ಹಿರೇವಂಕಲಕುಂಟಾ ಗ್ರಾಮದಲ್ಲಿ ಸ್ವಚ್ಛ ಶುಕ್ರವಾರ ಕಾರ್ಯಕ್ರಮಕ್ಕೆ ಚಾಲನೆ : ಜಿಪಂ ಪಿಡಿ ಹೇಳಿಕೆ…..

Spread the love

ಹಿರೇವಂಕಲಕುಂಟಾ ಗ್ರಾಮದಲ್ಲಿ ಸ್ವಚ್ಛ ಶುಕ್ರವಾರ ಕಾರ್ಯಕ್ರಮಕ್ಕೆ ಚಾಲನೆ : ಜಿಪಂ ಪಿಡಿ ಹೇಳಿಕೆ…..

ಯಲಬುರ್ಗಾ : ಹಿರೇವಂಕಲಕುಂಟಾ ಗ್ರಾಮ ಪಂಚಾಯತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಚಿಲುಮೆ-2 ಪ್ರಯುಕ್ತ ಸ್ವಚ್ಛ ಶುಕ್ರವಾರ ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಕಾರ್ಯಕ್ಕೆ ಜಿಲ್ಲಾ ಪಂಚಾಯತಿ ಮಾನ್ಯ ಯೋಜನಾ ನಿರ್ದೇಶಕರಾದ ಟಿ. ಕೃಷ್ಣಮೂರ್ತಿ ಅವರು ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬ ಮಹಿಳೆಯರು ತಮ್ಮ ಮನೆ ಸ್ವಚ್ಛವಾಗಿಟ್ಟುಕೊಳ್ಳುವ ಜತೆಗೆ ಅಂಗಳ, ಮನೆಯ ಹಿತ್ತಲ, ಓಣಿ  ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾಗೇ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಮಾಡಬೇಕು ಆಗ ಮಾತ್ರ ಗ್ರಾಮ ನೈರ್ಮಲ್ಯದಿಂದಿರಲು ಸಾಧ್ಯ ಎಂದರು. ಶ್ರಮದಾನವನ್ನು ಗ್ರಾಮದ ಹಿರಿಯರು, ಗ್ರಾಪಂ ಸದಸ್ಯರು, ಮಾಜಿ ಸದಸ್ಯರು, ಮಹಿಳೆಯರು, ಸ್ವಸಹಾಯ ಸಂಘದವರು ಹಾಗೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮುಂದೆ ನಿಂತು ಕೆಲಸ ಮಾಡಬೇಕು. ಚಿಲುಮೆ ಅಭಿಯಾನ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು. ಇದೇ ವೇಳೆ ಸ್ವಚ್ಛವಾಹಿನಿಗೆ ಮಹಿಳಾ ಸ್ವಸಹಾಯ ಸಂಘದ ಮಹಿಳೆ ವಾಹನ ಚಾಲಕರನ್ನಾಗಿ ನೇಮಿಸಿ ಅವರಿಗೆ ವಾಹನದ ಕಿಲಿ ವಿತರಣೆ ಮಾಡಿದರು. ಸದರಿ ಸ್ವಚ್ಛತಾ ಶ್ರಮದಾನದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ಸಂತೋಷ ಪಾಟೀಲ್ ಬಿರಾದಾರ, ಸಹಾಯಕ ನಿರ್ದೇಶಕರಾದ ನಿಂಗನಗೌಡ, ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ಹುಸೇನಬೀ ಅತ್ತಾರ, ಉಪಾಧ್ಯಕ್ಷರಾದ ಶಿವಮೂರ್ತೆಪ್ಪ ಹರಿಜನ, ಸದಸ್ಯರಾದ ಆನಂದ ಈಳಗೇರ, ಗಾಳೆಪ್ಪ ಓಜನಹಳ್ಳಿ, ಉಮೇಶ ಗೌಡ್ರ, ಬಾಲಪ್ಪ ಗಚ್ಚಿನಮನಿ, ನಿಂಗಪ್ಪ ತೊನಸಿನಹಾಳ,ಮಂಜಿನಾಥ ಶಾಸ್ತ್ರಿಮಠ, ಆಶಾ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಆರೋಗ್ಯ ಕೇಂದ್ರದ ಸಿಬ್ಬಂದಿ, ಗ್ರಾ.ಪಂ ಸಿಬ್ಬಂದಿ ಹಾಜರಿದ್ದರು.

ವರದಿ – ಹುಸೇನಬಾಷ ಮೋತೆಖಾನ್

Leave a Reply

Your email address will not be published. Required fields are marked *