ಮತ ಬ್ಯಾಂಕ್‌ಗಾಗಿ ರಾಜಕೀಯ ಪಕ್ಷಗಳಿಂದ ಕೋಮು ಗಲಭೆ : ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಸ.ಶರಣಪ್ಪ ಪಾಟೀಲ್…..
ಯಲಬುರ್ಗಾ : ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೋಮು ಗಲಭೆಗಳಿಗೆ ಕಾಂಗ್ರೇಸ್, ಬಿ.ಜೆ.ಪಿ. ಪಕ್ಷಗಳೇ ಕಾರಣ ಹಾಗೂ ತಮ್ಮ ಮತ ಬ್ಯಾಂಕ್ ಹಿತಾಶಕ್ತಿಗಾಗಿ ಕೋಮು ಗಲಭೆ ಸೃಷ್ಟಿಸಿ ಶಾಂತಿ, ಸೌಹಾರ್ಧತೆಯ ನೆಲೆಬೀಡಾಗಿದ್ದ ಕರ್ನಾಟಕದಲ್ಲಿ ಇಂದು ಸಾವಿರಾರು ಜನರ ನಡುವೆ ವೈರತ್ವ ಉಂಟಾಗಿ ರಾಜ್ಯದಲ್ಲಿ ದಿನ ನಿತ್ಯ ಸಾಮ ರಸ್ಯವನ್ನು ಹಾಳಾಗುವ ರೀತಿ ಈ ಎರಡು ರಾಷ್ಟ್ರೀಯ ಪಕ್ಷಗಳು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ಜನ ಕಲ್ಯಾಣ ವೇದಿಕೆಯ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಸ.ಶರಣಪ್ಪ ಪಾಟೀಲ್ ಕರಮುಡಿ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಮಾಧ್ಯಮದವರೊಂದಿಗೆ ಈ ರೀತಿ ಗಲಭೆಗಳು ಆದರೆ ಬಿಜೆಪಿಗೆ ಹೆಚ್ಚಿನ ಮತ ಬರಲಿದೆ. ಇನ್ನು ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‌ಗೂ ಇದು ಗೊತ್ತಿದೆ ಎಂದು ಕಿಡಿಕಾರಿದರು. ಕರ್ನಾಟಕ ಎಂದರೇ ಇಡೀ ದೇಶದಲ್ಲಿಯೇ ಶಾಂತಿ, ಸೌಹಾರ್ಧತೆ ನೆಲೆಬಿಡಾಗಿತ್ತು. ಆದರೆ ಕೆಲ ಇತ್ತೀಚೆಗೆ ರಾಜ್ಯದಲ್ಲಿ ಕಾಂಗ್ರೇಸ್, ಬಿ.ಜೆ.ಪಿ ಯವರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದು, ಇದರಿಂದ ಅಮಾಯಕ ಯುವ ಜನತೆ ಧರ್ಮದ ಅಮುಲು ಹಚ್ಚಿಕೊಂಡು ಇಂದು ಕೋಮು ಗಲಭೆ ಮಾಡುತ್ತಿದ್ದು ಇದರಿಂದ ಕೆಲ ಅಮಾಯಕ ಜನರು ಕೊಲೆಯಾಗುತ್ತಿದ್ದಾರೆ. ಮುಂಬರುವ ದಿನಮಾನಗಳಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಬಿ.ಜೆ.ಪಿ. ಇನ್ನಾದರೂ ಅಧರ್ಮಾಧಾರಿತ ರಾಜಕಾರಣ ಮುಂದುವರೆದರೇ ನಮ್ಮ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಜನ ಕಲ್ಯಾಣ ವೇದಿಕೆಯ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಸ.ಶರಣಪ್ಪ ಪಾಟೀಲ್ ಇವರು ಎಚ್ಚರಿಸಿದ್ದಾರೆ.
ವರದಿ – ಹುಸೇನಬಾಷ ಮೋತೆಖಾನ್