ಶನಿವಾರಸಂತೆ ಹಾಗೂ ಸೋಮವಾರಪೇಟೆ ಹಾಗೂ ಕೊಡಗು ಜಿಲ್ಲೆಯ ಎಲ್ಲಾ ಸುದ್ದಿಗಾರರಿಗೆ ಹಾಗೂ ವರದಿಗಾರರಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಾಗೂ ರಾಮನಹಳ್ಳಿ ಗ್ರಾಮಸ್ಥರಿಂದ ಹಾಗೂ ಜೈಭೀಮ್ ಯುವಕ ಸಂಘದಿಂದ ಮನವಿ..
ಶನಿವಾರಸಂತೆ ಕಂದಾಯ ಕಚೇರಿ ಮುಂದೆ ಸೋಮವಾರ ಅಂದರೆ 22/8/2022 ರಂದು ಬೆಳಿಗ್ಗೆ 11 ಗಂಟೆಗೆ ಶನಿವಾರಸಂತೆ ಕಂದಾಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಈ ಪ್ರತಿಭಟನೆ ತಾವುಗಳು ಬಂದು ಸುದ್ದಿ ತಮ್ಮಲ್ಲಿ ಹೃದಯಪೂರ್ವಕ ವಿನಂತಿಸುತ್ತೇವೆ ಶನಿವಾರಸಂತೆಯ ಹೋಬಳಿಗೆ ಸೇರಿದ ರಾಮನಳ್ಳಿ ಗ್ರಾಮದ ಆರ್ ಎಚ್ ಹೊನ್ನಪ್ಪ ಹಾಗೂ ಆರೆಂಜ್ ಪುಟ್ಸಾಮಿ ಈ ಇಬ್ಬರ ಶಾಲಾ ದಾಖಲಾತಿಯಲ್ಲಿ ಹಿಂದೂ ಹೆಗ್ಗಡೆ ಗೌಡ ಎಂದು ದಾಖಲಾಗಿದೆ ಇವರುಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಶನಿವಾರಸಂತೆ ಕಂದಾಯ ಇಲಾಖೆಗೆ ಕೊಟ್ಟು ನಕಲಿ ಜಾತಿ ಪ್ರಮಾಣಪತ್ರ ಮಾಡಿಸಿಕೊಂಡಿರುತ್ತಾರೆ . ನಕಲಿ ಜಾತಿ ಪ್ರಮಾಣಪತ್ರ ಅಂದರೆ ಪರಿಶಿಷ್ಟ ಪಂಗಡ (ಕುರುಬ ಜಾತಿ ಪ್ರಮಾಣ ಪತ್ರ ) ಪಡೆದುಕೊಂಡಿರುತ್ತಾರೆ . ನಕಲಿ ದಾಖಲೆಗಳನ್ನು ಕಂದಾಯ ಇಲಾಖೆಗೆ ಕೊಟ್ಟರು ಸರಿಯಾಗಿ ದಾಖಲೆಗಳನ್ನು ನೋಡದೆ ಶನಿವಾರಸಂತೆ ಕಂದಾಯ ಇಲಾಖೆ ಅಧಿಕಾರಿಗಳಾದ ಹಿಂದಿನ ಗ್ರಾಮ ಲೆಕ್ಕಿಗರಾದ ಜಟ್ಟಪ್ಪ ರವರು ಹಾಗೂ ಇಂದಿನ ಕಂದಾಯ ಪರಿವೀಕ್ಷಕರಾದ ನಂದ ಕುಮಾರ್ ರವರು ಸರಿಯಾಗಿ ದಾಖಲೆಗಳನ್ನು ನೋಡದೆ ಕುರುಬ ಜಾತಿ ಪ್ರಮಾಣಪತ್ರ ಆರ್ ಎಚ್ ಪುಟ್ಸಾಮಿ ಹಾಗೂ ಆರ್ ಎಚ್ ಹೊನ್ನಪ್ಪ ವಿವರಗಳಿಗೆ ಜಾತಿ ಪ್ರಮಾಣ ಪತ್ರ ನೀಡಿದರು . ಹಾಗಾಗಿ ನಕಲಿ ಜಾತಿ ಪ್ರಮಾಣ ಪತ್ರದ ಬಗ್ಗೆ ಕಳೆದ ವರ್ಷ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಾಗೂ ರಾಮನಹಳ್ಳಿ ಗ್ರಾಮಸ್ಥರಿಂದ ಹಾಗೂ ಜೈಭೀಮ್ ಯುವಕ ಸಂಘ ದಿಂದ ಶನಿವಾರಸಂತೆ ಕಂದಾಯ ಪರಿವೀಕ್ಷಕರಾದ ಮಂಜುನಾಥ್ ಅವರಿಗೆ ಮನವಿ ಸಲ್ಲಿಸುತ್ತೇವೆ ಈ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡವರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಈ ನಕಲಿ ದಾಖಲೆಗಳನ್ನು ಕೊಟ್ಟು ಕುರುಬ ಜಾತಿ ಪ್ರಮಾಣಪತ್ರ ಮಾಡಿರುವ ಪ್ರಮಾಣಪತ್ರವನ್ನು ಅಮಾನ್ಯ ಮಾಡಬೇಕು ಹಾಗೂ ಸರಿಯಾಗಿ ದಾಖಲೆ ಕುರುಬ ಜಾತಿ ಪ್ರಮಾಣ ಪತ್ರ ಕೊಟ್ಟ ಅಧಿಕಾರಿಗಳಿಗೆ ಸರಿಯಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶನಿವಾರಸಂತೆ ಕಂದಾಯ ಇಲಾಖೆಗೆ ಹಾಗೂ ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಇದುವರೆಗೂ ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲ . ಕೊಡಗು ಜಿಲ್ಲಾಧಿಕಾರಿಗಳು ಉಪ ವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ತೀರ್ಮಾನ ಕೈಗೊಳ್ಳಿ ಎಂದು ತಿಳಿಸಲಾಗಿತ್ತು ಆದರೆ ಉಪ ವಿಭಾಗಾಧಿಕಾರಿಯವರು ತಮ್ಮನ್ನು ವಿಚಾರಣೆ ನಡೆಸಿ ಜಾತಿ ಪ್ರಮಾಣ ಪತ್ರ ಪಡೆದವರು ಸರಿಯಾಗಿ ದಾಖಲೆಗಳನ್ನು ಕೊಡದೆ ಪ್ರಮಾಣ ಪತ್ರ ಪಡೆದು ಕೊಂಡಿರುತ್ತಾರೆ ಹಾಗಾಗಿ ಉಪ ವಿಭಾಗಾಧಿಕಾರಿಯವರು ಕಂದಾಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಮ್ಮುಖದಲ್ಲಿ ಈ ಜಾತಿ ಪ್ರಮಾಣಪತ್ರದ ಬಗ್ಗೆ ತೀರ್ಮಾನವಾಗಲಿ ಎಂದು ಮಡಿಕೇರಿ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಗೆ ಪತ್ರವನ್ನು ರವಾನೆ ಮಾಡಿದೆ ಆದರೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಸೋಮವಾರಪೇಟೆ ತಹಸಿಲ್ದಾರರು ಕಂಪ್ಲೇಂಟ್ ದಾರರು ಕೊಟ್ಟಂಥ ಹೇಳಿಕೆ ತೆಗೆದುಕೊಳ್ಳದೆ ನಕಲಿ ಜಾತಿ ಪ್ರಮಾಣಪತ್ರ ಪಡೆದಂತಹ ಆರ್ ಎಚ್ ಪುಟ್ಸಾಮಿ ಹಾಗೂ ಆರ್ ಎಚ್ ಹೊನ್ನಪ್ಪ ರವರೆಗೆ ಮಾತ್ರ ನೋಟಿಸ್ ಅವರ ಹೇಳಿಕೆ ಪಡೆದಿರುತ್ತಾರೆ ಆದರೆ ಅವರ ಪರವಾಗಿ ಒಬ್ಬ ನೇ ಒಬ್ಬರು ರಾಮನಹಳ್ಳಿ ಗ್ರಾಮಸ್ಥರು ಸಹಿ ಹಾಕಿರುವುದಿಲ್ಲ ಹಾಗಾಗಿ ಕಂಪ್ಲೇಂಟ್ ದಾರರ ಪರವಾಗಿ ನಿಲ್ಲದೆ ಅಧಿಕಾರಿಗಳನ್ನು ಉಳಿಸಿಕೊಳ್ಳಲು ಎಲ್ಲ ಕುತಂತ್ರಗಳನ್ನು ಮಾಡಿ ಜಾತಿ ಪ್ರಮಾಣಪತ್ರ ಮಾಡಿಸಿಕೊಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳದೆ ಅವರಿಗೆ ನೋಟಿಸ್ ಮಾಡಿ ಅವರ ಹೇಳಿಕೆ ಮಾತ್ರ ಪಡೆದುಕೊಂಡು ಹೋಗಿ ಸೋಮವಾರಪೇಟೆ ತಹಸೀಲ್ದಾರರು ಖುದ್ದಾಗಿ ಜಾತಿ ಪ್ರಮಾಣಪತ್ರ ಪಡೆದು ಮನೆಗೆ ಹೋಗಿ ಹೇಳಿಕೆ ಪಡೆದು ಏಕ ಮುಖವಾಗಿ ರಿಪೋರ್ಟ್ ಹಾಕಲು ನಿರ್ಧಾರ ಮಾಡುತ್ತಾರೆ . ಏಕೆಂದರೆ ಅಧಿಕಾರಿಗಳ ತಲೆದಂಡ ವಾಗುತ್ತದೆ ಎಂದು ಇವರಿಗೆಲ್ಲರಿಗೂ ತಿಳಿದಿರುತ್ತದೆ .. ಅಧಿಕಾರಿಗಳನ್ನು ಉಳಿಸಿಕೊಳ್ಳಲು ಈ ಎಲ್ಲಾ ಕೆಲ್ಸಾ ಆಗಿರುವುದರಿಂದ ಕರ್ನಾಟಕ ರಕ್ಷಣಾ ವೇದಿಕೆಯು ಹಾಗೂ ರಾಮನಹಳ್ಳಿ ಗ್ರಾಮಸ್ಥರು ಹಾಗೂ ಜೈಭೀಮ್ ಯುವಕ ಸಂಘದಿಂದ ಶನಿವಾರಸಂತೆ ಕಂದಾಯ ಇಲಾಖೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ . ಸೋಮುವಾರ ಬೆಳಿಗ್ಗೆ 11 ಗಂಟೆಗೆ ಶನಿವಾರಸಂತೆ ಕಂದಾಯ ಇಲಾಖೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಹಾಗಾಗಿ ಸುದ್ದಿಗಾರರು ಹಾಗೂ ವರದಿಗಾರರು ತಾವುಗಳು ಬಂದು ಈ ಪ್ರತಿಭಟನೆಯ ಸುದ್ದಿ ಮಾಡಿ ನಿಜವಾದ ಫಲಾನುಭವಿಗಳಾದ ಕುರುಬ ರಿಗೆ ನ್ಯಾಯ ದೊರಕಿಸಿಕೊಡುವ .. ತಾವುಗಳು ಬಂದು ಈ ಪ್ರತಿಭಟನೆಯ ಸುದ್ದಿ ಮಾಡಬೇಕಾಗಿ ತಮ್ಮಲ್ಲಿ ವಿನಂತಿ.
ವರದಿ – ಮಹೇಶ ಶರ್ಮಾ