ಜ್ಯೋತಿ ಜಿ,ಮೈಸೂರು ಇವರ ವಿಶೇಷ ಲೇಖನ ಸರ್ಕಾರಿ ಹುದ್ದೆ ಬೇಕು,ಕನ್ನಡ ಶಾಲೆ ಬೇಡ?
”ನರಕಕ್ಕೆ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ನಲ್ ಒಳೆಸ್ಸಾಕಿದ್ರುನೂ,ಮೂಗ್ನಲ್ ಕನ್ನಡ ಪದವಾಡುತ್ತೀವಿ”
ಜೆ.ಪಿ ರಾಜ ರತ್ನಂ ಅವರು ಒಂದು ಕಡೆ ಹೇಳಿದ ಮಾತು. ಎಂತಹ ಅದ್ಭುತವಾದ ಮಾತು ಹಾಗೂ ಎಷ್ಟೊಂದು ಕನ್ನಡಾಭಿಮಾನ. ಇದು ಒಂದು ನಿರ್ದಶನ ಮಾತ್ರ. ಹೀಗೆ ಅನೇಕಾರು ಕನ್ನಡ ಪರ ಹೋರಾಟಗಾರರು, ಸಾಹಿತಿಗಳು ಜೀವನದಲ್ಲಿ ಬಳಸಿ, ಬೆಳಸಿದ ಕನ್ನಡ ಭಾಷೆಯಾಗಿವೆ. ಇಂತಹ ಸುಂದರ ಕನ್ನಡ ಭಾಷೆಯ ಹೆಸರನ್ನು ಹೇಳಿ ರಾಜ್ಯದಾದ್ಯಂತ ಬೆಳೆಯುವ ಒಂದು ಕನ್ನಡ ಪರದ ಮುಖವನ್ನು ಕಾಣಲು ಸಾಧ್ಯವಾಗುತ್ತಿದೆ. ವಾಸ್ತವದಲ್ಲಿ ಅವರು ಅವರನ್ನು ಬೆಳಸುತ್ತಿದ್ದಾರೆ. ಹೊರತು ಕನ್ನಡ ಭಾಷೆ ಮತ್ತು ಕನ್ನಡದ ಸಂಸ್ಕೃತಿಯನ್ನು ಅಲ್ಲ ಎಂದು ನಾವು ಅರಿಯಬೇಕು. ಇಂದಿನ ತಲೆಮಾರಿಗೆ ಕನ್ನಡವನ್ನು ಕಲಿಸಲು ಸೂಕ್ತವಾದ ಸ್ಥಳ ಕನ್ನಡ ಶಾಲೆಯಾಗಿದೆ. ಇಂದು ಕನ್ನಡ ಶಾಲೆಗಳ ಪರಿಸ್ಥಿತಿ ಹೇಗಿದೆ? ಸರಿಯಾದ ಸೌಂದರ್ಯಗಳಿಲ್ಲದೆ, ಮಕ್ಕಳನ್ನು ಮತ್ತು ಪೋಷಕರನ್ನು ಕನ್ನಡ ಶಾಲೆಯತ್ತ ಆಕರ್ಷಿಸಲು ಬೇಕಾದ ವ್ಯವಸ್ಥೆ ಮಾಡಲಾಗಿದೆ ಇಂದು ಬೆರಳೆಣಿಕೆಯಷ್ಟು ಮಕ್ಕಳನ್ನು ಇಟ್ಟುಕೊಂಡು ಬಿಕೊ… ಬಿಕೊ… ಅನ್ನುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರರು ಎಲ್ಲಿ ಹೋದರು? ಕನ್ನಡ ಎಂಬ ಪದ ಕೇಳಿದೊಡನೆ ಮೈಮನ ನವಿರೇಳುವುದು ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಖಾಸಗಿ ಶಾಲೆಗಳಿಗೆ ಮೊರೆ ಹೋಗುವುದೇ ಹೆಚ್ಚು ,ತಮ್ಮ ಮಕ್ಕಳು ಆಂಗ್ಲ ಭಾಷೆಯಲ್ಲಿಯೇ ಮಾತನಾಡಬೇಕು ಎಂಬ ಪೋಷಕರ ವ್ಯಾಮೋಹವನ್ನು ಅಳಿಸಲು ಸಾಧ್ಯವಿಲ್ಲ. ಏನೇ ಇರಲಿ ಭಾಷೆಯ ಬಗ್ಗೆ ಕೆಲವೊಮ್ಮೆ ತಾತ್ಸಾರ ತೋರುವುದುಂಟು,ಮಕ್ಕಳಿಗೆ ಅಭಿಮಾನದ ಬದಲು ಅವರಿಗೆ ಯಾಕೆ ಕನ್ನಡದಲ್ಲಿ ಮಾತನಾಡುತ್ತೀಯ,ನಿನಗೆ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಲು ಬರುವುದಿಲ್ಲವೇ ಎಂದು ಕೇಳುತ್ತಾರೆ ಹೀಗಿರುವಾಗ ಎಲ್ಲಿಯ ಕನ್ನಡ,ಎಲ್ಲಿಯ ಇಂಗ್ಲೀಷ್. ಕನ್ನಡ ಮಾಧ್ಯಮದಲ್ಲಿ ಓದಿದ ಅದೆಷ್ಟೂ ಮಹನೀಯರು ಉತ್ತಮ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಐ.ಎ.ಎಸ್, ಕೆ.ಎ.ಎಸ್ ,ಐ,ಪಿ,ಎಸ್ ಅಧಿಕಾರಿಗಳಾಗಿದ್ದಾರೆ. ಸಮಾಜಕ್ಕೆ ಉತ್ತಮ ಕೆಲಸಗಳನ್ನು ನಿರ್ವಹಿಸಿದ್ದಾರೆ,ಅದೆಷ್ಟೂ ಜನಪ್ರಿಯ ಕವಿಗಳು ಜನಿಸಿದ ತಾಯ್ನಾಡಿದು. ರಾಜಕೀಯ ನಾಯಕರು,ಸಿನಿಮಾ ನಾಯಕರು ಸೇರಿದ ಹಲವಾರು ಮಹನೀಯರಿಗೆ ಜನ್ಮವಿತ್ತ ನಮ್ಮ ಕರ್ನಾಟಕ ನಮ್ಮ ಕನ್ನಡ. ಪ್ರತಿಯೊಬ್ಬರು ಹೆಮ್ಮೆ ಪಡುವ ಭಾಷೆ ನಮ್ಮ ಕನ್ನಡ ಎಷ್ಟು ಹೊಗಳಿದರೂ ಸಾಲದು ನಮ್ಮ ಭಾಷೆ ಕನ್ನಡ. ಆದರೂ ಖಾಸಗಿ ಶಾಲೆಯ ಮುಂದೆ ನಮ್ಮ ಸರ್ಕಾರಿ ಶಾಲೆಯು ಮಂಕಾಗಿದಿಯೇ ಎಂಬುವುದೇ ಪ್ರಶ್ನೆಯಾಗಿದೆ. ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಸರ್ಕಾರವು ಕೈಗೊಂಡಿರುವಾಗ ಎಲ್ಲೂ ನಮ್ಮ ಶಾಲೆಗಳಿಗೆ ಹೊಸ ಕಾಯಕಲ್ಪ ಮಾಡಿದಾಗ ಎಷ್ಟೂ ಅಳಿವಿನ ಅಂಚಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಮತ್ತೆ ಖಾಸಗಿ ಶಾಲೆಗಳ ಹಾಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿದಾಗ ಮಾತ್ರ ನಮ್ಮ ಕನ್ನಡ ಶಾಲೆಗಳನ್ನು ಉಳಿಸಬಹುದು. ಈಗಾಗಲೇ ೨೦೨೧ ರ ಪ್ರಕಾರ ಒಟ್ಟು ೨೭೬ ಶಾಲೆಗಳನ್ನು ಹೊಂದಿದೆ. ಮೊಟ್ಟ ಮೊದಲ ಬಾರಿಗೆ ೧೮೪೦ ರಲ್ಲಿ ರೆವ್ ಜೇಮ್ಸ್ ಸೆವೆಲ್ ಅವರ ಪತ್ನಿ ಬೆಂಜಮಿನ್ ಮತ್ತು ಜೇನ್ ರೈಸ್ ಅವರ ಸಹಾಯದಿಂದ ಪೇಟೆ ಪ್ರದೇಶದಲ್ಲಿ ಬಾಲಕಿಯರಿಗಾಗಿ ಮೊದಲ ಕನ್ನಡ ದಿನ-ಶಾಲೆಯನ್ನು ಪ್ರಾರಂಭಿಸಿದರು ಆದರೆ ಇಂದಿನ ಪರಿಸ್ಥಿತಿಗಳನ್ನು ಗಮನಿಸಿದಾಗ ಸರ್ಕಾರಿ ಶಾಲೆಗಳನ್ನು ಮುಚ್ಚುವ ಆತಂಕದಲ್ಲಿದೆ. ಪಕ್ಕದ ರಾಜ್ಯಗಳಿಗೆ ಹೋಲಿಸಿದಾಗ ಕೇರಳ ಸರ್ಕಾರದ ಶಿಕ್ಷಣವು ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ ಅಲ್ಲಿ ಸುಮಾರು ೪೫೦೪ ಶಾಲೆಗಳನ್ನು ಹೊಂದಿದ್ದು ಉತ್ತಮ ಆಧುನಿಕ ತಂತ್ರಜ್ಙಾನ ಹಾಗೂ ಸ್ಮಾರ್ಟ್ ಕ್ಲಾಸ್‌ಗಳನ್ನು ಒಳಗೊಂಡಿದೆ.
