ್ದ ಸಂಸ್ಥಾನ ಮಠದ ಶ್ರೀ ಮ.ನೀ.ಪ್ರ. ಪಂಚಮಶಿವಲಿಂಗೇಶ್ವರ ಮಹಾಸ್ವಾಮೀಜಿ, ಪ.ಪೂಜ್ಯ ಶ್ರೀ ಭಗವಾನಗಿರಿ ಮಹಾರಾಜರ ಹಾಗೂ ಗುರುಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಮಠದಲ್ಲಿ ಸಾಂಸ್ಕೃತ ಪಾಠ ಶಾಲೆ ಇದ್ದು, ಇಲ್ಲಿ ನೂರಾರು ವಿದ್ಯಾರ್ಥಿಗಳು ಸಂಸ್ಕೃತ ಅಧ್ಯಯನ ಮಾಡುತ್ತಿರುವುದು ವಿಶೇಷ ಸಂಗತಿ. ಈ ಕಾರ್ಯಕ್ರಮದಲ್ಲಿ ಸಂಸ್ಕೃತ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಅಂಕಲಿಕರ ಸರಕಾರಗಳಾದ ಶ್ರೀ ಊರ್ಜಿತಸಿಂಹರಾಜೆ ಶಿತೊಳೆ, ಗ್ರಾಮಸ್ಥರು, ಭಕ್ತಾದಿಗಳು ಪಾಲ್ಗೊಂಡಿದ್ದರು.
ವರದಿ – ಮಹೇಶ ಶರ್ಮಾ