ಸದಲಗಾ ಪಟ್ಟಣದಲ್ಲಿ, ಅಕ್ಕಮಹಾದೇವಿ ಬಳಗದ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಅರಿಶಿನ ಕುಂಕುಮ ಅದ್ದೂರಿ ಕಾರ್ಯಕ್ರಮ…..
ಸದಲಗಾ ಪಟ್ಟಣದಲ್ಲಿ, ಅಕ್ಕಮಹಾದೇವಿ ಬಳಗದ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಅರಿಶಿನ ಕುಂಕುಮ ಕಾರ್ಯಕ್ರಮದಲ್ಲಿ, ಸದಲಗಾ ಗೀತಾಶ್ರಮ ಮಠದ ಪರಮಪೂಜ್ಯ ಡಾ.ಶ್ರದ್ದಾನಂದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಭಾಗವಹಿಸಿ, ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ಪ್ರತಿಪಾದಕಿ ಕನ್ನಡದ ಪ್ರಥಮ ಕವಯಿತ್ರಿ ಅಕ್ಕಮಹಾದೇವಿ ಮಹಿಳಾ ಕುಲಕ್ಕೆ ಸರ್ವಕಾಲಕ್ಕೂ ಸ್ಫೂರ್ತಿ. ಶ್ರಾವಣ ಮಾಸದ ವಿಶೇಷ ಸಂದರ್ಭದಲ್ಲಿ ಮಹಿಳೆಯರನ್ನು ಗೌರವಿಸುವ ಸಲುವಾಗಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಅರಿಶಿನ ಕುಂಕುಮ ಕಾರ್ಯಕ್ರಮವನ್ನು ಪ್ರಥಮ ಬಾರಿಗೆ ಆಯೋಜಿಸಿದ ಅಕ್ಕಮಹಾದೇವಿ ಬಳಗದ ಕಾರ್ಯ ಅಭಿನಂದನಾರ್ಹ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಾದೇವ ಮಂದಿರ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಕ್ಕಮಹಾದೇವಿ ಬಳಗ ಸದಸ್ಯರು, ಪುರಸಭೆ ಸದಸ್ಯರು, ಮಹಿಳೆಯರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