ಕೂಡ್ಲಿಗಿ: ಗಲ್ಲಿ ಗಲ್ಲಿಗಳಲ್ಲಿ ಬಾಲಕರಿಂದ ಭರ್ಜರಿ ಗಣೇಶೋತ್ಸವ…..

Spread the love

ಕೂಡ್ಲಿಗಿ: ಗಲ್ಲಿ ಗಲ್ಲಿಗಳಲ್ಲಿ ಬಾಲಕರಿಂದ ಭರ್ಜರಿ ಗಣೇಶೋತ್ಸವ…..

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ, ತಾಲೂಕಿನ  ಗ್ರಾಮಗಳ ಗಲ್ಲಿ ಗಲ್ಲಿಗಳಲ್ಲಿ. ಗಣೇಶೋತ್ಸವ ಪ್ರಯುಕ್ತ  ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ, ಬಾಲಕರು ಯುವಕರು ಸಂಘಟಿತರಾಗಿ ಚಂದಾ ಸಂಗ್ರಹಿಸಿ ಬಹು ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಬಾಲಕಿಯರು ಯುವತಿಯರೂ ಕೂಡ ಕೈ ಜೋಡಿಸಿರುವುದು ತುಂಬಾ ವಿಶೇಷವಾಗಿದೆ,ಕೆಲೆವೆಡೆಗಳಲ್ಲಿ ಒಂದು ದಿನ ಹಲವೆಡೆ ಮೂರು ದಿನ ಕೆಲವೇ ಕೆಲವೆಡೆಗಳಲ್ಲಿ ಐದು ದಿನ ಗಣೇಶೋತ್ಸವ ಆಚರಿಸಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಸಾಂಪ್ರದಾಯಿಕವಾಗಿ, ಗಣೇಶ ಪ್ರತಿಷ್ಠಾಪನೆ ಸಾಂಗವಾಗಿಯೇ ಜರುಗಿದೆ. ವಿದ್ಯಾರ್ಥಿಗಳು ತುಂಬಾ ಉತ್ಸುಕರಾಗಿ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ತರುತ್ತಾರೆ, ಗಲ್ಲಿಗಳಲ್ಲಿನ ಬಾಲಕರು ಯುವಕರು ವಾದ್ಯ ವೃಂದದೊಂದಿಗೆ ಮೆರವಣಿಗೆ ಮೂಲಕ ತಂದು ನಿಗದಿತ ಸ್ಥಳದಲ್ಲಿ ಪ್ರತಿಷ್ಠಾಪಿಸುತ್ತಾರೆ. ಕೂಡ್ಲಿಗಿ ಪಟ್ಟಣದ 2ನೇ ವಾರ್ಡ್ ನಲ್ಲಿ ಬಾಲಕರು ಸಂಘಟಿತರಾಗಿ,ಗಲ್ಲಿಯಲ್ಲಿ ಗಣೇಶ ಪ್ರತಿಷ್ಠಾಪಿಸಿದ್ದರು ಹಾಗೂ ಹಿರೇಮಠ ವಿದ್ಯಾಪೀಠದ ಕಾಲೇಜ್ ವಿದ್ಯಾರ್ಥಿಗಳು ಗಣೇಶ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಿ ವಿಜೃಂಭಿಸಿದರು.

ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *