ಯಲಬುರ್ಗಾ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಎಲ್ಲಾ ಕಾಮಗಾರಿಯನ್ನು ನ್ಯಾಯಾಂಗ ತನಿಖೆಗೆ ನೀಡಿ. ಮಲ್ಲನಗೌಡ ಕೋನನಗೌಡ್ರ ಸಚಿವರಿಗೆ ಸವಾಲು. ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಯಲಬುರ್ಗಾ , ರಾಜ್ಯ .ಗುತ್ತಿಗೆದಾರ ಸಂಘದ ಅಧ್ಯಕ್ಷ ಬಿಜೆಪಿ ಸರ್ಕಾರ “40% ಕಮಿಷನ್.ಸರಕಾರ ಎಂದು ದೇಶದ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ .ನಿನ್ನೆ ಯಲಬುರ್ಗಾ ತಾಲ್ಲೂಕು .ಗುತ್ತಿಗೆದಾರರ ಸಂಘದಿಂದ ನಮ್ಮ ಕ್ಷೇತ್ರದಲ್ಲಿ ಗುತ್ತಿಗೆದಾರರಿಂದ ಶಾಸಕರು .ನಯಾಪೈಸೆ .ಪಡೆದಿಲ್ಲ .ಸತ್ಯ ಪ್ರಾಮಾಣಿಕ ವ್ಯಕ್ತಿಗಳು. ನಮ್ಮ ಕ್ಷೇತ್ರದಲ್ಲಿ ಯಾವುದೇ ಕಳಪೆ ಕಾಮಗಾರಿ ಭ್ರಷ್ಟಾಚಾರ ನಡೆದಿಲ್ಲ .ಎಂದು ಗುತ್ತಿಗೆದಾರ ಸಂಘ ನಿನ್ನೆ ಪತ್ರಿಕಾ ಹೇಳಿಕೆ ನೀಡಿದ್ದಾರೆ .ಇದು ಸತ್ಯಕ್ಕೆ ದೂರವಾದ ಸುದ್ದಿ ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ .ತಮಗೆ ಬೇಕಾದ ಗುತ್ತಿಗೆದಾರರ ಮೂಲಕ .ಕ್ಷೇತ್ರದಲ್ಲಿ ಅಂದಾಜು ಪತ್ರಿಕೆ ಪ್ರಕಾರ ಕಾಮಗಾರಿ ಮಾಡದೆ .ಕ್ಷೇತ್ರದಲ್ಲಿ ಬೇಕಾಬಿಟ್ಟಿ .ಕೆಲಸವನ್ನು ಗುತ್ತಿಗೆದಾರರು ಮಾಡಿದ್ದಾರೆ .ಗುತ್ತಿಗೆದಾರರು ನೀಡಿರುವ ಹೇಳಿಕೆ ನಾನು ತೀವ್ರವಾಗಿ ಖಂಡಿಸುತ್ತೇನೆ .ಕ್ಷೇತ್ರದಲ್ಲಿ ನಡೆದ ಎಲ್ಲಾ ಕಾಮಗಾರಿಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ನಿಮ್ಮ ನಿಜವಾದ ಬಣ್ಣ ಬಯಲಿಗೆ ಬರುತ್ತದೆ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮಲ್ಲನಗೌಡ ಕೋನನಗೌಡ್ರ.ಬಿಜೆಪಿ ನಾಯಕರಿಗೆ ಹಾಗೂ ಶಾಸಕರಿಗೆ ಬುಧವಾರ ಸವಾಲು ಹಾಕಿದ್ದಾರೆ. “ಬಿಜೆಪಿ ಸರಕಾರದ ಅವಧಿಯಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ ಎಂದು ಬೊಬ್ಬಿರಿಯುವ.ಯಲಬುರ್ಗಾ ಗುತ್ತಿಗೆದಾರರ ಸಂಘ .ಶಾಸಕ ಹಾಲಪ್ಪ ಆಚಾರ್ ಅವರನ್ನು ಓಲೈಸುವ ಕೆಲಸವನ್ನು ಮಾಡುತ್ತಿದ್ದಾರೆ ತಮ್ಮ ಪ್ರಾಮಾಣಿಕತೆ ಬಗ್ಗೆ ಅಷ್ಟೊಂದು ವಿಶ್ವಾಸವಿದ್ದರೆ ಕ್ಷೇತ್ರದಲ್ಲಿ ನಡೆದ ಎಲ್ಲ ಕಾಮಗಾರಿಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ತಮ್ಮ ಮೇಲಿರುವ ಆರೋಪದಿಂದ ಮುಕ್ತಿ ಹೊಂದಲಿ” ಎಂದಿದ್ದಾರೆ. ಕಮಿಷನ್ ಆಸೆಗಾಗಿ .ಯಲಬುರ್ಗಾ ವಿಧಾನಸಭೆ ಕ್ಷೇತ್ರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಣ್ಣ ಹಾಗೂ ಅತಿಸಣ್ಣ .ರೈತರ ಜಮೀನುಗಳಿಗೆ ಕೊಳವೆ ಬಾವಿ ಕೊರೆಸಿದರೆ ನಮಗೆ ದುಡ್ಡು ಬರೋದಿಲ್ಲ ಎಂಬ ದೂರದೃಷ್ಟಿ ಇಟ್ಟುಕೊಂಡು .ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನ ಇಲ್ಲದ ಕಾಲೋನಿಯಲ್ಲಿ ತಮಗೆ ಬೇಕಾದ ಗುತ್ತಿಗೆದಾರರ ಮೂಲಕ ಕಳಪೆ ಕಾಮಗಾರಿ ಮಾಡಿ ಸರ್ಕಾರದ ದುಡ್ಡನ್ನು ಲೂಟಿ ಮಾಡಿದ್ದೀರಿ .ನಿಮ್ಮ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಗುತ್ತಿಗೆದಾರರ ಸಂಘದಿಂದ ಪತ್ರಿಕಾಗೋಷ್ಠಿ ನಡೆಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. – ಮಲ್ಲನಗೌಡ ಕೋನನಗೌಡ್ರ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರು ಯಲಬುರ್ಗಾ ವಿಧಾನಸಭೆ ಕ್ಷೇತ್ರ..
ವರದಿ –✍️ ಸಂಪಾದಕೀಯಾ