ಇಂತಹ ಯೋಜನೆಗಳನ್ನು ನಮ್ಮ ಕರ್ನಾಟಕದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಸಂಪೂರ್ಣವಾಗಿ ಜಾರಿಗೊಳಿಸಬೇಕು ಶಿತಿಲಗೊಂಡಿರುವ ಶಾಲೆಗಳಿಗೆ ನೀಡಬೇಕಾಗಿದೆ ಹೊಸ ಮಾರ್ಪಾಡುಗಳನ್ನು ಕೆಲವು ಶಾಲೆಗಳಲ್ಲಿ ಶಿಕ್ಷಕರ ಸಹಯೋಗದಿಂದ ಸರ್ಕಾರದ ಯಾವುದೇ ನಿರೀಕ್ಷೆಗಳನ್ನು ಪಡೆಯದೆ ಖಾಸಗಿ ಶಾಲೆಗಳಂತೆ ಉತ್ತಮ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. ದಿನಾಂಕ ೧೨-೮-೨೦೨೨ ರಲ್ಲಿ ಪತ್ರಿಕೆಯಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನೆಲ್ಲಿಗೆರೆ ಗ್ರಾಮದ ಸರ್ಕಾರಿ ಹಿರಿಯ ಶಾಲೆಗೆ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ರವರು ಅನಿರೀಕ್ಷಿತವಾಗಿ ಭೇಟಿ ನೀಡಿದ್ದರು ಬೆಳಗ್ಗೆ ೧೦.೩೦ ಆಗಿದ್ದರೂ ಅಲ್ಲಿನ ಶಿಕ್ಷಕರು ಹಾಜರಾಗಿರಲಿಲ್ಲ ಬದಲಾಗಿ ಬೆಳಗ್ಗೆಯೇ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಬರಿಯ ಸಂಬಳಕ್ಕಾಗಿ ಕೆಲಸ ನಿರ್ವಹಿಸುತ್ತಿರುವ ವಿರುದ್ದ ಕ್ರಮಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಇಂತಹ ಅದೆಷ್ಟೂ ಶಿಕ್ಷಕರು ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟವಾಡುವುದು ಸರಿಯಲ್ಲ ಇಂತಹವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಬರೀ ಮಾತಿನಲ್ಲಿಯೇ ಹೇಳದೆ ಕಾರ್ಯಗತ ಮಾಡಬೇಕು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಖಾಸಗಿ ಶಾಲೆಗಳ ಹಾಗೆ ಸೌಕರ್ಯಗಳನ್ನು ಕಲ್ಪಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿ ಉತ್ತಮ ಹುದ್ದೆಯಲ್ಲಿರುವರು ಶಾಲೆಗಳನ್ನು ದತ್ತು ತೆಗೆದುಕೊಂಡು ಸೌಕರ್ಯಗಳನ್ನು ಒದಗಿಸಬೇಕು. ಸರ್ಕಾರಿ ಹುದ್ದೆ ಬೇಕು ಆದರೆ ಸರ್ಕಾರಿ ಕನ್ನಡ ಶಾಲೆ ಬೇಡ ಎನ್ನುವುದು ಯಾವ ನ್ಯಾಯ ?
ವಿಶೇಷ ಲೇಖನ :- ಜ್ಯೋತಿ ಜಿ,ಮೈಸೂರು
(ಉಪನ್ಯಾಸಕಿ ಹಾಗೂ ಕನ್ನಡ ಪರ ಹೋರಾಟಗಾರ್ತಿ)