!!ಗುರಬಸವಲಿಂಗಶರಣ!!【ಅ.ಸ.ಷ.】
ಆತ್ಮೀಯರೇ, ಶರಣ ಮಾಸದ ಕೊನೆಯ ಸೋಮವಾರ ದಿನಾಂಕ ೨೨-08-೨೦೨೨ ರಂದು ಸುಕ್ಷೇತ್ರ ಕಾರವಾರ ನಗರದಲ್ಲಿ ಬೆಳಿಗ್ಗೆ ಜರುಗಿದ “ಅನುಭಾವ ಸಂಗಮ” ಕಾರ್ಯಕ್ರಮವು ಬಂಗಾರಪ್ಪ ಕಾಲೋನಿಯ “ಸಿದ್ಧಬಸವೇಶ್ವರ” ಅನುಭವ ಮಂಟಪದಲ್ಲಿ ಸಂತೋಷ ಸಡಗರದಿಂದ ಸಂಪನ್ನಗೊಂಡಿದೆ. ಅಂದು ಶರಣ ಸಿದ್ದಯ್ಯಸ್ವಾಮಿ ಚೌಕಿಮಠ ಗೋನಾಳ ಅವರೊಂದಿಗೆ ಅವರ ಸಹೋದರರ ಕುಟುಂಬವು ಪ್ರತಿವರ್ಷದಂತೆ ಸ್ಥಳೀಯ ಆಯುಷ ಇಲಾಖೆಯ ಮುಖ್ಯಸ್ಥರಾದ ಶರಣ ಡಾ!! ಮಲ್ಲಿಕಾರ್ಜುನ ಹಿರೇಮಠ ಮಸ್ಕಿ ಅವರ ನೇತೃತ್ವದಲ್ಲಿ ಒಂದಾಗಿ ಸಕಲ ಸಿದ್ದತೆಯನ್ನು ಮಾಡಿದ್ದಾರೆ. ಹಾಗೆಯೆ ಅಂದು ಸಮಾರಂಭದಲ್ಲಿ ಅಕ್ಕಪಕ್ಕದ ಎಲ್ಲಾ ಜನಸಮುದಾಯದ ಜನಾಸಕ್ತರು ಭಾಗವಹಿಸಿದ್ದು, ನಿಜಕ್ಕೂ “ಇವನಮ್ಮವ” ಎಂಬ ಅಪ್ಪ ಸಂಗನಬಸವಣ್ಣ ಅವರ ಪವಿತ್ರ ವಚನವು ನೆನಪಿಗೆ ತರುವಂತೆ ಆಯೋಜನೆಗೊಂಡಿದೆ. ಅಂದು ಅಲ್ಲಮಪ್ರಭೂ ಅನುಭಾವ ಪೀಠ, ಕಾಂತಾವರ, ಕಾರ್ಕಳ, ಉಡುಪಿಯ ಶರಣ ಜಗನ್ನಾಥಪ್ಪ ಪನಸಾಲೆ ಜನವಾಡಾ ಅವರು ಬಸವಾದಿ ಶರಣರ ಅನೇಕ ಪವಿತ್ರ ವಚನಗಳನ್ನು ಉಲ್ಲೇಖಿಸುತ್ತಾ, ಅಪ್ಪ ಸಂಗನಬಸವಣ್ಣ ಅವರು ಹಾಕಿಕೊಟ್ಟ ಪಥವನ್ನು ನಾವೆಲ್ಲರೂ ಅನುಸರಿಸಿದರೆ ಮಾತ್ರ ಈ ಜಗತ್ತಿನ ಭಾವಿ ಜನಾಂಗವು ಸುರಕ್ಷಿತವಾಗಿ ಬದುಕಲು ಸಾಧ್ಯವೆಂಬ ಮಾತನ್ನು ಹಲವಾರು ದೃಷ್ಟಾಂತಗಳೊಂದಿಗೆ ಹೇಳಿದರು. ನಂತರ ಮಹಾಪ್ರಸಾದದೊಂದಿಗೆ ಕಾರ್ಯಕ್ರಮವು ಮಂಗಳವಾಗಿ ಮುಕ್ತಾಯಗೊಂಡಿತ್ತು, ಶರಣಾರ್ಥಿ. 💐💐💐 ಅಧ್ಯಕ್ಷರು ಅನುಭಾವ ಸಂಗಮ ಮಹಾಜಗದ್ಗುರು ಬಸವಣ್ಣ ಚಾರಿಟೇಬಲ್ ಟ್ರಷ್ಟ(ರಿ) ಬೆಂಗಳೂರು.
ವರದಿ – ಮಹೇಶ ಶರ್ಮಾ