ಗೋರ್ ಬೋಲಿ ಸಾಹಿತ್ಯ ಕಲಾರ ವೇಲ್ ವೇಲ್ಡಿ ಕಟಮಾಳೆರ ರಾಜ್ಯ ಪದಾಧಿಕಾರಿಗಳ ಪೂರ್ವಭಾವಿ ಸಭೆ ಮತ್ತು ರಾಜ್ಯ ಪದಾಧಿಕಾರಿಗಳ ಆಯ್ಕೆ..
ದಿನಾಂಕ : 28.08.2022 ಭಾನುವಾರ ದಾವಣಗೆರೆ ನಗರದ ಸರಸ್ವತಿ ಬಡಾವಣೆಯಲ್ಲಿರುವ ಸೇವಾಲಾಲ್ ಭವನದಲ್ಲಿ ನಡೆದ ಸಾರೀ ಕರ್ನಾಟಕೇರ್ ಬಂಜಾರ ಭಾಷ ಗೋರ್ ಬೋಲಿ ಸಾಹಿತ್ಯ ಕಲಾರ ವೇಲ್ ವೇಲ್ಡಿ ಕಟಮಾಳೊದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಜಯದೇವ ನಾಯಕ್, ಸುನಿತಾ ಬಾಯಿ, ಡಾ ಗಿರೀಶ್ ಮೂಡ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಮು ಎನ್ ರಾಠೋಡ್ ಮಸ್ಕಿ ಈ ಸಭೆ ಅಧ್ಯಕ್ಷತೆ ವಹಿಸಿದ್ದರು.ಬಂಜಾರ ಭಾಷೆಯ ಹೆಸರಾಂತ ಗಾಯಕರು ಕವಿಗಳು ಶ್ರೀ ಕುಬೇರ ನಾಯ್ಕ, ಎಸ್ ಮಿಠ್ಯಾನಾಯ್ಕ, ನಂಜ್ಯಾ ನಾಯಕ್, ಜಯರಾಜ್ ನಾಯ್ಕ, ಗೋಪಾಲ್ ನಾಯಕ್, ವಸಂತ ಎಲ್ ಚವ್ಹಾಣ್, ಶ್ರೀಹರಿ ಚವ್ಹಾಣ್, ರವಿ ಎಸ್ ಕೊಡಾವತ, ವೆಂಕಟರಮಣ ಟಿ ನಾಯಕ್, ಸಂತೋಷ ಟಿ ರಾಠೋಡ್, ಕೀಶನ್ ರಾಠೋಡ್, ರವಿ ಲಮಾಣಿ, ಮೂರ್ತಿ ಎಲ್, ರೇಷ್ಮಾ ಬಾಯಿ, ಎಲ್ ಪಿ ನಾಯ್ಕ ಕಠಾರಿ, ನೇತ್ರಾ ಬಾಯಿ, ಪರಮೇಶ ಟಿ ನಾಯಕ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆರ್ ಬಿ ನಾಯಕ್, ಸಂತೋಷ ಶಿವುಲಾಲ ನಾಯಕ್, ಜ್ಯೋತಿ ಕೃಷ್ಣ ನಾಯಕ್, ನಾರಾಯಣ ರಾಠೋಡ್, ಸುವರ್ಣ ಬಾಯಿ, ಬಾಲು ಚವ್ಹಾಣ್, ಶ್ರೀಕಾಂತ ಜಾಧವ್, ನರ್ಸಿಂಗ್ ಲಮಾಣಿ ಬಂಜಾರ ಜನಾಂಗದ ಈ ಸಾಹಿತಿಗಳು, ಕಲಾವಿದರು, ಲೇಖಕರು ಮತ್ತು ಗಾಯಕರನ್ನು ರಾಜ್ಯ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಂಘದ ರೂಪು -ರೇಷಗಳ ಬಗ್ಗೆ ಹಾಗು ಬಂಜಾರ ಗೊರಬೋಲಿ, ಸಾಹಿತ್ಯ ಮತ್ತು ಸಂಪ್ರದಾಯಕ ಹಾಡುಗಳನ್ನು ಅಭಿವೃದ್ಧಿ ಪಡಿಸುವುದರ ಬಗ್ಗೆ ಚರ್ಚಿಸಲಾಯಿತು. ಸಭೆಯು ಕುಮಾರಿ ನಿಹಾರಿಕಾ ರಾಥೋಡ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ರವಿ ಲಂಬಾಣಿ ಅವರು ವಂದಿಸಿದರು.
ವರದಿ – ಸಂಪಾದಕೀಯ