ಕರ್ನಾಟಕ ನವ ನಿರ್ಮಾಣ ಸೇನೆಯ ಹಲವು ಬೇಡಿಕೆಗಳಿಗೆ ಸ್ಫಂದಿಸಿದ ಮಾನ್ಯ ತಹಶೀಲ್ದಾರ್ ಗುರುರಾಜ್ ಎಂ.

Spread the love

ಕರ್ನಾಟಕ ನವ ನಿರ್ಮಾಣ ಸೇನೆಯ ಹಲವು ಬೇಡಿಕೆಗಳಿಗೆ ಸ್ಫಂದಿಸಿದ ಮಾನ್ಯ ತಹಶೀಲ್ದಾರ್ ಗುರುರಾಜ್ ಎಂ.

ತಾವರಗೇರಾ ಪಟ್ಟಣದ ಪಟ್ಟಣ ಪಂಚಾಯಿತಿ ಕಾರ್ಯಲಯದ ಮುಂದೆ ನಿನ್ನೆಯಿಂದ ಕರ್ನಾಟಕ ನವ ನಿರ್ಮಾಣ ಸೇನೆವತಿಯಿಂದ ಹಮ್ಮಿಕೊಂಡ ವಿವಿದ ಬೇಡಿಕಗಳಿಗೆ ಮಾನ್ಯ ತಹಶೀಲ್ದಾರ್ ಗುರುರಾಜ್ ಎಂ. ಸೂಕ್ತ ಭರವಸೆಯೊಂದಿಗೆ ಸ್ಫಂಧಿಸಿದ್ದಾರೆ. ಜೊತೆಗೆ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಕಾರ್ಯಾನಿರ್ವಹಿಸುತ್ತಿರುವ ಪೌರಕಾರ್ಮಿಕನಾಗಿ ನೇಮಕವಾಗಿರುವ ಗ್ರೂಪ್ ಡಿ ನೌಕರರಾದ ಮರೇಶ ನಾಯಕರವರು ತಮ್ಮ ಮೂಲ ಕೆಲಸವಾದ ಪೌರ ಕಾರ್ಮಿಕ ವೃತ್ತಿ ಮಾಡದೆ. ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ಡಿ ಮತ್ತು ಗ್ರೂಪ್ ಸಿ ದರ್ಜೆಯ ಹುದ್ದೆಯನ್ನು ನಿರ್ವಹಿಸುತ್ತಿದ್ದು. ಇದಕ್ಕೆ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಹಾಗೂ ವಿವಿದ ವಾರ್ಡ ಸದಸ್ಯರೆ ಬೆನ್ನೆಲುಬಾಗಿ ನಿಂತಿರುವುದು ಮೆಲ್ನೋಟಕ್ಕೆ ಸಾಬಿತಾಗಿದೆ ಆದ್ದರಿಂದ ಈಗಾಗಲೇ ಇವರ ವಿರುದ ಮೇಲಾಧಿಕಾರಿಗಳ ಗಮನಕ್ಕೆ ತಂದು, ನೇರವಾಗಿ ದೂರು ಸಲ್ಲಿಸಿದರು ಸಹ, ಯಾವುದೇ ಕ್ರಮ ಕೈಗೊಂಡಿಲ್ಲ. ಆ ಕಾರಣಕ್ಕಾಗಿ  ನಮಗೆ ನ್ಯಾಯ ಸಿಗುವವರೆಗೂ ಪಂಚಾಯಿತಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೆವೆ ಎಂದು ಕ.ನ.ನಿ.ಸೇನೆಯ ಅಧ್ಯಕ್ಷರು ಮಾನ್ಯ ತಹಶೀಲ್ದಾರರವರಿಗೆ ಮನವಿ ಮಾಡಿದಾರು, ಇದಕ್ಕೆ ಸೂಕ್ತವಾಗಿ ಮಾನ್ಯ ತಹಶೀಲ್ದಾರರು ಕೂಡಲೆ ಅವರನ್ನು ಮೂಲ ಹುದ್ದೆಗೆ ಕಳಿಸಿಕೊಡುತ್ತೆವೆ ಎಂದು ಭರವಸೆ ನೀಡಿದರು,

