ಕೋವಿಡ್-19 ಲಸಿಕೆ ಕಾರ್ಯಕ್ರಮ : ಕೊವ್ಯಾಕ್ಸೀನ್ ಪಡೆದ ತಾವರಗೇರಾ ಪತ್ರಕರ್ತರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಪತ್ರಕರ್ತರಿಗೂ ಕೋವಿಡ್-19 ಲಸಿಕೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಎರಡನೇ ದಿನವಾದ ಇಂದು (ಮೇ 11) ಸಹ ಮಾಧ್ಯಮ ಪ್ರತಿನಿಧಿಗಳು ಕೊವ್ಯಾಕ್ಸೀನ್ ಪಡೆದುಕೊಂಡರು. ಕೋವಿಡ್-19ರ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪತ್ರಕರ್ತರಿಗೆ ರಾಜ್ಯ ಸರ್ಕಾರವು “ಫ್ರಂಟಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಿರುವ ಪ್ರಯುಕ್ತ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸೋಮವಾರದಿಂದ (ಮೇ 10 ರಿಂದ) ಒಂದು ವಾರದವರೆಗೆ ಪತ್ರಕರ್ತರಿಗೆ ಕೋವಿಡ್-19 ವ್ಯಾಕ್ಸೀನ್ ಹಾಕಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಾಧ್ಯಮ ಪ್ರತಿನಿಧಿಗಳೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಜಿ.ಸುರೇಶ ಅವರು ಸಹ ಕೊವ್ಯಾಕ್ಸೀನ್ ಹಾಕಿಸಿಕೊಂಡು, ಎಲ್ಲಾ ಮಾಧ್ಯಮ ಮಿತ್ರರು ಜಿಲ್ಲಾಸ್ಪತ್ರೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊAಡು ತಪ್ಪದೇ ವ್ಯಾಕ್ಸೀನ್ ಪಡೆದುಕೊಳ್ಳುವಂತೆ ಮನವಿ ಮಾಡಿದರು. ವರದಿ – ಸುಭಾಸ್ ಚಂದ್ರ ಜುಮಲಾಪೂರ್