ಜುಮಲಾಪೂರ ಗ್ರಾಮದ ಯುವಕರು ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಸನ್ಮಾನ್ಯ ಶ್ರೀ ದೊಡ್ಡನಗೌಡ ಪಾಟೀಲ್ ಸಮ್ಮುಖದಲ್ಲಿ ಕಮಲಕ್ಕೆ ಜೈ ಎಂದ ಯುವಕರು…
ತಾವರಗೇರಾ ಹೋಬಳಿಯ ಜುಮಲಾಪೂರ ಗ್ರಾಮದ 10 ಕ್ಕೂ ಹೆಚ್ಚು ಯುವಕರು ಕುಷ್ಟಗಿ ಪಟ್ಟಣದಲ್ಲಿ ಸ್ವಯಂ ಪ್ರೇರಿತವಾಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಸಾಹೇಬರ ನಾಯಕತ್ವವನ್ನು ಮೆಚ್ಚಿ ಬಿಜೆಪಿ ಪಕ್ಷವನ್ನು ಸೇರಿಕೊಂಡರು. ಈ ಸಮಯದಲ್ಲಿ ಪ್ರತಿಯೊಬ್ಬ ಯುವಕರಿಗೆ ಪಕ್ಷದ ಶಾಲು ಹಾಕುವ ಮುಖಾಂತರ ಪಕ್ಷಕ್ಕೆ ಪ್ರೀತಿಯಿಂದ ಬರಮಾಡಿಕೊಂಡರು. ಈ ಸಂಧರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷರಾದ ಉಮೇಶ್ ಯಾದವ್ ರವರು. ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಪಕ್ಷ ಸೇರಲೂ ಬಂದಿರುವ ಯುವಕರನ್ನು ಸ್ವಾಗತಿಸಿದರು. ಮುಖಂಡರಾದ ಸಂಗನಗೌಡ ಜೈನರ. ಪ್ರಭುಶಂಕರಗೌಡ ಪಾಟೀಲ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಉಮೇಶ್ ಯಾದವ್. ಲಕ್ಷ್ಮಣ್ ಕಟ್ಟಿಹೊಲ. ದುರುಗೇಶ ಇದ್ಲಾಪುರ. ಶಂಕ್ರಪ ನಾಯಕ. ನಾಗರಾಜ ದಂಡಿನ ಮತ್ತು ಪಕ್ಷದ ಹಿರಿಯರು ಕಾರ್ಯಕರ್ತರು ಇದ್ದರು. ಈ ಸಂಧರ್ಭದಲ್ಲಿ ಸೆರ್ಪಡೆಯಾದ ಯುವಕರು.
ವರದಿ – ಸಂಪಾದಕೀಯ