ತಾವರಗೇರಾ ಪಟ್ಟಣದಲ್ಲಿಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೋರಾಟ ಸಮಿತಿವತಿಯಿಂದ ಹಲವು ಬೇಡಿಕೆಗಳಿಗಾಗಿ ಮಾನ್ಯ ತಹಶೀಲ್ದಾರವರಿಗೆ ಮನವಿ ಪತ್ರ ಸಲ್ಲಿಸಿದರು.

Spread the love

ತಾವರಗೇರಾ ಪಟ್ಟಣದಲ್ಲಿಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೋರಾಟ ಸಮಿತಿವತಿಯಿಂದ ಹಲವು ಬೇಡಿಕೆಗಳಿಗಾಗಿ ಮಾನ್ಯ ತಹಶೀಲ್ದಾರವರಿಗೆ ಮನವಿ ಪತ್ರ ಸಲ್ಲಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ಅದ್ದೂರಿ ಅಮೃತ ಮಹೋತ್ಸವವನ್ನು ಆಚರಣೆ ಮಾಡಲಾಯಿತು. ಷೋಷಿತರ ಬಾಳಿಗೆ ಬೆಳಕು ನೀಡಿದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ಅನುಯಾಯಿಗಳು ಜಾತಿ, ಧರ್ಮ, ದೇವರು ಎಂಬ ನಿಷ್ಠೆ ತುಂಬಿರುವ ಈ ದೇಶದಲ್ಲಿ ಆಳುವ ಸರ್ಕಾರ ಸಂಪೂರ್ಣ ವಿಫಲತೆಗೊಂಡಿದೆ. 75 ವರ್ಷದ ಹಿಂದೆ ವಿದೇಶಿ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಪಡೆದಾಗ ಅದೊಂದು ಮಹತ್ವದ ಗಳಿಗೆಯಾಗಿತತು. ಬಹುಸಂಖ್ಯಾತ ಪ್ರಜೆಗಳಾದ ಎಸ್ ಸಿ. ಎಸ್ ಟಿ ಸಮುದಾದವರು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರಲು ಒ.ಬಿ.ಸಿ ಧಾರ್ಮಿಕ ಅಲ್ಪ ಸಂಖ್ಯಾತರು, ಕೂಲಿ ದಿನಗಳು ಬೀದಿ ಬದಿಯಲ್ಲಿ ತಳ್ಳು ಗಾಡಿ ವ್ಯಾಪರಿಗಳು, ಕಟ್ಟಡ ಕಾರ್ಮಿಕರು, ಆಟೋ, ಕಾರು ಚಾಲಕರು ಮತ್ತಿತರ ಅಸಂಘಟಿತ ವಲಯದ ಜನರೆಲ್ಲರೂ ಬಹುಜನ ಸಮಾಜವಾಗಿದೆ. ಇವರೆಲ್ಲರ ಪಾಲಿಗೆ ಸ್ವಾತಂತ್ರ್ಯ ಎಂಬುದು ಅನೇಕ ಕನಸು ಬರವಣಿಗೆಗಳು ಬಹುನಿರೀಕ್ಷೆಗಳು ಈಡೇರಿಸಬಹುದೆಂಬ ನೀರಿಕ್ಷೆ ಸುಳ್ಳಾಗಿದೆ. ವಿದೇಶಿಯರ ಆಳ್ವಿಕೆಯ ಕಾಲದಲ್ಲಿ ಸಹ ಅನಕ್ಷರಸ್ಥರಾಗಿ ನಿರುದ್ಯೋಗಿಯಾಗಿ ಕಡುಬಡವರಾಗಿದ್ದವರು. ಜಮೀನುದಾರರ ದಬ್ಬಾಳಿಕೆ, ದೌರ್ಜನ್ಯಗಳಿಗೆ ತುತ್ತಾಗಿ ಜಾತಿ ಧರ್ಮ ದೇವರುಗಳ ಪರಿಣಾಮವಾಗಿ ಇವರ ಪಾಲಿಗೆ ಸ್ವಾಭಿಮಾನ ಬರಬಹುದು ಎಂಬುದೆ ಮರಿಚಿಕೆಯಾಗಿದೆ. 