ಮಕ್ಕಳ ಜೀವ ಬದುಕಿಸಿ ಪ್ರಾಣ ತೆತ್ತ ಶಾಲಾ ಬಸ್ ಚಾಲಕನ ಕುಟುಂಬಸ್ಥರಿಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ..
ಸಾಂತ್ವನ ಇಬ್ಬರು ಮಕ್ಕಳ ಶಿಕ್ಷಣಕ್ಕೆ *ವೈಯಕ್ತಿಕವಾಗಿ 2 ಲಕ್ಷ ರೂ. ನೆರವು ಘೋಷಿಸಿದ* ಕರುಣಾಮಯಿ ಮಾಜಿ ಸೈನಿಕನ ಸಾವಿಗೆ ಲಕ್ಷ್ಮಣ ಸವದಿ ಕಂಬನಿ ಅಥಣಿಯಲ್ಲಿ ಇತ್ತೀಚೆಗೆ ಬಣಜವಾಡ ಶಿಕ್ಷಣ ಸಂಸ್ಥೆಯ ಶಾಲೆಯ ಬಸ್ ಹಾಗೂ ಗೂಡ್ಸ್ ವಾಹನದ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಮ್ಮ ಸಮಯ ಪ್ರಜ್ಞೆಯಿಂದ ಹಲವಾರು ವಿದ್ಯಾರ್ಥಿಗಳ ಜೀವ ಕಾಪಾಡಿ, ತಾವು ಸಾವಿಗೆ ಶರಣಾದ ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದ ಮಾಜಿ ಸೈನಿಕ, ಬಸ್ ಚಾಲಕ ಶ್ರೀ ರಘುನಾಥ ನಾಮದೇವ ಅವತಾಡೆ (೪೬) ಅವರ ಮನೆಗೆ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರು ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ದಿ. ೨೨-೦೮-೨೨ರಂದು ಭೇಟಿ ನೀಡಿದರು. ಹಲವಾರು ವರ್ಷಗಳ ಕಾಲ ಸೈನಿಕನಾಗಿ ದೇಶ ಸೇವೆ ಸಲ್ಲಿಸಿ ಮರಳಿ ಗ್ರಾಮಕ್ಕೆ ಬಂದ ನಂತರ ವಿಧಿಯಾಟಕ್ಕೆ ಬಲಿಯಾಗಿರುವುದು ಅತ್ಯಂತ ದುರ್ದೈವದ ಸಂಗತಿ ಎಂದು ಕಂಬನಿ ಮಿಡಿದರು. ಮೃತ ಮಾಜಿ ಯೋಧ ರಘುನಾಥ ಅವರ ಇಬ್ಬರು ಮಕ್ಕಳಾದ ಏಳನೇ ತರಗತಿಯಲ್ಲಿ ಓದುತ್ತಿರುವ ಓಂಕಾರ ಹಾಗೂ ೫ನೇ ತರಗತಿಯಲ್ಲಿ ಓದುತ್ತಿರುವ ವೈಷ್ಣವಿ ಅವರ ಶಿಕ್ಷಣಕ್ಕೆ ಸಹಾಯವಾಗಲು ವೈಯಕ್ತಿಕವಾಗಿ 2 ಲಕ್ಷ ರೂ. ನೆರವು ನೀಡುವುದಾಗಿ ಕುಟುಂಬಸ್ಥರಿಗೆ ತಿಳಿಸಿದರು. ಅಲ್ಲದೆ, ಸರ್ಕಾರದಿಂದಲೂ ಪರಿಹಾರ ಕಲ್ಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಆನಂದರಾವ ದೇಶಪಾಂಡೆ, ಅಥಣಿ ಮಂಡಳ ಬಿಜೆಪಿ ಅಧ್ಯಕ್ಷರಾದ ಶ್ರೀ ಅಣ್ಣಾಸಾಹೇಬ ನಾಯಿಕ ಹಾಗೂ ಕೊಡಗಾನೂರ ಗ್ರಾಮಸ್ಥರು ಇದ್ದರು.
ವರದಿ – ಮಹೇಶ ಶರ್ಮಾ