ಭಾರತೀಯ ಕಮ್ಯುನಿಸ್ಟ್ ಪಕ್ಷ ಕ್ರಾಂತಿಯ ದ್ವನಿಯಾಗಿದೆ ಮಂಡಕ್ಕಿಗೆ ಜಿಎಸ್ಟಿ ವಿಧಿಸಿದ್ದೇ ಸಾಧನೆ…..

Spread the love

ಭಾರತೀಯ ಕಮ್ಯುನಿಸ್ಟ್ ಪಕ್ಷ ಕ್ರಾಂತಿಯ ದ್ವನಿಯಾಗಿದೆ ಮಂಡಕ್ಕಿಗೆ ಜಿಎಸ್ಟಿ ವಿಧಿಸಿದ್ದೇ ಸಾಧನೆ…..

ಭಾರತ ಕಮ್ಯುನಿಸ್ಟ್ ಪಕ್ಷದ ವಿಜಯನಗರ ಜಿಲ್ಲಾ ಪ್ರಥಮ ಸಮ್ಮೇಳನದಲ್ಲಿ ಪಿ.ವಿ.ಲೋಕೇಶ್ ಟೀಕೆ. ಕೂಡ್ಲಿಗಿ:ಡಬಲ್ ಇಂಜಿನ್ ಸರ್ಕಾರದಿಂದ ಜನಸಾಮಾನ್ಯರಿಗೆ ಅದರಲ್ಲೂ ನಮ್ಮ ಭಾರತದ ಬಡಜನರ ಬದುಕು ನೈಜ ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದವರು ಮಾಡುತ್ತಿದ್ದಾರೆ.ದೇಶದ ಜನತೆ ಬೆಲೆ ಏರಿಕೆಗೆ ತತ್ತರಿಸಿರುವ ಭಾರತ ಸಮಾಜದ ಶಾಂತಿ ಹಾಗೂ ಭ್ರಷ್ಟಾಚಾರದಿಂದ ತಾಂಡವಾಡುತ್ತಿದೆ ಮಂಡಕ್ಕಿಗೆ ಜಿಎಸ್​ಟಿ ವಿಧಿಸಿದ್ದ ಕಿರ್ತಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ.ಹಾಗೂ ಅವರ ದೊಡ್ಡ ಸಾಧನೆಯಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿವಿ ಲೋಕೇಶ್ ವ್ಯಂಗ್ಯ ವಾಡಿದರು. ಪಟ್ಟಣದ ಚಂದ್ರಶೇಖರ ಅಜಾದ್ ರಂಗಮಂದಿರದಲ್ಲಿ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ ವಿಜಯನಗರ ಜಿಲ್ಲಾ ಪ್ರಥಮ ಸಮ್ಮೇಳನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ತುಂಬಿದೆ ಭ್ರಷ್ಟಾಚಾರ ಬಿಜೆಪಿಯವರು ಅಧಿಕಾರಕ್ಕೆ ಬರುವ ಮೊದಲು ಭಾರತವನ್ನು ಸ್ವರ್ಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ ಡಬಲ್ ಇಂಜಿನ್ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿತುಳುಕುತ್ತಿದೆ. ರಾಜ್ಯದ ಪಿಎಸ್ಐ. ಕೆಪಿಟಿಸಿಎಲ್. ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ. ಅಲ್ಲದೆ ಶೇಕಡ 40% ಕಮಿಷನ್ ಅಷ್ಟೇ ಅಲ್ಲ ಇನ್ನು ಸಾಕಷ್ಟು ಭ್ರಷ್ಟಾಚಾರಗಳು ನಡೆಯುತ್ತಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಪಿಐ ರಾಜ್ಯ ಸಮಿತಿ ಸದಸ್ಯ ಅಮ್ಜದ್ ಕೊಪ್ಪಳ ಮಾತನಾಡಿ ದೇಶದ ಜನರು ಹಾರ್ದಿಕ ಸಂಕಷ್ಟದಲ್ಲಿದ್ದಾರೆ ಇವುಗಳನ್ನು ನಿವಾರಿಸಲು ಸಿಪಿಐ ಪಕ್ಷ ನಿರಂತರ ಹೋರಾಟ ಮಾಡುತ್ತಿದೆ ಚುನಾವಣೆಯಲ್ಲಿ ಹಣವಿದ್ದರೆ ಗೆಲ್ಲಬಹುದು ಅಥವಾ ಗೆದ್ದವರನ್ನು ಖರೀದಿ ಮಾಡಬಹುದೇ ಎಂಬ ಸ್ಥಿತಿ ನಿರ್ಮಾಣವಾಗಿದೆ ಕಳೆದ ಐದು ವರ್ಷಗಳಿಂದಲೂ ಕಾರ್ಮಿಕರ ರೈತರ ಹಲವಾರು ಬೇಡಿಕೆಗಳು ಈಡೇರುತ್ತಿಲ್ಲ ಅವರ ಜೀವನ ಸಂಕಷ್ಟದಲ್ಲಿದೆ. ಇದನ್ನು ಮನಗಂಡು ಈ ಬಾರಿ ವಿಜಯನಗರ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳಿಸುತ್ತೇವೆ ಅದೇ ರೀತಿಯಾಗಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸಿಪಿಐ ಪಕ್ಷದಿಂದ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಈರಣ್ಣನವರನ್ನು ಪಕ್ಷದ ವತಿಯಿಂದ ನಮ್ಮನೊಂದವರ ಪರ ಧ್ವನಿಯೆತ್ತಲು ನಮ್ಮಲ್ಲಿರುವ ಒಬ್ಬರನ್ನು ವಿಧಾನಸೌಧಕ್ಕೆ ಕಳಿಸಬೇಕಾಗಿದೆ ಎಂದು ಹೇಳಿದರು. ಹಿರಿಯ ಕಾರ್ಮಿಕ ಮುಖಂಡ ಎಂಕೆ ಮಥಾಯಿ ಪ್ರತಿನಿಧಿ ಸಮಾವೇಶ ಉದ್ಘಾಟಿಸಿದರು. ಸಿಪಿಐ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಕೆ ನಾಗಭೂಷಣರಾವ್ ಅಧ್ಯಕ್ಷತೆ ವಹಿಸಿದ್ದರು. ಹರಪನಹಳ್ಳಿ ಕೊಟ್ರಯ್ಯ ನಿರ್ವಹಿಸಿದರು. ಕಾರ್ಮಿಕ ಮುಖಂಡ ರಾಜ್ಯ ಸಹಕಾರ್ಯದರ್ಶಿ ಜನಾರ್ಧನ. ಜಿಲ್ಲಾ ಉಸ್ತುವಾರಿ ಎಚ್ಎ ಆದಿಮೂರ್ತಿ. ಜಿಲ್ಲಾ ಕಾರ್ಯದರ್ಶಿ ಎಚ್ ವೀರಣ್ಣ. ಎ ಐ ವೈ ಎಫ್ ರಾಜ್ಯ ಕಾರ್ಯದರ್ಶಿ ಎಚ್ ಎಂ ಸಂತೋಷ್. ಹುಲಿಗೆಪ್ಪ. ರಮೇಶ್ ನಾಯಕ್. ವಕೀಲ ಟಿ ಪರಸಪ್ಪ. ಗುಡಿಹಳ್ಳಿ ಹಾಲೇಶ್. ಸುರೇಶ್. ಕರಿಯಪ್ಪ. ಯು ಪೆನ್ನಪ್ಪ. ಶಾಂತರಾಜ್ ಜೈನ್. ಎಸ್ ಅಮೀರ್. ರೇಣುಕಮ್ಮ. ಮಹಾಂತಮ್ಮ. ಸುಮಾ. ಪಾಲಮ್ಮ. ಅನಸೂಯಮ್ಮ. ಫಾತಿಮಾ. ಮಂಜಮ್ಮ. ಗುಡೆಕೋಟೆ ಮಂಜುನಾಥ್ ಇದ್ದರು. ಇದಕ್ಕೂ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿಯಾಗಿ ಹೆಚ್.ವೀರಣ್ಣ-ಭಾರತ ಕಮಿನಿಸ್ಟ್ ಪಕ್ಷದ ವಿಜಯನಗರ ಜಿಲ್ಲೆಯ ನೂತನ ಕಾರ್ಯದರ್ಶಿಯಾಗಿ  ಕಾಮ್ರೆಡ್ ಹೆಚ್ಚು ವೀರಣ್ಣ ರವರನ್ನು ಅವಿರೋಧವಾಗಿ ಸರ್ವಾನುಮತದಿಂದ ಮುಂದಿನ ಮೂರು ವರ್ಷದವರೆಗೆ ಆಯ್ಕೆ ಮಾಡಲಾಯಿತು.

ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *