ಕೊಪ್ಪಳದ ಶ್ರೀಗವಿ ಮಠದಲ್ಲಿ 100 ಆಕ್ಸಿಜನ್ ಬೆಡ್ಗಳ ಕೋವಿಡ್ ಆಸ್ಪತ್ರೆ ಉದ್ಘಾಟನೆ.
ಕೊಪ್ಪಳ ಜಿಲ್ಲೆಯ ಕೊರೋನಾ ಸೋಂಕಿತರಿಗೆ ಚಿಕಿತ್ಸೆಗೆ ನೆರವಾಗಲು ಜಿಲ್ಲಾಡಾಳಿತ, ಜಿಲ್ಲಾ ಪಂಚಾಯತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಇವರ ಸಹಯೋಗದಲ್ಲಿ ಶ್ರೀ ಗವಿಮಠದ ಯಾತ್ರಿ ನಿವಾಸದಲ್ಲಿ 100 ಆಕ್ಸಿಜನ್ ಬೆಡ್‌ಗಳ “ಗವಿಮಠ ಕೋವಿಡ್ ಆಸ್ಪತ್ರೆ’’ಯನ್ನು ಮಂಗಳವಾರ (ಮೇ.11) ದಂದು ಜಿಲ್ಲಾ ಕ್ಷಯ ನಿರ್ಮೂಲನಾ ಅಧಿಕಾರಿ ಡಾ.ಮಹೇಶ್ ಉದ್ಘಾಟಿಸಿದರು.ಈ ವೇಳೆ ಕೋವಿಡ್ ಆಸ್ಪತ್ರೆಯ ಬಗ್ಗೆ ವಿವರಿಸಿದ ಗವಿಶ್ರೀಗಳು, ಮೂರು ದಿನಗಳ ಕಡಿಮೆ ಸಮಯದಲ್ಲಿ ಗವಿಮಠ ಹಾಗೂ ಜಿಲ್ಲಾಡಾಳಿತದ ಸಹಕಾರದಿಂದ ಸುಸಜ್ಜಿತ 100 ಆಕ್ಸಿಜನ್ ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನು ಸಿದ್ಧಪಡಿಸಲಾಗಿದೆ. ಪ್ರತಿಯೊಂದು ಕೊಠಡಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯ ವೈದ್ಯರಿಗೆ ಹಾಗೂ ಸಿಬ್ಬಂದಿಗಳ ವಸತಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ದಾಖಲಾಗುವ ಕೋವಿಡ್ ಸೋಂಕಿತರಿಗೆ ದೈಹಿಕ ಆರೋಗ್ಯ ಹಾಗೂ ಮನೋ ಧೈರ್ಯವನ್ನು ತುಂಬುವ ವ್ಯವಸ್ಥೆ ಮಾಡಲಾಗುತ್ತದೆ. ಇನ್ನೂ ಹೆಚ್ಚಿನ ಬೆಡ್‌ಗಳ ಅಗತ್ಯವಿದ್ದಲ್ಲಿ ಮಠದ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು. ಸಂಸದ ಕರಡಿ ಸಂಗಣ್ಣ ಅವರು, ಶ್ರೀಗಳ ಸೇವೆಯನ್ನು ಶ್ಲಾಘಿಸಿದರು ಹಾಗೂ ಸಂಬAಧಪಟ್ಟ ಅಧಿಕಾರಿಗಳಿಗೆ ಸಮರ್ಪಕ ನಿರ್ವಹಣೆ ಕುರಿತು ಸೂಚನೆಯನ್ನು ನೀಡಿದರು. ಈ ಕೋವಿಡ್ ಆಸ್ಪತ್ರೆಗೆ ದಾಖಲಾಗುವ ಸೋಂಕಿತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದAತೆ ಸರಿಯಾದ ಸಮಯಕ್ಕೆ ಔಷಧಿ, ಆಹಾರ ವ್ಯವಸ್ಥೆ ಮಾಡಬೇಕು. ಆಕ್ಸಿಜನ್ ಕೊರತೆ ಆಗದಂತೆ ಆಕ್ಸಿಜನ್ ಪೂರೈಕೆ ಮಾಡಿಕೊಳ್ಳಬೇಕು. ರೋಗಿಗಳು ಗುಣಮುಖರಾಗುವ ನಿಟ್ಟಿನಲ್ಲಿ ಅವರಲ್ಲಿ ಆತ್ಮಸ್ಥೆöÊರ್ಯ ತುಂಬಬೇಕು ಎಂದು ಸೂಚಿಸಿದರು. ಶಾಸಕ ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ನಿತ್ಯ ಸೋಂಕಿತರ ಪ್ರಮಾಣ ಅಧಿಕವಾಗುತ್ತಿದ್ದು, ಸೋಂಕಿತರನ್ನು ನಿಭಾಯಿಸಲು ಹಾಗೂ ಜನರ ರಕ್ಷಣೆಗೆ ಕೋವಿಡ್ ಆಸ್ಪತ್ರೆಗಳು ಅಗತ್ಯವಿದೆ. ಆ ನಿಟ್ಟಿನಲ್ಲಿ ಮಠದ ಸಹಕಾರದಿಂದ ಸುಸಜ್ಜಿತ ಕೋವಿಡ್ ಆಸ್ಪತ್ರೆಯನ್ನು ಸಿದ್ಧಪಡಿಸಲಾಗಿದೆ. ಜಿಲ್ಲೆಯ ಜನರನ್ನು ಕೋವಿಡ್‌ನಿಂದ ಪಾರುಮಾಡಲು ಈ ಕೋವಿಡ್ ಆಸ್ಪತ್ರೆ ಸಹಕಾರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಅಮರೆಗೌಡ ಬಯ್ಯಾಪೂರ ಹಾಗೂ ಪರಣ್ಣ ಮುನವಳ್ಳಿ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಟಿ., ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. ವರದಿ – ಸುಭಾಸ್ ಚಂದ್ರ ಜುಮಲಾಪೂರ್