ಕಿಲ್ಲಾರಹಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ನಾರಿನಾಳ ಗ್ರಾಮ ಹಾಗೂ ಹಲವು ಗ್ರಾಮಗಳಲ್ಲಿ ಅಭಿವೃದ್ದಿ ಮರಿಚಿಕೆ.

Spread the love

ಕಿಲ್ಲಾರಹಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ನಾರಿನಾಳ ಗ್ರಾಮ ಹಾಗೂ ಹಲವು ಗ್ರಾಮಗಳಲ್ಲಿ ಅಭಿವೃದ್ದಿ ಮರಿಚಿಕೆ.

ಹೈದ್ರಾಬಾದ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಬರುವ ಕಿಲ್ಲಾರಹಟ್ಟಿ ಗ್ರಾಮವು ಕೊಪ್ಪಳ ಜಿಲ್ಲೆಯ ಸರದ್ದಿನಲ್ಲಿ ಬರುವ ಜಿಲ್ಲೆಯ ಕೊನೆಯ ಗ್ರಾಮ. ಈ ಗ್ರಾಮವು ಮೊದಲು ಜುಮಲಾಪುರ ಮಂಡಳಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿದ್ದು ನಂತರ ಇದು ಗ್ರಾಮ ಪಂಚಾಯತಿಯನ್ನು ಹೊಂದಿತು. ಈ ಗ್ರಾಮ ಪಂಚಾಯತಿಯು ಜಿಲ್ಲಾ ಕೇಂದ್ರದಿಂದ 84 ಕಿ.ಮೀ. ತಾಲೂಕಾ ಕೇಂದ್ರದಿಂದ 34 ಕಿ.ಮೀ ದೂರವಿದ್ದು ಸದರಿ ಗ್ರಾಮ ಪಂಚಾಯತಿಯ 8 ಗ್ರಾಮಗಳ ಪೈಕಿ 3 ತಾಂಡಗಳನ್ನು ಒಳಗೊಂಡಿದೆ ಸದರಿ ಗ್ರಾಮ  ಪಂಚಾಯತಿ ಸಮಾರು 7800 ಜನಸಂಖ್ಯೆಯನ್ನ ಒಳಗೊಂಡಿದ್ದು ಆ ಗ್ರಾಮದ ಜನಸಂಖ್ಯೆಗೆ ತಕ್ಕಂತೆ ಒಟ್ಟು 26 ಸದಸ್ಯರನ್ನು ಒಳಗೊಂಡಿದೆ ಈ ಪಂಚಾಯತಿ ವ್ಯಾಪ್ತಿಯಲ್ಲಿ ಹಲವಾರು ಜನಾಂಗದ ಜನರು ವಾಸಿಸುತಿದ್ದು ಅದರಲ್ಲಿ ಪ್ರಮುಖವಾಗಿ ಪಜಾತಿ ಮತ್ತು ಪ.ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಿಗೂ ಸಮಾಂತರದಲ್ಲಿದೆ. ಈ ಗ್ರಾಮದ ಪುರ್ವ ದಿಕ್ಕಿನಲ್ಲಿ ಜಲಾನಯನ ಕೇರೆಯಿದ್ದು ಅದು ಸಿಂಧನೂರ ತಾಲುಕಿನ 20ಹಳ್ಳಿಗಳಿಗೆ ನೀರಾವರಿ ಹೊಂದಿರುತ್ತದೆ. ಇಷ್ಟೆಲ್ಲಾ ಅನುಕೂಲವಿದ್ದರು ಕಿಲ್ಲಾರಹಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಹಲವು ಗ್ರಾಮಗಳಲ್ಲೊಂದಾದ ನಾರಿನಾಳ ಗ್ರಾಮದಲ್ಲಿ ಅಭಿವೃದ್ದಿ ಎನ್ನುವುದು ಮರಿಚಿಕೆಯಾಗಿದೆ. ಜೊತೆಗೆ 2 ಆರ್  ಓ ಪಾಟಿಂಟ್ ಇದ್ದರು ಸಹ ಸರಿಯಾದ ಸಮಯಕ್ಕೆ ನೀರು ಬರುತ್ತಿಲ್ಲ ೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು. ಕೆಲವು ಗ್ರಾಮಗಳಲ್ಲಿ ಸ್ವಚ್ಛಭಾರತ ಅಭಿಯಾನ ಎನ್ನುವುದು ಮರಿಚಿಕೆಯಾಗಿದೆ. ಸ್ವತಂತ್ರ್ಯ ಬಂದು 75 ವರ್ಷಗಳು ಕಾಲ ಕಳೇದರು ಮೂಲಭೂತ ಸೌಕರ್ಯಗಳೆ ಇಲ್ಲದಂತಾಗಿದೆ.

ಕೆಲವು ಗ್ರಾಮಗಳಲ್ಲಿ ಸಾರ್ವಜನಿಕರೆ ಮುಂದಾಗಿ ಅಂದರೆ ನಾರಿನಾಳ ಗ್ರಾಮದಲ್ಲಿ ನಾಲ್ಕನೇ ದಿನದ ಸ್ವಚ್ಛ ಭಾರತ ಹಾಗೂ ಸಮಾಜ ಸೇವೆ ಅಭಿಯಾನ. ನಮ್ಮ ಮನೆ ಸ್ವಚ್ಛವಾಗಿದ್ದರೆ ನಮ್ಮ ಮನೆಯವರು ಸ್ವಚ್ಛವಾಗಿರುತ್ತಾರೆ. ಹಾಗೆ ಮೊದಲು ನಾವು ಶುದ್ಧವಾಗಿ ಸುತ್ತ ಮುತ್ತಲಿನ ಪರಿಸರವನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ದೊಡ್ಡಬಸುವ ತಳವಾರ ರವರು ಮನವಿ ಮಾಡಿದರು. ಗ್ರಾಮದಲಿ cc road  ಹಾಗೂ  ಇನ್ನೂ ಹತ್ತು  ಹಲವು   ಕಾಮಗಾರಿ   ಮಾಡುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೆವೆ. ಯಾವುದೇ ರೀತಿಯಿಂದ ಸ್ಫಂಧನೆವಿಲ್ಲ, ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ನನ್ನ ಎಲ್ಲಾ ಗೆಳೆಯರು  ಹಾಗೂ ಊರಿನ ಹಿರಿಯರು ಹಾಗೂ ಬಂದು ಮಿತ್ರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಕ್ಕೆ ಧನ್ಯವಾದಗಳು ತಿಳಿಸಿದರು.

ವರದಿ – ಉಪ್ಪಳೇಶ ವಿ.ನಾರಿನಾಳ

 

Leave a Reply

Your email address will not be published. Required fields are marked *