ಮತದಾನ ನಮ್ಮ ಹಕ್ಕು, ಕುರಿತು ಜಾಗೃತಿ ಮ್ಯಾರಥಾನ್, ಹಿಂದುಳಿದ ವರ್ಗಗಳ ಆಯೋಗದಿಂದ ಬಿಡುಗಡೆ ಪೋಸ್ಟರ್ ಬಿಡುಗಡೆ…..
ಬೆಂಗಳೂರು: ಆಗಸ್ಟ್ 29, ದೇವರಾಜ್ ಅರಸು ಭವನದಲ್ಲಿ “ಮತದಾನ ನಮ್ಮ ಹಕ್ಕು, ಮತದಾನ ನಮ್ಮ ಕರ್ತವ್ಯ” ಕುರಿತು ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಕರ್ನಾಟಕ ಹೈ ಕೋರ್ಟ್ ನ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಹಮ್ಮಿಕೊಂಡಿರುವ ಜಾಗೃತಿ ಮ್ಯಾರಥಾನ್ ಓಟದ ಭಿತ್ತಿಪತ್ರವನ್ನ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ ಹೆಗ್ಡೆ ರವರು, ಆಯೋಗದ ಸದಸ್ಯರಾದ ಬಿ. ಎಸ್. ರಾಜಶೇಖರ್ ರವರು, ಸದಸ್ಯ ಹೆಚ್. ಎಸ್. ಕಲ್ಯಾಣ್ ಕುಮಾರ್ ರವರು, ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತಕರಾದ ಕೆ.ಎ.ದಯಾನಂದರವರು ಬಿಡುಗಡೆಗೊಳಿಸಿದರು! ಸೆಪ್ಟೆಂಬರ್ 17 ರಂದು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 72 ನೇ ಜನ್ಮ ದಿನದ ಅಂಗವಾಗಿ ನವದೆಹಲಿಯಲ್ಲಿ “ಮತದಾನ ನಮ್ಮ ಹಕ್ಕು, ಮತದಾನ ನಮ್ಮ ಕರ್ತವ್ಯ” ದ ಕುರಿತು ರಾಷ್ಟ್ರ ಮಟ್ಟದಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಭವನದಿಂದ ಕೆಂಪು ಕೋಟೆವರೆಗೂ ತಡೆರಹಿತವಾಗಿ 3 ಗಂಟೆಗಳ ಕಾಲ ಮ್ಯಾರಥಾನ್ ಓಟದ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರ ಭಿತ್ತಿ ಪತ್ರವನ್ನ ಬಿಡುಗಡೆಗೊಳಿಸಿ ಕರ್ನಾಟಕದ ವ್ಯಕ್ತಿಯೊಬ್ಬ ರಾಷ್ಟ್ರಮಟ್ಟದಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಈ ಪ್ರಯತ್ನ ಪ್ರಶಂಶನೀಯವೆಂದರು,
ವರದಿ – ಮಹೇಶ ಶರ್ಮಾ