ಯೋಗಾಸನದಲ್ಲಿ ಗಿನ್ನಿಸ್‌ ದಾಖಲೆಗೆ ಅಕ್ಷರ್‌ ಯೋಗ ಪ್ರಯತ್ನ…..

Spread the love

ಯೋಗಾಸನದಲ್ಲಿ ಗಿನ್ನಿಸ್ದಾಖಲೆಗೆ ಅಕ್ಷರ್ಯೋಗ ಪ್ರಯತ್ನ…..

– ಯೋಗ ಆಸನಗಳಲ್ಲಿ ವಿಶ್ವ ದಾಖಲೆಗಳನ್ನು ಬರೆಯುವರಿಗಾಗಿ ‘ಬೆಂಗಳೂರು ಯೋಗೋತ್ಸವ’ಬೆಂಗಳೂರು ಆಗಸ್ಟ್‌ 26: ಅಕ್ಷರ ಯೋಗ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು ಯೋಗಾಸನದಲ್ಲಿ ಗಿನ್ನಿಸ್‌ ದಾಖಲೆ ನಿರ್ಮಿಸಲು ಸಿದ್ದತೆಗಳನ್ನು ಮಾಡಿಕೊಂಡಿದೆ. ಆಗಸ್ಟ್  27, ಶನಿವಾರದಂದು ‘ಬೆಂಗಳೂರು ಯೋಗೋತ್ಸವ’ವನ್ನು ಆಯೋಜಿಸಿದ್ದು, ಯೋಗಾಸನಗಳಲ್ಲಿ ವಿಶ್ವದಾಖಲೆ ಬರೆಯಲು ಆಸಕ್ತಿಯುಳ್ಳವರು ಈ ಬೆಂಗಳೂರು ಯೋಗೋತ್ಸವದಲ್ಲಿ ಭಾಗವಹಿಸಬಹುದಾಗಿದೆ. ಯಲಹಂಕ ಬಳಿಯಿರುವ ಪಡುಕೋಣೆ-ದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ ನಲ್ಲಿ ನಡೆಯಲಿರುವ ಈ ಯೋಗ ಫೆಸ್ಟಿವಲ್‌ ನಲ್ಲಿ 250 ಯೋಗಪಟುಗಳು ಗಿನ್ನಿಸ್‌ ವಿಶ್ವ ದಾಖಲೆ ಸಾಧಿಸುವ ಪ್ರಯತ್ನ ಮಾಡಲಿದ್ದಾರೆ. ಹೆಚ್ಚಿನ ಜನರು ಧನುರಾಸನ ಮಾಡುವುದು (ಎರಡು ನಿಮಿಷಗಳ ಬೋ ಪೋಸ್) ಮತ್ತು ವಲ್ಡ್ ಬುಕ್ ಆಫ್ ರೆಕಾರ್ಡ್ ಗಾಗಿ 1 ನಿಮಿಷಕ್ಕೆ ಚಕ್ರಾಸನ/ಚಕ್ರ ಭಂಗಿ ಮಾಡಲಿದ್ದಾರೆ.  ಹಿಮಾಲಯನ್ ಸಿದ್ಧರಾದ ಅಕ್ಷರ್ ಜಿ ಅವರ ನೇತೃತ್ವದಲ್ಲಿ ಯೋಗ ಆಸನಗಳು, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಪಠಣ, ಧ್ಯಾನ, ಮುದ್ರಾ ಅಭ್ಯಾಸ ದ ಜೊತೆಗೆ 90 ನಿಮಿಷಗಳ ನಿರಂತರ ಅಭ್ಯಾಸ ಇದರಲ್ಲಿ ವಿಶೇಷವಾಗಿರಲಿದೆ. ಸ್ಥಳ: ಟೀಮ್ ಅಕ್ಷರ ಯೋಗ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಪಡುಕೋಣೆ-ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ ದಿನಾಂಕ: ಆಗಸ್ಟ್ 27,2022, ಶನಿವಾರ ಸಮಯ:ಬೆಳಿಗ್ಗೆ 9ರಿಂದ

ವರದಿ – ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *