ಸತ್ಯಕ್ಕಾಗಿ ನಮ್ಮ ಹೋರಾಟ, ಸತ್ಯವೇ ನಮ್ಮ ಜೀವಾಳ.
ಕೆಲವರಿಗೆ ದಿನಬೆಳಗಾದರೆ ಸಾಕು, ಈಗಂತೂ ಹೇಳತೀರದು…..ಪೂಜ್ಯ ಶಿವಮೂರ್ತಿ ಮುರುಘಾ ಶರಣರ ನಿಸ್ವಾರ್ಥ ಜನಪರ ಸೇವೆ ಕಾರ್ಯಗಳು ಕೆಲವು ಸ್ವಾರ್ಥಿಗಳಿಗೆ ಖಂಡಿತಾ ಸಲ್ಲಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದಕಾರಣ ಹೇಗಾದರೂ ಮಾಡಿ ಶರಣರನ್ನು ಕುತಂತ್ರ ಒಳಸಂಚಿನ, ರಾಜಕೀಯ ಅಟ್ಟಹಾಸ ಷಡ್ಯಂತ್ರದಿಂದ (ಶಿವಮೂರ್ತಿ ಮುರುಘಾ ಶರಣರನ್ನು) ಅಂದರೆ ಪೀಠದಿಂದ ಕೆಳಗಿಳಿಸುವ ಬಹು ದೊಡ್ಡ ಹುನ್ನಾರಗಳು ನಡೆಯುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಕೆಲವರು ಶಿವಮೂರ್ತಿ ಮುರುಘಾ ಶರಣರ ವಿರುದ್ಧ ನಿತ್ಯ ನಿರಂತರವಾಗಿ Facebook ಮತ್ತು what’s app ಸೇರಿದಂತೆ ಇನ್ನೀತರ electronic ಮಾಧ್ಯಮಗಳ ಮೂಲಕ ಶರಣರ ಕುರಿತು ಹಗುರವಾಗಿ ಮಾತನಾಡುವುದು,ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು, ಅವರಿಗೆ ಅವರ ಮನಸೋಇಚ್ಛೆ ನಿಂದಿಸಿ, ಖುಷಿ ಪಡೆಯುತ್ತಿರುವ ಸನ್ನಿವೇಶ ಮತ್ತು ಕೆಲಸದಲ್ಲಿ ನಿರತರಾಗಿದ್ದಾರೆ ಹಾಗೂ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಮಾಡುವುದು ಕಾಣುತ್ತೀದ್ದೇವೆ…. ಮಾಡಲಿ…ಬಹಳ ಸಂತೋಷ. ಕೆಲವರಿಗೆ ಇದರಿಂದ ಸಂತೋಷವಾಗುತ್ತದೆ ಎಂದರೆ…. ಮಾಡಲಿ….ಪರವಾಗಿಲ್ಲ…..ಆದರೆ….. ಕೆಲ…. ಪ್ರಗತಿಪರರು,ಬಸವ ತತ್ವ ಚಿಂತಕರು ಎಂದು ಹೇಳಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ, ಡೊಂಗಿ ಮುಖವಾಡ ಧರಿಸಿ, ಸೌಹಾರ್ದ ಸಹೋದರತೆ ಸಹಬಾಳ್ವೆ ಸಮಾನತೆಯ ಸಮಾಜವನ್ನು ಅಡ್ಡದಾರಿಗೆ ಕೊಂಡೊಯ್ಯುವ ಕೆಲಸದಲ್ಲಿ ತಲೀನರಾದ, ತಮ್ಮಷ್ಟಕ್ಕೆ ತಾವುಗಳು ಮಹಾ ಮಹಾ ಬುದ್ಧಿವಂತರು ಎಂದು ಹೇಳಿಕೊಂಡು ತಿರುಗುವ..ತಿರುಕರು…ಸಮಾಜದ್ರೋಹಿಗಳು……ಪೂಜ್ಯ ಶಿವಮೂರ್ತಿ ಮುರುಘಾ ಶರಣರನ್ನು ಹೀಯಾಳಿಸುವ ಕೆಲಸದಲ್ಲಿ ಬೆಳಿಗ್ಗೆ ಯಿಂದ ಸಾಯಂಕಾಲದ ವರೆಗೆ ನಿರತರಾಗಿದ್ದಾರೆ. ಆಗಲಿ ಸಂತೋಷ……ಯಾಕೇ, ಹೀಗೆಕೇ,,,ಶರಣರ ಮೇಲೆ ಇವರಿಗೆ ಇಷ್ಟೇಕೇ, ಹೊಟ್ಟೆ ಕಿಚ್ಚು, ದ್ವೇಷ,ಮದ, ಮತ್ಸರ, ಅಹಂಕಾರ ಎಂದರೆ ……ಇವರು ಹೇಳುವ ಡೊಂಗಿ, ಸ್ವಾರ್ಥ ಮಾತುಗಳಿಗೆ ಶಿವಮೂರ್ತಿ ಮುರುಘಾ ಶರಣರು ಯಾವತ್ತೂ, ಯಾವಾಗಲೂ ಬೆಲೆ ಕೊಡುವುದಿಲ್ಲ. ಇನ್ನು ಹೇಳಬೇಕೆಂದರೆ ಇವರ ಕುತಂತ್ರಿಗಳ ಆಟ ಶರಣರ ಮುಂದೆ ನಡೆಯುವುದಿಲ್ಲ. ಎನ್ನುವುದೇ ಇವರಿಗೆ ಅರಗಿಸಿಕೊಳ್ಳಲಾಗದ ನಿಜ ಸಂಗತಿಗಳು…….