ದಲಿತ ಮುಖಂಡರುಗಳು ಮತ್ತು ಪ್ರಗತಿಪರರ ಮೇಲೆ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರಿಗೆ ಮನವಿ ನೀಡಲಾಯಿತು.
ಅಂಬೇಡ್ಕರ್ ಅವರಿಗೆ ಅವಮಾನಿಸಿದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡನನ್ನು ಸೇವೆಯಿಂದ ವಜಾಗೊಳಿಸುವದು, ದಲಿತ ಮುಖಂಡರುಗಳು ಮತ್ತು ಪ್ರಗತಿಪರರ ಮೇಲೆ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳ ಕುರಿತು ಒತ್ತಾಯಿಸಲಾಯಿತು. ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಪೋಲಿಸ್ ರು ತಮ್ಮ ವಾಹನದಲ್ಲಿ ಮುಖ್ಯಮಂತ್ರಿಗಳಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅನೇಕ ಸ್ನೇಹಿತರು ಭಾಗವಹಿಸಿದ್ದರು. ಕೊಪ್ಪಳ ನಗರದಲ್ಲಿ ನಡೆದ ಧರಣಿ ಹೋರಾಟದ ವಿಡಿಯೋ ಮತ್ತು ಪೋಟೋಗಳನ್ನು ಕೂಡಾ ಕಳುಹಿಸಲಾಗಿದೆ…ಹೆಚ್ಚು ಹೆಚ್ಚು ಸ್ನೇಹಿತರು ನಿಮ್ಮ ಫೇಸ್ ಬುಕ್ ಮತ್ತು ವ್ಯಾಟ್ಸಾಫ್ ಗ್ರೂಪ್ ಗಳಿಗೆ ಕಳುಹಿಸಿ ಸರ್ಕಾರಕ್ಕೆ ಒತ್ತಾಯಿಸಲು ವಿನಂತಿಸಲಾಗಿದೆ. ಡಿ.ಹೆಚ್.ಪೂಜಾರ.
ವರದಿ – ಸಂಪಾದಕೀಯ