ಬೆಂಗಳೂರಿನಲ್ಲಿ ಸಂಯುಕ್ತ ಹೋರಾಟ–ಕರ್ನಾಟಕ (SKM) ಕೋರ್ ಕಮೀಟಿ ಸಭೆ ಜರುಗಿತು.
ಸ್ನೇಹಿತರೇ ದಿನಾಂಕ 24-08-2022 ರಂದು ಬೆಂಗಳೂರಿನಲ್ಲಿ ಸಂಯುಕ್ತ ಹೋರಾಟ-ಕರ್ನಾಟಕ (SKM) ಕೋರ್ ಕಮೀಟಿ ಸಭೆ ಜರುಗಿತು. ವಿದ್ಯುತ್ ಕಾಯ್ದೆ ಗೆ ತಿದ್ದುಪಡಿ (ಕರೆನ್ಸಿ ಹಾಕಿದರೆ ಕರೆಂಟ್) ತರಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ರೂಪಿಸುವ ಕುರಿತು ಚರ್ಚಿಸಲಾಯಿತು. ಉದ್ದೇಶಿತ ಕಾಯ್ದೆಯ ಅಪಾಯದ ಕುರಿತು ರೈತರಿಗೆ ಮನವರಿಕೆ ಮಾಡಬೇಕಾಗಿದೆ.ಮುಂದಿನ ಲೋಕಸಭೆ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ಪಡೆಯಲು ತಯಾರಿ ನಡೆಸಿದೆ. ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ 4 ರಾಜ್ಯಗಳು ಕಾಯ್ದೆಯನ್ನು ತಿರಸ್ಕರಿಸಿವೆ. ಬೊಮ್ಮಾಯಿ ಸರ್ಕಾರ ಕಾಯ್ದೆಯನ್ನು ವಿರೋಧಿಸಲು ಒತ್ತಡ ಮಾಡಬೇಕಾಗಿದೆ. ತಿದ್ದುಪಡಿ ಕಾಯ್ದೆ ಒಪ್ಪಿಕೊಂಡರೆ, ರಾಜ್ಯದಲ್ಲಿ 45 ಲಕ್ಷ ಪಂಪಶಟ್ ಬಳಕೆ ಮಾಡುವ ರೈತರು ಮತ್ತು ಭಾಗ್ಯ ಜ್ಯೋತಿ ಸೌಲಭ್ಯ ಪಡೆಯುವ 50 ಲಕ್ಷ ಕುಟುಂಬಗಳು ತೊಂದರೆ ಅನುಭವಿಸಬೇಕಾಗುತ್ತದೆ. ಇದಲ್ಲದೆ ಸಣ್ಣ ಕೈಗಾರಿಕೆ ಮತ್ತು ಗೃಹ ಬಳಕೆಯ ಮಧ್ಯಮ ವರ್ಗದ ಕುಟುಂಬಗಳು ವಿದ್ಯುತ್ ಗೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಮೋದಿಯವರು ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳುತ್ತಿದ್ದರಲ್ಲ. ಕಾಯ್ದೆ ತಿದ್ದುಪಡಿ ಮತ್ತು ಬೆಲೆ ಹೇರಿಕೆ, ಅಂಬಾನಿ ಅದಾನಿಗೆ ಭಾರಿ ಲಾಭದ ಒಳ್ಳೆಯ ದಿನಗಳು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಯುವಜನರು ನಿರಂತರವಾಗಿ ಹೋರಾಡುವುದರೊಂದಿಗೆ, ಮೋದಿ ಸರ್ಕಾರವನ್ನು ಸೋಲಿಸುವ ಪ್ರತಿಜ್ಞೆ ಮಾಡಬೇಕಾಗಿದೆ. ಡಿ.ಹೆಚ್.ಪೂಜಾರ ಸಂಯುಕ್ತ ಹೋರಾಟ- ಕರ್ನಾಟಕ (SKM).
ವರದಿ – ಸಂಪಾದಕೀಯಾ