75 ವರ್ಷಗಳ ನಂತರ ಸ್ವಾತಂತ್ರ್ಯ ಭಾರತದಲ್ಲಿ ಈ ಸಮಾಜಿಕ, ಆರ್ಥಿಕ ಪರಿಸ್ಥಿತಿ ಏನಾಗಿದೆ. ಸ್ವಾತಂತ್ರ್ಯ ವು ಈ ಜನಕ್ಕೆ ಸ್ವಾಭಿಮಾನದ ಬದುಕನ್ನು ಇನ್ನಾದರೂ ನೀಡಿರುವುದೇ ಸ್ವಾತಂತ್ರ್ಯಗೊಂಡ ಭಾರತ ತನ್ನದೇ ಅದ ಸಂವಿಧಾನವನ್ನು ಅಂಗೀಕರಿಸಿದಾಗ ಭಾರತ ಪ್ರಜೆಗಳಾದ ನಾವು ಸಿರಿವಂತರೆಷ್ಟು, ಬಡವರು ಎಂಬ ಎರಡು ಭಿನ್ನಾ ವರ್ಗಗಲಾಗಿರುವುದು ಈ ನಾಡಿನ ದುರಂತ ಕಥೆ, ಈಗಿನ ಸರಕಾರ ಸುಳ್ಳು ಬರವಸೆಗಳನ್ನು ನೀಡುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸಿದೆ ಜಾತಿ ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಾ ಜರನ್ನು ದಿಕ್ಕು ತಪ್ಪಿಸುತ್ತಿದ್ದು 15 ಲಕ್ಷ ಪ್ರತಿ ಕುಟುಂಬಕ್ಕೆ ಲಕ್ಷಾಂತರ ಉದ್ಯೋಗದ ಬರವಸೆ ಅಚ್ಛಾ ದೀನ್ ಹೇಳುತ್ತಾ, ಖಸೀಲ್, ಪೆಟ್ರೋಲ್ ದರ ಗಗನಕ್ಕೇರಿಸಿ ಸರಕಾರದ ಆಸ್ತಿಗಳನ್ನು ಕಾರ್ಪೊರೆಟರ್ಗಳಿಗೆ ಒಂದೊಂದು ಮಾರಾಟ ಮಾಡಿ ದೇಶವು ಲೂಟಿಕೋರರ ಪಾಲಾಗುವಂತೆ ಸಹಕರಿಸುತ್ತದೆ. ಮಿಸಲಾತಿ ವಂಚಕರಿಗೆ ಸರ್ಕಾರದ ರಕ್ಷಣೆ :

1992 ಕೇಂದ್ರ ಸರಕಾರದ ಹುದ್ದೆಗಳಲ್ಲಿ ಒಬಿಸಿ ಗಳಿಗೆ ಶೇ 27 % ರಷ್ಟು ಮೀಸಲಾತಿ ನೀಡಬೇಕೆಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿದರು . ಇಲ್ಲಿಯ ತನಕ ಶೇ .12 % ರಷ್ಟು ಹುದ್ದೆ ತುಂಬಿಲ್ಲ ಎಸ್ ಸಿ , ಎಸ್ ಟಿ ಮತತು ಒಬಿಸಿ ಗಳ ನೇಮಕಾತಿಯನ್ನು ತಪ್ಪಿಸಲು ಕಳೆದ 15-20 ವರ್ಷಗಳಿಂದ ಹೊರ ಗುತ್ತಿಗೆ ನೀಡುವುದನ್ನು ಸರಕಾರಗಳು ರುಡಿಗೆ ತಂದಿವೆ . ಕರ್ನಾಟಕ ರಾಜ್ಯದಲ್ಲಿ 2011 ರ ಜನಗಣತಿ ಪ್ರಕಾರ ಮೀಸಲಾತಿಯನ್ನು ಎಸ್ ಸಿ ಗಳಿಗೆ ಶೇ .15 % ರಿಂದ 17 % ಕ್ಕೆ ಎಸ್ ಟಿ ಗಳಿಗೆ ಶೇ .03 % ರಿಂದ ಶೇ .07 % ಕ್ಕೆ ಹೆಚ್ಚಳ ಮಾಡಬೇಕೆಂದು ಶಿಪಾರಸ್ಸು ಮಾಡಿರುವ ನ್ಯಾ ನಾಗಮಹೋನ್ ದಾಸ್ ವರದಿಯನ್ನು ಕಡೆಗಣಿಸಲಾಗಿದೆ. 10 02-2022 ರಿಂದ ಮಹರ್ಷಿ ವಾಲ್ಮೀಕಿ ಮತದ ಗುರುಗಳಾದ ಪರಮ ಪೂಜ್ಯ ಶ್ರೀಪ್ರಸನ್ನನಾಂದ ಸ್ವಾಮಿಗಳು ಆಯೋಗದ ಶಿಫಾರಸ್ಸುಗಳ ಜಾರಿಗಾಗಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಂಡಿದ್ದು. ಭೋವಿ ಮಠದ ಶ್ರೀಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಜೀ , ಛಲುವಾದಿ ಮಠದ ಬಸವವಾದಿ ದೇವಸ್ವಾಮಿಜಿ, ಲಮಬಾಣಿ ಮಠದ ಶ್ರೀಬಸವ ಸರ್ದಾರ್ ಸೇವಲಾಲ್ ಸ್ವಾಮೀಜಿ, ಮೇದರ ಮಠದ ಇಮ್ಮಡಿ ಕೇತೇಶ್ವರ ಸ್ವಾಮೀಜಿ ಮತ್ತು ಉರಿಲಿಂಗಪೇದ್ದಿಶ್ವರ ಸಂಸ್ಥಾನ ಮಠದ ಶ್ರೀಜ್ಞಾನ ಪ್ರಕಾಶ ಸ್ವಾಮೀಜಿಗಳು ಹೋರಾಟಕ್ಕೆ ಬೆಂಬಲ ಈಡಿದ್ದರೂ ಸಹ ಸರಕಾರ ಕ್ಯಾರೆ ಎನ್ನುತ್ತಿಲ್ಲ ಸುಮಾರು 15 ರಿಂದ 20 ಸಾವಿರ ಮದಿ ಮೇಲ್ದಾತಿಯವರು ಸುಳ್ಳು ( ನಕಲಿ ) ತಾವು ಎಸ್ ಸಿ ಎಸ್ ಟಿ ಜಾತಿಗೆ (ವರ್ಗ) ಗಳಿಗೆ ಸೇರಿದವರೆಂದು ಹೇಳಿಕೊಂಡು ಸುಳ್ಳು ಜಾತಿ ಸರ್ಟಿಪಿಕೇಟ್ ಪಡೆದು ಸರ್ಕಾರಿ ಸೇರಿಕೊಂಡಿದ್ದಾರೆ . ಶಿವಮೊಗ್ಗದ ಹೊನ್ನಳ್ಳಿ ಕ್ಷೇತ್ರದ ಶಾಸಕರಾದ ರೇಣುಕಾಚಾರಿ ಮಗ ಮತ್ತು ಮಗಳು ಹಾಗೂ ಅವರ ಹಿರಿಯ ಸಹೋದರರು ನಾವು ( ತಾವು ಬುಡಗ ಜಂಗಮರು ಎಂದು ಸುಳ್ಳು ಹೇಳಿಕೊಂಡು ಎಸ್ ಸಿ ಸರ್ಟಿಪಿಕೇಟ್ ಪಡೆದು ಹಲವು ಸೌಲಭ್ಯಗಳನ್ನು ಪಡೆದವರನ್ನು ಬಿಜೆಪಿ ಸರಕಾರ ರೇಣುಕಾಚಾರಿಯನ್ನು