ಬಳ್ಳಾರಿ ಟೂ ಬಾಗಲಕೋಟೆಗೆ ನೂತನ ರೈಲು ಮಾರ್ಗಕ್ಕೆ ಶುಭಕೋರಿದ ಶ್ರೀ ಶೇಖರಗೌಡ ಪೋ.ಪಾ.ರವರು.
ಗಂಗಾವತಿ – ದರೋಜಿ ನೂತನ ರೈಲು ಮಾರ್ಗಕ್ಕೆ ಸರ್ವೇಗೆ ಸಿದ್ದವಾಗಿದ್ದು. ಬಳ್ಳಾರಿಯಿಂದ ನೇರವಾಗಿ ದರೋಜಿ. ಗಂಗಾವತಿ ಹಾಗೂ ಕನಕಗಿರಿ, ಇಲಕಲ್ ಹುನಗುಂದ ಮಾರ್ಗವಾಗಿ ಬಾಗಲಕೋಟೆ ರವರೆಗೆ ವಿಸ್ತರಿಸುವಂತೆ ವಿನಂತಿಸಿಕೊಂಡ ಹಿನ್ನಲೆಯಲ್ಲಿ ಮುಖ್ಯ ಪ್ರಬಂಧಕರು ನೈರುತ್ಯ ರೈಲ್ವೆ ವಿಭಾಗ ಹುಬ್ಬಳ್ಳಿಯವರು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ ಹಿನ್ನಲೆಯಲ್ಲಿ ಕೂಡಲೇ ಕೇಂದ್ರ ಸರಕಾರವು ಸ್ಪಂದಿಸಿ, ಈ ನೂತನ ಸುಮಾರು 157 ಕಿಮೀ ಮಾರ್ಗದ ಸರ್ವೇ ಕಾರ್ಯಕ್ಕೆ ರೂ .78.50 ಲಕ್ಷಗಳನ್ನು ಮಂಜೂರು ಮಾಡಿದ್ದಾರೆ. ನೂತನ ಮಾರ್ಗದಿಂದ ನಮ್ಮ ಭಾಗದ ಪ್ರಯಾಣಿಕರಿಗೆ ಪ್ರವಾಸಿಗರಿಗೆ ಮತ್ತು ವರ್ತಕರಿಗೆ ತುಂಬಾ ಪ್ರಯಾಣಿಕರಿಗೆ ಉದ್ದದ ರೈಲ್ವೆ ಈ ಭಾಗದ ಅನುಕೂಲವಾಗುತ್ತದೆ . ಅಲ್ಲದೇ ಬಾಗಲಕೋಟ ಕಡಿಮೆಯಾಗಿ ತುಂಬಾ ಬೆಂಗಳೂರು, ತಿರುಪತಿ ಪ್ರಯಾಣದ ದೂರ ಮತ್ತು ಸಮಯ ಅನುಕೂಲವಾಗಲಿದೆ. ಸದರಿ ಸರ್ವೇ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಿರುವ ಮಾನ್ಯ ಪ್ರಧಾನ ಮಂತ್ರಿಗಳಿಗೂ, ಕೇಂದ್ರ ರೈಲ್ವೆ ಮಂತ್ರಿಗಳು ಹಾಗೂ ರೈಲ್ವೆ ಮಂಡಳಿ ಮತ್ತು ಹಿರಿಯ ಅಧಿಕಾರಿಗಳಿಗೆ ಮಾನ್ಯ ಸಂಸದರಾದ ಶ್ರೀ ಕರಡಿ ಸಂಗಣ್ಣನವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಜೊತೆಗೆ ತಾವರಗೇರಾ ಪಟ್ಟಣದ ಹಿರಿಯ ಬಿಜೆಪಿ ಮುಖಂಡರಾದ ಶ್ರೀ ಶೇಖರಗೌಡ ಪೋಲಿಸ್ ಪಾಟೀಲ್ ರವರು ಬಳ್ಳಾರಿ ಸಂಸದರು ದೇವೇಂದ್ರಪ್ಪ ಹಾಗೂ ಕೊಪ್ಪಳ ಸಂಸದರಾದ ಕರಡಿ ಸಂಗಣರವರು ಹಾಗೂ ಬಾಗಲಕೋಟ ಸಂಸದರಾದ ಗದ್ದಿಗೌಡ್ರು. ಕುಷ್ಟಗಿ ಮಾಜಿ ಶಾಸಕರು ಹಾಗೂ ಹಾಲಿ ಶಾಸಕರು. ಇವರುಗಳು ಎಲ್ಲಾರಿಗೂ ಅಭಿನಂದನೆಗಳು ತಿಳಿಸಿದ್ದಾರೆ. ಮುಖ್ಯವಾಗಿ ಬಳ್ಳಾರಿ ಹಾಗೂ ಬಾಗಲಕೋಟೆ. ರೈಲ್ವೆ ಮಾರ್ಗಕ್ಕೆ ಹೋರಾಟ ಮಾಡಿದ ಪ್ರತಿಯೊಬ್ಬರಿಗೂ ಹೃದಯ ಪೂರ್ವಕ ಧನ್ಯವಾದಗಳು ಸಲ್ಲಿಸಿದರು.
ಕುಷ್ಟಗಿ ಸೇರಿದಂತೆ ಪಟ್ಟಣದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ. ಸರ್ವೆ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಿದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವರು ಹಾಗೂ ರೈಲ್ವೆ ಮಂಡಳಿ ಸದಸ್ಯರು ಇವರಿಗೆ ಎಮ್ ಪಿ ಕರಡಿ ಸಂಗಣ್ಣನವರು ಅಭಿನಂದನೆ ಸಲ್ಲಿಸಿದ್ದು, ಈ ಕುರಿತಂತೆ ಸ್ಥಳೀಯರು ಕೂಡ ಪಕ್ಷಾತೀತ ವಾಗಿ ಕೊಪ್ಪಳ , ಬಳ್ಳಾರಿ , ಬಾಗಲಕೋಟೆ ಸಂಸದರಿಗೆ ಅಭಿನಂದನೆ ಸಲ್ಲಿಸಿದ್ದಾರೆ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮೀಸಿದ ಎಲ್ಲಾ ಜನಪ್ರತಿನಿಧಿಗಳಿಗೆ ನಮ್ಮ ತಾವರಗೇರಾ ನ್ಯೂಸ್ ಪತ್ರಿಕಾ ಬಳಗದವತಿಯಿಂದ ಅಭಿನಂದನೆಗಳು ಸಲ್ಲಿಸಲಾಯಿತು.
ವರದಿ – ಸಂಪಾದಕೀಯಾ