ಅಧಿಕಾರಿ ವರ್ಗಾ ಹಾಗೂ ಸಿಬ್ಬಂದಿ ವರ್ಗಾದವರು ಸಾವರ್ಜನಿಕರಿಗೂ ಹಾಗೂ ಹೋರಾಟಗಾರರಿಗೂ ಮೂಗಿಗೆ ತುಪ್ಪ ಹಚ್ಚಿ ಕಳಿಸುವಲ್ಲಿ ಅತಿ ಬುದ್ದಿವಂತರು, ಸಾರ್ವಜನಿಕರಿಗೂ ಜೊತೆಗೆ ಹೋರಾಟಗಾರರಿಗೆ ಪಟ್ಟಣ ಪಂಚಾಯತ ಕಾರ್ಯಲಯದಲ್ಲಿ ಸ್ಫಂದಿಸಬೇಕು ಎಂದು ಮನವಿ ಮಾಡಿದರು. ಇದರ ಜೊತೆಗೆ ಹಲವು ಬೇಡಿಕೆಗಳಿಗೆ ತಣ್ಣಿರು ಎರಚಿರುವ ಮುಖ್ಯಧಾಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು. ಕರ್ನಾಟಕ ನವ ನಿರ್ಮಾಣ ಸೇನೆಯ ಹೋಬಳಿ ಘಟಕದ ಅಧ್ಯಕ್ಷ ಸಿದ್ದನಗೌಡ್ರು ಪುಂಡಗೌಡ್ರು ತಿಳಿಸಿದರು. ಈ ಎಲ್ಲಾ ಬೇಡಿಕೆಗಳಿಗೆ ಭರವಸೆ ನೀಡುತ್ತ ಪಟ್ಟಣದ ಮುಖ್ಯ ರಾಜ ಕಾಲುವೆಯ ಮೇಲೆ ನೀಮಾರ್ಣಗೊಂಡ ವಾಣಿಜ್ಯ ಮಳಿಗೆ ಹಾಗೂ ತಗಡಿನ ಶೆಡ್ಡುಗಳನ್ನು ಕೂಡಲೇ ತೇರವುಗೊಳಿಸಬೇಕು ಎಂದು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿದರು.

           ಇದರ ಜೊತೆಗೆ 2016 ರಿಂದ ಪಟ್ಟಣದ ಹೃದಯ ಭಾಗವಾಗಿರುವ ಸ.ನಂ,51 ಹಾಗೂ ಸ.ನಂ 52 ಮತ್ತು ಸ.ನಂ 54 ಇದರ ಜೊತೆಗೆ ಮೂಲ ಗೌಂವಠಾಣ ಜಮೀನಿನಲ್ಲಿ ಅತೀಕ್ರಮಿಸಿದವರ ವಿರುದ್ದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಅಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡರವರು ಮಾನ್ಯ ತಹಶೀಲ್ದಾರವರಿಗೆ ಸ್ಥಳ ತೋರಿಸಿ ಆ ಸ್ಥಳದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಿದರು.  ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ ಭರವಸೆ ನೀಡಿದ ಮಾನ್ಯ ತಹಶೀಲ್ದಾರ್ ಸಾಹೇಬರ ನಡೆ ಯಾವ ಕಡೆ ಎಂಬುಹುದು ನಿಗೂಡವಾಗಿದೆ ಯಾವುದಕ್ಕೂ ಕಾದು ನೋಡಬೇಕಾಗಿದೆ ಎಂದು ಸಾರ್ವಜನಿಕರು ಗೂಸುಗಟ್ಟಿದರು.

          ಈ ಸಂಧರ್ಭದಲ್ಲಿ ಪ.ಪಂಚಾಯತಿಯ ಮುಖ್ಯಾಧಿಕಾರಿಯವರಾದ ನಭಿಸಾಬರವರು ಹಾಗೂ ಸರ್ವ ಸದಸ್ಯರು ಭಾಗಿಯಾಗಿದ್ದರು, ಪಟ್ಟಣದ ಪೊಲೀಸ್ ಠಾಣಾಧಿಕಾರಿಯವರಾದ ಶ್ರೀಮತಿ ವೈಶಾಲಿ ಝಳಕಿಯವರು ಹಾಗೂ ಸಿಬ್ಬಂದಿವರ್ಗದವರು, ಪಟ್ಟಣದ ನಾಡ ಕಚೇರಿಯ ಅಧಿಕಾರಿ ವರ್ಗಾ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು. ಹಿರಿಯ ಹೋರಾಟಗಾರರಾದ ಡಿ.ಎಸ್.ಎಸ್. ರಾಜ್ಯ ಸಂಚಾಲಕರಾದ ಆನಂದ ಭಂಡಾರಿ. ಆಮ್ ಆದ್ಮಿ ಪಾರ್ಟಿಯ ಹೋಬಳಿ ಅಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡ, ಬಾಲರಾಜ ಯಾದವ್, ಶ್ಯಾಮೀದಸಾಬ ಮೆಣೇದಾಳ, ಹಾಗೂ ಸರ್ವ ಸದಸ್ಯರು, ಕ.ನ.ನಿ.ಸೇ ಹೋಬಳಿ ಘಟಕ ಅಧ್ಯಕ್ಷರಾ ಸಿದ್ಧನಗೌಡ ಪುಂಡಗೌಡ್ರು  ಹಾಗೂ ಸರ್ವ ಸದಸ್ಯರಾದ ನಬೀಸಾಬ ನವಲಿ. ಸಲ್ಲಿಂ ಪಪಾಯಿ. ಹನುಮೇಶ, ರವಿ. ದೇವಣ್ಣ ಹುನುಗುಂದ, ಕುಮಾರ್ ಗೋಂದಳಿ. ಖಾಜಾಖಾನ್, ನಾಗರಾಜ್. ಹನುಮನಗೌಡ ಕಟ್ಟಿಮನಿ. ವೆಂಕಟೇಶ ಯಾದವ್, ಬಸವರಾಜ ಚಲುವಾದಿ, ವಿಜಯ್. ಇತರರು ಉಪಸ್ಥಿತರಿದ್ದರು,  

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *