ಕೋಟಿಗಟ್ಟಲೇ ಹಣ ನೀರಂತೇ ಹರಿಯುವುದು..!ಮೈಸೂರು ದಸರ ಹಬ್ಬದ ಸಡಗರ ಸಂಭ್ರಮ…….
ಮೈಸೂರು ದಸರಾ ಹಬ್ಬದ ಮಹೋತ್ಸವ ಎಷ್ಟೊಂದು ಸುಂದರ ಅದೆಷ್ಟೊಂದು ಸಡಗರ ಸಂಭ್ರಮಾಚರಣೆ. ದೇಶ, ವಿದೇಶಿಗರು ಆಗಮಿಸಿ ಸಂತಸದಾಯಕ ವಾತಾವರಣವನ್ನು ಕಣ್ಮನ ತುಂಬಿಕೊಂಡು ಸವಿಯುವರು. ಸಾಲು ಸಾಲು ಜನಜಂಗುಳಿಯ ತೋರಣ, ಐತಿಹಾಸಿಕ ನೆಲೆಗಟ್ಟನ್ನು ನೆನಪಿಸುವ ಅಭೂತಪೂರ್ಣವಾದ ಅರ್ಥಬದ್ಧ ಕಾರ್ಯಕ್ರಮ. ಮೈಸೂರು ಭಾಗದ ಆಧಿದೇವತೆಯಾದ ಚಾಮುಂಡಿಯು ಜಂಬೂಸವಾರಿಯ ಆಗಮನವನ್ನು ಸೂಸುವುದೇ ಬಲು ಮನೋಹರ. ದಸರಾವನ್ನು ಎಷ್ಟುಂದು ಪ್ರಶಂಸಿಸಿ ವರ್ಣಿಸಿದರೂ ಸಾಲದು. ಅದಕ್ಕೆ ತನ್ನದೆಯಾದ ವಿಶ್ವವಿಖ್ಯಾತಿ ದಸರ ವೈಭವದ ಛಾಯೆಯನ್ನು ಹೊಂದಿದೆ ಎನ್ನುವುದು ಅಷ್ಟೆ ಪ್ರತೀತಿ. ಇತಿಹಾಸ ಪುರಾಣವನ್ನು ಹೊಂದಿರುವ ದಸರ ಕ್ರಿ.ಶ ೧೬೪೦ ರಲ್ಲಿ ಶ್ರೀರಂಗ ಪಟ್ಟಣದಲ್ಲಿ ರಾಜ ಒಡೆಯರ್ ಅವರಿಂದ ಆರಂಭವಾಗಿದ್ದು, ಇಂದಿಗೂ ಸರ್ಕಾರದ ಸುರ್ಪದಿಯಲ್ಲಿ ಅಮೋಘವಾದ ಹಬ್ಬವಾಗಿ ನಡೆಯುತ್ತಿರುವದು ಖುಷಿಯ ಸಂಗತಿ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ಮೈಸೂರು, ಈ ದಸರದಲ್ಲಿ ಅನೇಕ ಬಗೆಗಳಾಗಿ ಕಂಗೊಳಿಸುವ ಪ್ರಮುಖವಾಗಿ ಮಾರುತಗಳ ಪಾತ್ರ. ಈಗಾಗಲೇ ಜಂಬೂ ಸವಾರಿಗೆ ಮಾರುತಗಳಿಗೆ ತಾಲೀಮುಗಳನ್ನು ನಡೆಸುತ್ತಿದ್ದು, ಸಾಕಷ್ಟು ಮುಂಜಾಗ್ರತೆಯ ಕ್ರಮವಾಗಿ ಈಗಾಗಲೇ ಅಭಿವೃದ್ದಿಯ ಬಗ್ಗೆ ಎಲ್ಲಡೆ ಚರ್ಚೆಯಾಗುತ್ತಿದೆ. ಉತ್ತಮವಾಗಿ ನಡೆಯಲಿ ಎಂಬುವುದೇ ಕರ್ನಾಟಕ ನಾಡಿನ ಜನತೆಯ ಆಶಯ. ಕಳೆದ ೨ವರ್ಷಗಳಿಂದ ಕೋವೀಡ್‌ನಿಂದ ಕಂಗೆಟ್ಟಿರುವ ಜನತೆ ಹಾಗೂ ಸರ್ಕಾರಕ್ಕೆ ಈ ವರ್ಷ ಉತ್ತಮ ನಿರೀಕ್ಷೆಯನ್ನು ಹೊಂದಿದೆ ಎಂದೇ ಹೇಳಬಹುದು.ಆದರೆ ಸರ್ಕಾರ ಇದಕ್ಕಾಗಿ ವ್ಯಯಿಸುವ ಕೋಟಿ ಗಟ್ಟಲೆ ಹಣ ಅಭಿವೃದ್ದಿಯ ಮಹತ್ವಕಾಂಕ್ಷಗಳನ್ನು ಹೊಂದಿವೆ ಎನ್ನುವುದು ಅಷ್ಟೇ ಸ್ಪಷ್ಟ ಚಿತ್ರಣ. ಬೆಳಕಿನ ಅಲಂಕಾರದಿಂದ ಹಿಡಿದು ರಸ್ತೆ ಅಭಿವೃದ್ದಿ, ಯುವದಸರ, ಆಹಾರ ಮೇಳ, ಅರಮನೆಯ ಅಂಗಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಹೀಗೆ ಹತ್ತು ಹಲವಾರು ಕಡೆಗಳಿಂದಲೂ ಉತ್ತಮ ಲಾಭದ ನಿರೀಕ್ಷೆಯನ್ನು ಹೊಂದಿದೆ. ನಿರೀಕ್ಷೆ ಮಟ್ಟಕ್ಕೂ ಮೀರಿದ ಹೆಚ್ಚಿನ ರಾಜ್ಯದ ಹೊರ ಹಾಗೂ ಸ್ಥಳೀಯ ಪ್ರವಾಸಿಗರಲ್ಲದೆ ವಿದೇಶಿ ಪ್ರವಾಸಿಗರೂ ಬರುತ್ತಾರೆ. ಈಗಾಗಲೇ ಎಲ್ಲ ಹೋಟೆಲ್‌ಗಳು ಆನ್ ಲೈನ್ ಮೂಲಕ ರಿಯಾಯಿತಿ ದರದಲ್ಲಿ ಮುಂಗಡ ಬುಕ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಮತ್ತು ಮಾಡಿದೆ. ಅಲ್ಲದೆ ಮೈಸೂರು ಅರಮನೆ ವಿಕ್ಷಣೆ, ಜಂಬೂಸವಾರಿ ವಿಕ್ಷಣೆ ನೋಡಲು ಟಿಕೇಟ್ ದರದಲ್ಲಿ ಹೆಚ್ಚಿನ ಲಾಭವು ಇದೆ. ದಸರೆಯಿಂದ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಆದಾಯವಿದೆ, ಆದರೆ ಇಲ್ಲಿ ಯಾವಾಗಲೂ ಉದ್ಬವಿಸುವ ಸಮಸ್ಯೆಯೆಂದರೆ ದಸರಾಗೆ ಬಿಡುಗಡೆಯಾಗುವ ಕೋಟಿಗಟ್ಟಲೆ ಹಣವನ್ನು ಯಾವ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ವ್ಯಯಿಸಲಾಗುತ್ತದೆ ಎಂದು ಅಧಿಕೃತ ಪಟ್ಟಿ ಸಂಬಂಧಿಸಿದ ಸಮಿತಿ ಬಿಡುಗಡೆಗೊಳಿಸಬೇಕಿದೆ. ಯುವ ದಸರಾಗೆ ಪ್ರಸ್ತುತ ಸಾಕಷ್ಟು ಹಣವನ್ನು ಬಿಡುಗಡೆ ಮಾಡಲಾಗಿದ್ದು, ಇಷ್ಟೋಂದು ದುಂದು ವೆಚ್ಚ ಮಾಡಿ ಗಾಯಕರನ್ನು ಕರೆಸುವ ಬದಲು, ನಮ್ಮಲ್ಲಿನ ಯುವ ಗಾಯಕರಿಗೆ ಆದ್ಯತೆ ನೀಡಿದರೆ ದಸರ ಇನ್ನಷ್ಟು ಅರ್ಥಪೂರ್ಣವಾದಿತು ಎಂಬುದು ಮೈಸೂರಿನ ಜನತೆಯ ಹೊಕ್ಕೊರಲಿನ ಆಗ್ರಹ. ಇನ್ನು ಸ್ವಚ್ಚತೆಯ ಮತ್ತು ರಸ್ತೆಯ ವಿಷಯಕ್ಕೆ ಬರುವುದಾದರೆ..? ದಸರ ಮಹೋತ್ಸವದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಯಾವುದೇ ರೀತಿಯ ತೊಂದರೆ ಆಗದಂತೆ ಸರ್ಕಾರ ಮತ್ತಷ್ಟು ತೀರ್ವವಾಗಿ ನೋಡಿಕೊಳ್ಳುವುದರ ಜೊತೆಗೆ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಪ್ರಕಟಿಸಿ ಅವುಗಳ ಅನುಷ್ಚಾನಕ್ಕೆ ಹೆಚ್ಚಿನ ಆದ್ಯತೂ ನೀಡುವ ಅತ್ಯಗತ್ಯವಿದೆ. ದಸರದಲ್ಲಿ ಭಾಗವಹಿಸುವ ಕಲಾತಂಡಗಳಿಗೆ ಸರಿಯಾದ ವ್ಯವಸ್ಥೆಯನ್ನು ನೀಡದಿರುವುದು ಇವೆಲ್ಲವನ್ನು ಈ ಭಾರಿ ದಸರದಲ್ಲಿ ಕೋಟಿಗಟ್ಟಲೆ ಹಣದಿಂದ ಸರಿದೋಗಿಸುವುದೇ ಎನ್ನುವುದು ಪ್ರತಿಯೊಬ್ಬರ ಅನಿಸಿಕೆಯಾಗಿದೆ. ಆದರೆ ಪ್ರತಿಬಾರಿ ಮೈಸೂರು ದಸರಾ ಹಬ್ಬಕ್ಕೆ ಸರ್ಕಾರದಿಂದ 15 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುತ್ತದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ ಎಂಬುದು ಸ್ಪಷ್ಟ. ಬನ್ನಿ ನೀವು ಕೂಡ ದಸರ ಹಬ್ಬದ ಮೆರುಗನ್ನು ಹೆಚ್ಚಿಸಿ ಮನ, ಮನೆಯವರನ್ನು ಸಂತಸದ ವಾತಾವರಣದಲ್ಲಿ ತೇಲಿಸೋಣ. ಅರ್ಥಪೂರ್ಣ ಹಬ್ಬಕ್ಕೆ ಎಲ್ಲರೂ ಕೈ ಜೋಡಿಸೋಣ. ದಸರವನ್ನು ಯಶದತ್ತ ಕೊಂಡೊಯ್ಯೋಣ.
ವಿಶೇಷ ಲೇಖನ – ಜ್ಯೋತಿ ಜಿ, ಮೈಸೂರು.