ಶಿಕ್ಷೆಸುವುದಕ್ಕೆ ಬದಲಾಗಿ ರಕ್ಷಿಸುತ್ತದೆ . ಆಳುವ ಸರಕಾರವೇ ತಪ್ಪು ಮಾಡುತ್ತಿರುವಾಗ ಇತರ ಅಪರಾಧಿಗಳನ್ನು ಶಿಕ್ಷಿಸುವವರು ಯಾರು. ಹಿಂದು-ಶೈವ ಜಂಗಮ: 12 ಜ್ಯೋರ್ತಿಲಿಂಗ, ಪುರೋಹಿತರು , ಹಿಂದೂ ಶೈವ, ನಿಷ್ಠವಂತರು, ಶಿವನ ಆರಾಧಕರು ಲಿಂಗ, ವಿಭೂತಿ , ಜೋಳಿಗೆ ಬೆತ್ತ ಜೋಳದಿಟ್ಟು , ಕಂಧೆ ಬಿಕ್ಷೆ ಸಾರುವ ಜಂಗಮ ಕಂತಿ ಜಂಗಮ , ಹಿರೇಮಠದಯ್ಯ, ಮಠಪತಿ , ಜಗದೋದ್ಧಾರಕ, J COSTA Ball ass ? ಪಂಚಚಾರ್ಯ, ಧಾರ್ಮಿಕ ಬಿಕ್ಷೆ, ವೀರಶೈವ ವಿಶಿಷ್ಠ ದೈತ, ಬಾನ್ಮೂಲ, ಅಷ್ಠಸ್ಥಲ, ಗುರುಲಿಂಗ , ಜಂಗಮ , ಭಸ್ಮ ರುದ್ರಾಕ್ಷ , ತಂತ್ರ , ಪ್ರಸಾದ, ಶಿವಚಾರ , ಲಿಂಗಚಾರ, ಸದಚಾರ, ಗಣಚಾರ – ಪೇಲ್ಲ ಪದ್ಧತಿ ಶ್ರೀರೇವಣಸಿದ್ಧ, ಶ್ರೀಮರಳಸಿದ್ದ (ಮಾದಿಗೆ) ಡಾ.ಎಸ್. ಕೊರಾಮ, ಪಂಡಿತರಾದ ಶ್ರೀವಿಶ್ವರಾಧ್ಯ ಪಂಚಚಾರ್ಯ, ಮರುಪತಿ, ಕಾಶ್ಮೀರ ಶೈವ, ತಮಿಳು, ಶೈವ, ಗುರುಪೀಠಗಳು ರಂಭಾಪುರು ಶ್ರೀಶೈಲ, ಉಚ್ಚೇನಿ ಕೇದರನಾಥ ಹೊಂದಿದೆ . ಜಂಗಮರು ಮೇಲಿನಂತೆ ಇದ್ದಾಗ ಕಾ ಆಹಾರ, ಭಾಷೆ, ಸಂಸ್ಕೃತಿ, ಬೇರೆ ಇದ್ದು, ಬೇಡ ಜಂಗಮರ ಮೀಸಲಾತಿಯನ್ನು ಬೇಡುತ್ತಿರುವುದು ನಾಚಿಗೇಟ್ಟ , ವಿಚಾರ ಮೂರು ಬಿಟ್ಟವರು ಅಂತರಲ್ಲಾ ಅವರ ಪೈಕಿ ನೀವು, ಅಮಯಾಕರ ಮೇಲೆ ದಬ್ಬಾಳಿಕೆ ಎಂದರೆ ಇದೇ ಇರಬೇಕು . ಕೊಳದ ಮಠದ ಆಶ್ರಯದಲ್ಲಿ ನಕಲಿ ಬೇಡ ಜಂಗಮ ರಕ್ಷಣೆ ನಡೆದಿದೆ . ಅಲೆಮಾರಿಗಳ ಮೀಸಲಾತಿಯನ್ನು ವಂಚಿಸುತ್ತ ದಲಿತರ ಅನ್ನವನ್ನು ಕಬಳಿಸುತ್ತಿರುವದು ಬೇಡ ಜಂಗಮರು , ಜಾತಿಯತೆಯನ್ನು ಬಳಸಿ ಸುಳ್ಳು ದಾಖಲೆಗಳನ್ನು ಬಳಸಿಕೊಂಡು ಈ ಸಮುದಾಯದ ಮೀಸಲಾತಿಯ ಹಕ್ಕನ್ನು ಕದಿಯಲು ಬಂದಿರುವ ಮೇಲಾಸ್ತರದ ಗುರುಗಳಿಗೆ ಧಿಕ್ಕಾರ ಹೇಳಬೇಕಾಗಿದೆ. ಹೇಳಿ ಧಿಕ್ಕಾರ , ಧಿಕ್ಕಾರ . ಬೇಡ ಬುಡ್ಗ ಜಂಗಮರೆಂದರು ಯಾರೂ : ಅಲೆಮಾರಿ ಸಮುದಾಯಗಳಲ್ಲಿ ಬೇಡ ಜಂಗಮ ಬುಡಕಟ್ಟು ಜನ ಅತ್ಯಂತ ದುರಂತದಲ್ಲಿ ಬದುಕುತ್ತಾರೆ. ಅನಕ್ಷರಸ್ಥ , ಅಸಂಘಟಿತ ಅಲೆಮಾರಿಗಳ ಜೀವನ ಶೋಚನೀಯವಗಿದೆ. ಊರು, ನಗರ ಪ್ರದೇಶಗಳಲ್ಲಿ ಬಯಲು ಗಳಲ್ಲಿ ಟೆಂಟು , ಗುಡಾರ , ಗುಡಿಸಲು ಹಾಕಿಕೊಡು ಜೀವಿಸುತ್ತಿರುವ ಬೇಡ ಜಂಗಮರು ಬುರಕಥೆ , ಹಗಲುವೇಷ , ಕುಂಚಿಕೊರವರು , ಸಿದ್ಧರು ಬೀದಿಯಲ್ಲಿ ಬಿಕ್ಷೆ ಬೇಡುವ ಬದುಕು ನಡೆಸುವವರ ಅನ್ನವನ್ನು ಖದೀಬಯಸುವುದು ಊರ ( ಬೇಡ ) ಜಂಗಮರು ಇವರ ರಕ್ತ ಸಂಬಂಧ ಬೆಳೆಸುವ ಉನ್ನಾರವೇಣು ನಡೆದಿದಯಾ ? ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳ ಶಿಷ್ಯ ವೇತನ ರದ್ದತಿ : ಬಂಧುಗಳೆ ಕಾಂಗ್ರೆಸ್ , ಬಿಜೆಪಿ , ಜೆಡಿಎಸ್ ಪಕ್ಷಗಳ ಗುಲಾಮರಾಗದೆ ನಮ್ಮ ಸ್ವಾಭಿಮಾನಕ್ಕಾಗಿ ದಕ್ಕೆಯಾಗಲಾದರು ಒಂದೇ ವೇದಿಕೆಗೆ ಬನ್ನಿ ನಮ್ಮ ಸಂವಿಧಾನ ರಕ್ಷಣೆಗಾಗಿ ಹೋರಾಟದ ಅವಶ್ಯಕತೆ ಇದೆ . ಆಡಳಿತ ನಡೆಸುವ ಕೇಂದ್ರ ಸರಕಾರ ಸಂವಿಧಾನದ ಮೂಲ ಶಯಗಳಿಗೆ ಸ್ಪಂದಿಸಿದೆ ಆಂತರಿಕವಾಗಿ ವಿರೋಧಿಸುತ್ತದೆ . ಸಂವಿಧಾನದ 20 ಪುಟಗಳನ್ನು ಕಿತ್ತು ಹಾಕುವುದನ್ನು ಜಾರಿಗೆ ತರುವ ಉನ್ನಾರ ಎಡಬಿಡದೆ ನಡೆದಿದೆ . ನಮ್ಮ ಸಂವಿಧಾನವನ್ನು ನಾವು ರಕ್ಷಣೆ ಮಾಡದಿದ್ದರೆ ಹಿಂದಿನ 2300 ವರ್ಷಗಳ ಹಿಂದಿನ ಮನುವಾದ ಜಾರಿಗೆಯಾಗಲಿದೆ. ಮತ್ತು ಗುಲಾಮಗಿರಿಯ ಪದ್ಧತಿಗೆ ಬಲಿಯಾಗಬೇಕಾಗುತ್ತದೆ . ಎಸ್ ಸಿ ಎಸ್ ಟಿ ಉದ್ಯೋಗ ವಿನಿಮಯಹಣ, ಶಿಷ್ಯವೇತನದಂತಹ ಹಣವನ್ನು ಸರಿಯಾಗಿ ಮಗಳು ನಡೆದು ಗೆದ ಎಂಪಿ ಎಮ್ ಎಲ್ ಎ ಗಳು ನಮ್ಮ ಪರವಾಗಿ ಧ್ವನಿ ಎತ್ತದೆ ನಮ್ಮ ಅನುಭವಿಗಳಿಗೆ ಸ್ಪಂದಿಸದ ಸ್ವತ ರಾಜಕಾರಣ ಮಾಡುವ ವ್ಯಕ್ತಿಗೆ ಮುಂದಿನ ದಿನಮಾಮದಲ್ಲಿ ಪಾಠ ಕಲಿಸಬೇಕಾಗಿದೆ. ನಮ್ಮ ಪರವಾಗಿ ಮಾತನಾಡದ ಎಂಪಿ ಎಂ ಎಲ್ ಎಗೆ ಮೂ ಪಾರ್ಶ್ವ ( ಲಕ್ವ ) ಹೊಡೆದಿದೆಯಾ … ? ಎಸ್ಸಿ ಎಸ್ಟಿಗಳು ಅಂದರೆ ಎರಡು ತಲೆ ಒಂದೇ ದೇಹ ಅದುವೆ ( ಗಂಡ ಬೇರುಂಡ ಪಕ್ಷಿ ) ಯಾರಿಗೆ ಅನ್ಯಾಯವಾದರು ಅದು ನಮ್ಮ ದೇಹಕ್ಕೆ ಎನ್ನುವುದು ಮರೆಯದಿರಿ ನಕಲಿ (ಸುಳ್ಳು) ಜಾತಿ ಪ್ರಮಾಣ ಪತ್ರವನ್ನು ನಕಲಿ ಶೈವ ಜಂಗಮರಿಗೆ ಎಸ್ ಸಿ ಎಸ್ ಟಿ ಪ್ರಮಾಣ ಪತ್ರ ನೀಡುವುದು ತಡೆಯಲು ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸುಳ್ಳು ಜಾತಿ ಹೆಸರಲ್ಲಿ ನೌಕರಿ ಪಡೆದವರನ್ನು ಶಿಕ್ಷೆಗೆ ಗುರಿ ಪಡೆಸುವಂತೆ ಒತ್ತಾಯಿಸಿ ಇಂದು ಮಾನ್ಯ ತಹಶೀಲ್ದಾರ ನೇತೃತ್ವದಲ್ಲಿ ಮಾನ್ಯ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಪ್ರತಿಭಟನಾ ರ್ಯಾಲಿಯಲ್ಲಿ ಮಾನ್ಯ ತಹಶೀಲ್ದಾರ್ ರಾದ ಗುರುರಾಜ್ ಎಮ್. ಉಪ-ತಹಶೀಲ್ದಾರರಾದ ಶರಣಪ್ಪಕಳ್ಳಿಮಠ, ಹಾಗೂ ಸರ್ವ ಸಿಬಂದಿ ವರ್ಗ, ಹಾಗೂ ಸ್ಥಳಿಕ ಮಟ್ಟದ ಠಾಣಾಧಿಕಾರಿಗಳಾದ ಶ್ರೀಮತಿ ವೈಶಾಲಿ ಝಳಕಿ ಹಾಗೂ ಸಿಬಂದಿ ವರ್ಗದವರು, ಹಾಗೂ ಹಿರಿಯ ಹೋರಾಟಗಾರರಾದ ಆನಂದ ಬಂಡಾರಿ, ಹೆಚ್.ಎನ್ ಬಡಿಗೇರ್, ಹೇಮರಾಜ್ ವೀರಾಪೂರ್, ಸಾಗರ್ ಬೇರಿ, ನಾಗರಾಜ ನಂದಾಪೂರ, ವೆಂಕಟೇಶ ಗೋತಗಿ, ಶ್ಯಾಮಣ್ ಎಸೆಗಾರ್,ಮುದುಕಪ್ಪ ಕನ್ನಾಳ,ಯಮನೂರಪ್ಪ ಬಿಳೆಗುಡ್ಡ, ಶ್ಯಾಮೀದ್ಸಾಬ್ ಮೇಣೆದಾಳ ಇತರರು ಹೋರಾಟಗಾರರು ಮನಸ್ಸುಗಳು ಒಂದಾಗಿ ನೆಲೆ ಊರಿ ಈ ಪ್ರತಿಭಟನಾ ರಾಲಿಯನ್ನು ಯಶಸ್ವಿಗೊಳಿಸಿದರು.

ವರದಿ – ಉಪ್ಪಳೇಶ ವಿ.ನಾರಿನಾಳ.

Leave a Reply

Your email address will not be published. Required fields are marked *