ಕ ಕಾ ನಿ ಪತ್ರಕರ್ತರ ಸಂಘದಿಂದ ಹಿರಿಯ ಪತ್ರಕರ್ತರಿಗೆ ಸನ್ಮಾನ…..
ಯಲಬುರ್ಗಾ : ಸಮಾಜದ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಪ್ರಮುಖ ಪಾತ್ರವಾಗಿದೆ. ಅಂತಹ ಕೋವಿಡ್ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸಗಳಾಗಿ ಹೋರಾಡಿದ್ದು ಶ್ಲಾಘನೀಯ ಎಂದು ತಾಲೂಕಿನ ತಹಸೀಲ್ದಾರ ಶ್ರೀಶೈಲ ತಳವಾರ ಹೇಳಿದರು. ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದ ಸಯುಂಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಹಿರಿಯ ಪತ್ರಕರ್ತರಿಗೆ ಹಾಗೂ ಸಾಧಕರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ಪತ್ರಕರ್ತರ ಜೀವನ ಈ ಹಿಂದೆ ಕಠಿಣವಾಗಿತ್ತು ಆಧುನಿಕ ಮಾದ್ಯಮದ ರೀತಿ ಸೋಶಿಯಲ್ ಮೀಡಿಯಾಗಳು ಇರಲಿಲ್ಲ, ಪತ್ರಕರ್ತರಿಗೆ ಸಾಕಷ್ಟು ಬೆದರಿಕೆಗಳು ಬರುತ್ತವೆ, ಪತ್ರಕರ್ತರನ್ನು ಪ್ರತಿಯೊಬ್ಬರು ಗೌರವಿಸಬೇಕು, ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಪತ್ರಕರ್ತರು ನಮ್ಮ ನಡುವಿನ ಹಿರೋಗಳಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ಯುವ ಪತ್ರಕರ್ತರರು ರಾಜ್ಯಮಟ್ಟದ ಮಾದ್ಯಮದಲ್ಲಿ ಪ್ರವೇಶ ಮಾಡಿ ಸಾಕಷ್ಟು ಅವಕಾಶಗಳಿವೆ, ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಯಶಸ್ಸು ಗಳಿಸಿ ಎಂದರು. ತಾಪಂ ಇಒ ಸಂತೋಷ ಬಿರಾದರ ಪಾಟೀಲ ಮಾತನಾಡಿ ಇದೊಂದು ವಿಶೇಷ ಕಾರ್ಯಕ್ರಮವಾಗಿದೆ. ಹಿರಿಯರ ಪತ್ರಕರ್ತರ ಶ್ರಮ ಅಪಾರವಾಗಿದೆ. ಹಿರಿಯ ಪತ್ರಕರ್ತರಿಗೆ ಆಗಿನ ಕಾಲದಲ್ಲಿ ಟೆಕ್ನಾಲಜಿ ಇರಲಿಲ್ಲ ಅಂತಹ ಕಠಿಣ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರ ಬೆಳಸಿಕೊಂಡು ಬಂದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಪತ್ರಿಕೆಗಳು ಉಪಯುಕ್ತವಾಗಿವೆ, ಸ್ಥಳೀಯ ಸುದ್ದಿಗಳಿಗಿಂತ ರಾಜ್ಯ,ರಾಷ್ಟ್ರ ಮಟ್ಟದ ಸುದ್ದಿಗಳು ಬಹಳ ಅನುಕೂಲವಾಗಿವೆ. ಆರ್ಟಿಕಲ್ ಗಳನ್ನು ಓದುವದರಿಂದ ಜೀವನವೇ ಬದಲಾಗುತ್ತದೆ. ಮಕ್ಕಳಿಗೆ ಓದುವ ಹವ್ಯಾಸ ಬೆಳಸಬೇಕು ಪತ್ರಕರ್ತರು ಓದುಗರ ಹಸಿವು ನೀಗಿಸುತ್ತಾರೆ ಎಂದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ ಸಮಾಜದ ಅಂಕು ಡೊಂಕು ತಿದ್ದುವಲ್ಲಿ ಪತ್ರಕರ್ತರ ಕೊಡುಗೆ ಅಪಾರ, ಪತ್ರಕರ್ತರ ಸಂಘದವರು ಶಾಲಾ-ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ತಾಲೂಕಿನಲ್ಲಿ ಹಿರಿಯ ಪತ್ರಕರ್ತರನ್ನು ಚಿಕ್ಕವರಿಂದಲೇ ನೋಡಿದ್ದೇನೆ, ಪತ್ರಕರ್ತರ ಕಾರ್ಯ ನೆನಪಿಸಿಕೊಳ್ಳಬೇಕು, ಪತ್ರಕರ್ತರು ತಾಲೂಕು,ಜಿಲ್ಲೆ,ರಾಜ್ಯದ ಬಗ್ಗೆ ಅಭಿಮಾನ ಇಟ್ಟುಕೊಂಡು ಕೆಲಸ ಮಾಡುತ್ತಾರೆ ಎಂದರು. ಯುವ ಮುಖಂಡ ಅಂದಾನಗೌಡ ಪಾಟೀಲ ಮಾತನಾಡಿದರು. ಕಕಾನಿಪ ಸಂಘದ ಅಧ್ಯಕ್ಷ ಶಿವಮೂರ್ತಿ ಇಟಗಿ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯ ಘಟಕದ ಸೂಚನೆಯಂತೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ತಾಲೂಕಿನಲ್ಲಿ ಹಿರಿಯ ಪತ್ರಕರ್ತರು ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ.ಯುವ ಪತ್ರಕರ್ತರು ಹಿರಿಯರ ಹಾದಿಯಲ್ಲಿ ನಡೆಯಬೇಕಿದೆ ಎಂದರು. ಹಿರಿಯ ಪತ್ರಕರ್ತರಾದ ಕೊಟ್ರಪ್ಪ ತೋಟದ, ವೀರಣ್ಣ ನಿಂಗೋಜಿ, ಪ್ರಾಚಾರ್ಯ ವಿ.ಬಿ.ಹನುಮಶೆಟ್ಟಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮಲ್ಲು ಮಾಟರಂಗಿ ಪ್ರಾಸ್ತವಿಕವಾಗಿ ಮಾತನಾಡಿದರು. ಮುಖಂಡ ಶಿವಪುತ್ರಪ್ಪ ಮಲ್ಲಿಗವಾಡ, ಜಿಲ್ಲಾ ಘಟಕದ ಸದಸ್ಯರಾದ ವಿ.ಎಸ್. ಶಿವಪ್ಪಯ್ಯನಮಠ, ಸಂಘದ ಗೌರವ ಅಧ್ಯಕ್ಷ ಇಮಾಂಸಾಬ ಸಂಕನೂರು, ಉಪಾಧ್ಯಕ್ಷ ಚಂದ್ರು ಮರದಡ್ಡಿ, ಪತ್ರಕರ್ತರದ ಸ.ಶರಣಪ್ಪ ಪಾಟೀಲ, ಪಾಲಾಕ್ಷಪ್ಪ ತಿಪ್ಪಳ್ಳಿ, ಭೀಮಪ್ಪ ಹವಳಿ, ದೇವರಾಜ ದೊಡ್ಡಮನಿ, ಮಹಾಂತೇಶ ಚಲವಾದಿ, ನೀಲಪ್ಪ, ಶ್ಯಾಮೀದಸಾಬ, ವಿರೇಶ, ದೊಡ್ಡಬಸಪ್ಪ, ಸೇರಿದಂತೆ ಶಾಲಾ ಶಿಕ್ಷಕರು, ಸಿಬ್ಂದಿಗಳು, ವಿದ್ಯಾರ್ಥಿಗಳು ಇತರರು ಇದ್ದರು.
ವರದಿ – ಹುಸೇನಬಾಷ ಮೋತೆಖಾನ್