ತಾವರಗೇರಾ ಪಟ್ಟಣದಲ್ಲಿಂದು ಪೂಜ್ಯಶ್ರೀ ರುದ್ರಯ್ಯ ತಾತನವರ ಶ್ರೀಮಠದಲ್ಲಿ ಶಿವನಿಗೆ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಪೂಜಾ ಸಮಾರಂಭವು ಅದ್ದೂರಿಯಾಗಿ ನೆರವೇರಿತು.
ತಾವರಗೇರಾ ಪಟ್ಟಣದ ಎಲೆಮರೆಯ ಕಾಯಂತಿದ್ದು ಭಕ್ತರ ಸರ್ವ ಕಷ್ಟಗಳನ್ನ ನಿವಾರಣೆ ಮಾಡುತ್ತಾ ಭಕ್ತರು ಕೊಟ್ಟ ಅಲ್ಪಕಾಣಿಕೆಯಲ್ಲಿ ದೇವರಿಗೆ ಸ್ವಲ್ಪ ತೆಗೆದಿಟ್ಟು ಭಕ್ತಿಯಿಂದ ತಾವರಗೇರಾ ಪಟ್ಟಣದ ದರೋಜಿ ಶ್ರೀ ದಿವಂಗತ ವೆಂಕಣ್ಣ ಶ್ರೆಷ್ಟಿ ಇವರ ಸ್ಮರಣಾರ್ಥ ಇವರು ಮಕ್ಕಳು ಶ್ರೀಮಠ ಹಾಗೂ ದೇವಸ್ಥಾನ ನಿರ್ಮಾಣಕ್ಕಾಗಿ ಭೂದಾನವನ್ನು ಕೊಟ್ಟ ಸ್ಥಳದಲ್ಲಿ ಇಪ್ಪತ್ತೇರಡು ವರ್ಷದಿಂದ ಸತತವಾಗಿ ಶ್ರಾವಣ ಮಾಸದಲ್ಲಿ ಶ್ರೀಮಠದಲ್ಲಿರುವ ವರದ ಮಲ್ಲಿಕಾರ್ಜುನ ಶಂಕರಲಿಂಗ ಸ್ವಾಮಿಗೆ ಪ್ರತಿ ದಿನ ಅಭಿಷೇಕ ಪೂಜೆ ನೆರವೇರಿದ್ದು ಭಕ್ತರ ಫಲಪ್ರದ ಸಿದ್ದಿಗಾಗಿ ಮಹಾಪ್ರಸಾದವು ಕೂಡ ಆಗುತ್ತದೆ ಇಂಥ ಮಹಿಮಕರವಾದ ಮಹಾದೇವಸ್ಥಾನ ನಮ್ಮ ತಾವರಗರಾ ಪಟ್ಟಣದ ಸರ್ವಭಕ್ತರ ಮಾರ್ಗದರ್ಶಕರಾದ ಪೂಜ್ಯಶ್ರೀ ರುದ್ರಯ್ಯ ತಾತನವರ ಶ್ರೀಮಠದಲ್ಲಿ ಇರುವ ಶಿವನಿಗೆ ಇಂದು ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಪೂಜಾ ಸಮಾರಂಭವು ಅದ್ದೂರಿಯಾಗಿ ನೆರವೇರಿತು. ಈ ಎಲ್ಲಾ ಪೂಜಾ ಕಾರ್ಯಕ್ರಮವನ್ನು ಪ್ರತಿದಿನ ಶ್ರೀರುದ್ರಯ್ಯ ತಾತನವರ ಕಿರಿಯ ಪುತ್ರರಾದ ಪೂಜ್ಯಶ್ರೀ ಮಹೇಶ್ವರ ತಾತನವರು ಶಿವಯೋಗಿ ಶರಣರು ನೆರವೇರಿಸಿದರು. ಈ ಪೂಜಾ ಕಾರ್ಯಕ್ರಮದಲ್ಲಿ ಬೆಂಗಳೂರು ಭಕ್ತರು ಹಳಿಯಾಳಭಕ್ತರು ಧಾರವಾಡ, ಶಿವಮೊಗ್ಗ ಜಿಲ್ಲೆ ಹುಂಸ, ಬೆಳಗಾವಿ, ತಾವರಗೇರಾ ಪಟ್ಟಣದ ಸರ್ವಭಕ್ತರು ಪಾಲ್ಗೊಂಡು ಪೂಜಾ ಸಮಾರಂಭವನ್ನು ಯಶಸ್ವಿಗೊಳಿಸಿದರು,
ಇನ್ನೊಂದು ವಿಶೇಷವಾಗಿ ಪೂಜೆ ನೇರವೆರಿಸುವ ಸಂದರ್ಭದಲ್ಲಿ ದೇವರ ಕೃಪಾರ್ಶಿವಾದದಿಂದ ಹೂ ಕಾಣಿಕೆಯಾಗಿ ನೀಡಿದ ಕ್ಷಣ ಅದ್ಭುತವಾಗಿತ್ತು. ಪ್ರತಿದಿನ ಪೂಜೆಯಲ್ಲಿ ಪಾಲ್ಗೊಂಡ ಭಕ್ತರಿಗೆಲ್ಲ ಆ ಭಗವಂತನ ಅವರವರ ಇಷ್ಟಾರ್ಥವನ್ನು ಕರುಣಿಸಿ ಕಾಪಾಡಲಿ ಎಂದು ನಮ್ಮ ತಾವರಗೇರಾ ನ್ಯೂಸ್ ಪತ್ರಿಕೆ ಹಾಗೂ ವೆಬ್ ಬಳಗದವತಿಯಿಂದ ಕೇಳಿಕೊಳ್ಳುತ್ತೇವೆ. ತಾವು ಬನ್ನಿ ಪ್ರತಿ ವರ್ಷ ಪೂಜೆಯಲ್ಲಿ ಪಾಲ್ಗೊಂಡು ಗುರುಗಳ ಮತ್ತು ದೇವರ ಕೃಪೆ ಅನುಗ್ರಹಕ್ಕೆ ಪಾತ್ರರಾಗಿರಿ.
ವರದಿ – ಸಂಪಾದಕೀಯ