ಮತದಾರರ ಪಟ್ಟಿಗೆ ಆಧಾರ್ ಜೋಡಣೆ ಪ್ರಗತಿಪರಿಶೀಲನಾ ಸಭೆಯಲ್ಲಿ : ತಾ ಪಂ ಇಒ ಸಂತೋಷ ಬಿರಾದಾರ ಸೂಚನೆ….

Spread the love

ಮತದಾರರ ಪಟ್ಟಿಗೆ ಆಧಾರ್ ಜೋಡಣೆ ಪ್ರಗತಿಪರಿಶೀಲನಾ ಸಭೆಯಲ್ಲಿ : ತಾ ಪಂ ಇಒ ಸಂತೋಷ ಬಿರಾದಾರ ಸೂಚನೆ….

ಯಲಬುರ್ಗಾ : ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಕುರಿತು ತಾಲೂಕಿನ 22 ಗ್ರಾಮ ಪಂಚಾಯಿತಿಯ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಕಾರ್ಯದರ್ಶಿಗಳು ಕರವಸೂಲಿಗಾರರಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಲಾಯಿತು. ತಾ ಪಂ ಇಒ ಸಂತೋಷ್ ಪಾಟೀಲ್ ಬಿರಾದಾರ್ ಅವರು ಮಾತನಾಡಿ. ಸಭೆಯಲ್ಲಿದ್ದ ಎಲ್ಲರಿಗೂ ವೋಟರ್ ಹೆಲ್ಪ್ ಲೈನ್ ಮೂಲಕ ಆಧಾರ್ ನೋಂದಣಿ ಮಾಡಿಸಿದ್ದರು. ಭಾರತ ಚುನಾವಣಾ ಆಯೋಗವು ಮತದಾರರ ಗುರುತಿಗೆ ಆಧಾರ್ ದತ್ತಾಂಶವನ್ನು ಜೋಡಣೆ ಮಾಡಲು ಮತ್ತು ದೃಢೀಕರಿಸಲು ಸ್ವಯಂಪ್ರೇರಿತವಾಗಿ ಮತದಾರರಿಂದ ಆಧಾರ್ ದತ್ತಾಂಶವನ್ನು ಸಂಗ್ರಹಣೆ ಮಾಡುವ ಸಂಬಂಧ ನಿರ್ದೇಶನಗಳನ್ನು ನೀಡಿರುತ್ತದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯಲ್ಲಿ ನೊಂದಾಯಿತರಾದ ಎಲ್ಲಾ ಮತದಾರರ ನನ್ನ ಅಧಿಕಾರಿಗಳಿಗೆ ತಮ್ಮ ಆಧಾರ್ ಸಂಖ್ಯೆಯನ್ನು ಸ್ವಯಂಪ್ರೇರಿತವಾಗಿ ತಿಳಿಸುವ ಮೂಲಕ ಮತದಾರರ ಗುರುತಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಸಬೇಕಾಗಿ ಇರುತ್ತದೆ. ಈ ಬಗ್ಗೆ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳು ಇವರು ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿದಿನ ಒಟ್ಟು ಮತದಾರರ ಸಂಖ್ಯೆ ಶೇ.10 ರಷ್ಟು ಮತದಾರರ ಆಧಾರ್ ಜೋಡಣೆ ಕಾರ್ಯ ಕೈಗೊಳ್ಳಲು ನಿರ್ದೇಶನ ನೀಡಿರುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ ಜಿಲ್ಲಾ ತಾಲೂಕುಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶಿಸಲಾಗಿದೆ ಹಾಗೆ ಎಲ್ಲಾ ಗುರುತಿನ ಚೀಟಿ ದಾರರನ್ನು ಆಧಾರ್ ಲಿಂಕ್ ಮಾಡಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಗೀತಾ ಅಯ್ಯಪ್ಪ. ತಾಲೂಕ ಐ ಇ ಸಿ ಸಂಯೋಜಕರಾದ ಶರಣಪ್ಪ ಹಳ್ಳಿಕೇರಿ. ಯೋಜನ ನಿರ್ದೇಶಕರಾದ ಶಿವರಾಜ. ಅಕೌಂಟ್ ಹಜರತಲಿ ಎಲ್ಲಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿ – ಹುಸೇನಬಾಷ ಮೋತೆಖಾನ್

Leave a Reply

Your email address will not be published. Required fields are marked *