ಸರ್ಕಾರದ ಪ್ರಯೋಜನೆ ವಿಕಲಚೇತನರು ಪಡೆದುಕೊಳ್ಳಬೇಕು : ಸಚಿವ ಹಾಲಪ್ಪ ಆಚಾರ್

Spread the love

ಸರ್ಕಾರದ ಪ್ರಯೋಜನೆ ವಿಕಲಚೇತನರು ಪಡೆದುಕೊಳ್ಳಬೇಕು : ಸಚಿವ ಹಾಲಪ್ಪ ಆಚಾರ್

ಉದಯವಾಹಿನಿ ಯಲಬುರ್ಗಾ : ಪಟ್ಟಣದ ಬಯಲು ರಂಗ ಮಂದಿರದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಹಮ್ಮಿಕೊಂಡಿದ್ದ ದೈಹಿಕ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನಗಳ ಮತ್ತು ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ. ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಅವರು ವಿಕಲಚೇತನರಿಗಾಗಿ ಸರಕಾರದ ವತಿಯಿಂದ ವಿವಿಧ ಸೌಲಭ್ಯವನ್ನು ನೀಡಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ವಿಕಲಚೇತನರು ಎಂಬ ಮನೋಭಾವನೆಯಿಂದ ಹೊರಬಂದು ಸಮಾಜದ ಮುಂಚೂಣಿಯಲ್ಲಿ ಮುಂದೆ ಬರಬೇಕು ಎಂದು ಎಲ್ಲರಿಗೂ ತಿಳಿಸಿದರು. ಅಂಗವೈಕಲ್ಯ ಎಂಬುದು ಶಾಪವೂ ಅಲ್ಲ, ಸಾಧನೆಗೆ ಅಡ್ಡಿಯೂ ಅಲ್ಲ. ಆದರೆ, ವಿಕಲಚೇತನರು ಕೀಳರಿಮೆಯಿಂದ ಹೊರ ಬನ್ನಿ, ಸರ್ಕಾರದಿಂದ ಪಡೆದುಕೊಳ್ಳುವ ಪ್ರತಿ ಯೋಜನೆಯು ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದರು. ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಉಪಾಧ್ಯಕ್ಷ ಶಾಂತಮ್ಮ ಮಾಟೂರು, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ, ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ, ಸಿಡಿಪಿಒ ಸಿಂಧು ಯಲಿಗಾರ, ಜಿಪಂ ಮಾಜಿ ಸದಸ್ಯ ಸಿ.ಎಚ್.ಪಾಟೀಲ್, ತಾಪಂ ಮಾಜಿ ಅಧ್ಯಕ್ಷ ಶಿವಕುಮಾರ್ ನಾಗಲಾಪುರ, ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಸದಸ್ಯ ಶರಣಪ್ಪ ಈಳಿಗೇರ, ಮುಖಂಡರಾದ ಈರಣ್ಣ ಹುಬ್ಬಳ್ಳಿ, ಸಿದ್ದರಾಮೇಶ ಬೇಲೇರಿ, ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿ ಶ್ರೀದೇವಿ ನಿಡಗುಂದಿ, ಎಂಆರ್ ಡಬ್ಲ್ಯೂ ಬಸವನಗೌಡ ಬನ್ನಪ್ಪಗೌಡ್ರ, ಈರಪ್ಪ ಕರೇಕುರಿ, ವೀರಭದ್ರಪ್ಪ ತಮ್ಮಿನಾಳ ಇತರರಿದ್ದರು.

ವರದಿ – ಹುಸೇನಬಾಷ ಮೋತೆಖಾನ

Leave a Reply

Your email address will not be published. Required fields are marked *