ಉತ್ತಮ ಕೆಲಸಗಳನ್ನು ಮಾಡಿದರೆ ಜನರ ಮನಸ್ಸಿನಲ್ಲಿರುತ್ತಾರೆ ಎಂಬುದಕ್ಕೆ ಇಲ್ಲಿ ಸೇರಿರುವ ಸಹಸ್ರಾರು ರೈತ ಮಹಿಳೆಯರೇ ಸಾಕ್ಷಿ. #ಪವಿತ್ರ ರಾಮಯ್ಯಅಧ್ಯಕ್ಷರು #ಭದ್ರಾ ಅಚ್ಚು/ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ.
ಶಿವಮೊಗ್ಗ: ಉತ್ತಮ ಕೆಲಸಗಳನ್ನು ಮಾಡಿದರೆ ಜನರ ಮನಸ್ಸಿನಲ್ಲಿರುತ್ತಾರೆ ಎಂಬುದಕ್ಕೆ ಇಲ್ಲಿ ಸೇರಿರುವ ಸಹಸ್ರಾರು ರೈತ ಮಹಿಳೆಯರೇ ಸಾಕ್ಷಿ. ನೀವೆಲ್ಲಾ ಇಲ್ಲಿ ಸ್ವಯಂ ಪ್ರೇರಿತವಾಗಿ ಒಗ್ಗೂಡಿದ್ದೀರ ಎಂದರೆ ಅರ್ಥ ನಮ್ಮ ಗ್ರಾಮಾಂತರ ಶಾಸಕರ ಕಾರ್ಯವೈಖರಿ ಎಷ್ಟಿದೆ ಎಂಬುದು ತಿಳಿಯುತ್ತದೆ ಎಂದು ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಅಧ್ಯಕ್ಷರು ಶ್ರೀಮತಿ ಕೆ.ಬಿ ಪವಿತ್ರರಾಮಯ್ಯ ಅವರು ತಿಳಿಸಿದರು. ಅವರು ನಗರದ ಭದ್ರಾವತಿ ತಾಲ್ಲೂಕು ಆನವೇರಿ ಶ್ರೀ ಹಿರಿಮಾವುರದಮ್ಮ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀಮತಿ ರತ್ನಾಕುಮಾರಿ.ಕೆ ಮತ್ತು ಮಾನ್ಯ ಗ್ರಾಮಾಂತರ ಶಾಸಕರಾದ ಶ್ರೀ ಕೆ.ಬಿ ಅಶೋಕ್ ನಾಯ್ಕ್ ರವರ ವಿವಾಹ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, 25 ವರ್ಷ ತುಂಬಿದ ಅವರ ದಾಂಪತ್ಯ ಜೀವನಕ್ಕೆ ಹರಸಿ, ಆಶೀರ್ವದಿಸಿ, ಮಾತನಾಡಿದರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವು ಅತ್ಯಧಿಕ ಕೃಷಿ ಅವಲಂಬಿತ ಕ್ಷೇತ್ರವಾಗಿದ್ದು ಕೃಷಿಗೆ ಬೇಕಾದಂತಹ ನೀರಾವರಿ ಯೋಜನೆಗಳ ಕಾರ್ಯರೂಪಕ್ಕೆ ತರುವಂತಹ ಹಾಗೂ ಗ್ರಾಮಾಂತರ ಕ್ಷೇತ್ರಕ್ಕೆ ಒಳಪಡುವ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಜಿಲ್ಲೆಯ ಹೆಮ್ಮೆಯ ಸಂಸದರಾದ ಶ್ರೀ ಬಿ.ವೈ ರಾಘವೇಂದ್ರ ಅವರು ಗ್ರಾಮಾಂತರ ಕ್ಷೇತ್ರಕ್ಕೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ನೆರವಾಗಿದ್ದಾರೆ ಎಂದು ತಿಳಿಸಿದರು. ಗ್ರಾಮಾಂತರ ಭಾಗದಲ್ಲಿ ನಮ್ಮ ಸಂಸದರು, ಹಾಗೂ ಗ್ರಾಮಾಂತರ ಶಾಸಕರ ಕಾರ್ಯ ವೈಖರಿಯಿಂದಾಗಿ ಸಮಾಜವನ್ನು ಕಟ್ಟುವ ಕೆಲಸ ಯಾವುದೇ ತೊಡಕುಗಳಿಲ್ಲದೆ ನಡೆಯುತ್ತಿವೆ. ಮುಂದೆಯೂ ಕೂಡ ಇದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವಕಾಶ ನೀಡಿ, ಅವರಿಗೆ ಶಕ್ತಿ ತುಂಬುವ ಕೆಲಸ ನಿಮ್ಮಿಂದ ಆಗಬೇಕು ಎಂದು ತಿಳಿಸಿದರು.ವಿವಾಹ ರಜತ ಮಹೋತ್ಸವ ವೇದಿಕೆ ಕಾರ್ಯಕ್ರಮವನ್ನು ಮಾನ್ಯ ಸಂಸದರು ಸನ್ಮಾನ್ಯ ಶ್ರೀ ಬಿ.ವೈ ರಾಘವೇಂದ್ರ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾನ್ಯ ಮಾಜಿ ವಿಧಾನ ಪರಿಷತ್ ಸದಸ್ಯರು ಶ್ರೀ ಭಾನು ಪ್ರಕಾಶ್ ರವರು, ಮಾನ್ಯ ಬಿಜೆಪಿ ವಿಭಾಗೀಯ ಸಂಚಾಲಕರು ಶಿವಮೊಗ್ಗ ಶ್ರೀ ಗಿರೀಶ್ ಪಟೇಲ್ ರವರು, ಮಾನ್ಯ ಅಧ್ಯಕ್ಷರು ಬಿಜೆಪಿ ಹೊಳೆಹೊನ್ನೂರು ಮಂಡಲ ಸನ್ಮಾನ್ಯ ಶ್ರೀ ಮಂಜುನಾಥ್ ರವರು, ಮಾನ್ಯ ಭದ್ರಾ ಕಾಡಾ ಪ್ರಾಧಿಕಾರ ನಿರ್ದೇಶಕರಾದ ಶ್ರೀ ಷಡಾಕ್ಷರಪ್ಪ ರವರು, ಆನವೇರಿ ಗ್ರಾ.ಪಂಚಾಯತಿ ಮಾನ್ಯ ಅಧ್ಯಕ್ಷರಾದ ಶ್ರೀಮತಿ ಸುಜಾತರವರು ಮತ್ತು ಪಕ್ಷದ ಮುಖಂಡರು ಹಾಜರಿದ್ದರು. #ಪವಿತ್ರ_ರಾಮಯ್ಯಅಧ್ಯಕ್ಷರು #ಭದ್ರಾಅಚ್ಚುಕಟ್ಟುಪ್ರದೇಶಾಭಿವೃದ್ಧಿ_ಪ್ರಾಧಿಕಾರ.
ವರದಿ – ಮಹೇಶ ಶರ್ಮಾ