ಆದಕಾರಣ ಇವರು ಪ್ರತಿನಿತ್ಯ ಶರಣರ ಕುರಿತು ಹಗುರವಾಗಿ ಮಾತನಾಡುತ್ತಾರೆ ಎಂದು ಜನಸಾಮಾನ್ಯರು ಆಡಿಕೊಳ್ಳುವುದು ಕಾಣುತ್ತೇವೆ. ಈ ಮಾತುಗಳು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ…… ಶರಣರ ಜೊತೆಗೆ ಆ ಬಸವರಾಜನ್ ಮೇಲೆಯೂ ದೌರ್ಜನ್ಯ ಪ್ರಕರಣ ದಾಖಲಾಗಿದೆ.ಆದರೆ ಯಾರೊಬ್ಬ ಮಾಹಾನುಭಾವರು ಬಸವರಾಜನ ಕುರಿತು ಇಲ್ಲಿಯವರೆಗೂ ಒಂದು ಸಣ್ಣ ಮಾತನಾಡಿ ಖಂಡಿಸುವ ಕೆಲಸ ಮಾಡಿಲ್ಲ. ಅವನ ಬಗೆ ಬೇರೆ ಕಡೆಗಳಲ್ಲಿ ಬೆರೆಯುವ ಕೆಲಸ ಸಹ ಮಾಡದೇ ಇದ್ದದ್ದು ಯಾಕೇ ಎಂಬುದೇ? ಇಲ್ಲಿಯವರೆಗೂ ಗೊತ್ತಾಗದೆ ಇರುವ ದೊಡ್ಡ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ?…..ಹೀಗೆಕೇ ತಾರತಮ್ಯ ನೀತಿ ಎಂದರೆ……ನಮ್ಮನ್ನೇ…. ಹೀಯಾಳಿಸುವ ಕೆಲಸದಲ್ಲಿ ನಿರತಾಗುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಇವರಿಗೆ ಸತ್ಯಾಂಶ ಬೇಕಾಗಿಲ್ಲ. ಸ್ವಾರ್ಥ ರಾಜಕೀಯ ಮಾಡಿ, ಶರಣರನ್ನು ಪೀಠದಿಂದ ಕೆಳಗಿಳಿಸಿ…..ತಮ್ಮ ಬೇಳೆ ಬೇಯಿಸಿಕೊಳ್ಳುವ ಒಂದು ವ್ಯವಸ್ಥಿತ ಭಾಗವೇ ಇದು… ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಅಲ್ಲದೇ….ಮಕ್ಕಳನ್ನು ಮಠದಿಂದ ಕರೆದುಕೊಂಡು ಹೋದ ಬಸವರಾಜ ಹಾಗೂ ಅವರ ಪತ್ನಿ …… ಮಕ್ಕಳನ್ನು ಒಂದು ತಿಂಗಳ ಕಾಲ ಎಲ್ಲಿ ಇಟ್ಟಿದ್ದರು.(ಕೂಡಿ ಹಾಕಿದರು ಎಂಬುವ ಮಾತುಗಳು ಸಹ ಅಲ್ಲಲ್ಲಿ ಕೇಳಿ ಬರುತ್ತಿದೆ.ಈ ಕುರಿತು ವಿಸ್ತೃತವಾದಂತಹ ತನಿಖೆ ಆದಾಗಲೇ ಸತ್ಯಾಂಶ ಬಯಲಿಗೆ ಬರುತ್ತದೆ ) ಎನ್ನುವುದು ಇಲ್ಲಿಯವರೆಗೆ ತಿಳಿಯದ ಡಾಲರ್ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ. ಹೀಗೆ…… ಹತ್ತಾರು… ಬೆಳವಣಿಗೆಗಳು ಇಲ್ಲಿಯವರೆಗೂ ಜರುಗಿವೆ……… ಮತ್ತೆ.. ಇಷ್ಟೇಲ್ಲಾ ಬೆಳವಣಿಗೆಗಳು ನಡೆಯುತ್ತಿವೆ….ಇದನ್ನು ಗಮನಿಸಿದ ಯಾರೇ ವ್ಯಕ್ತಿ ಆಗಲಿ ಪ್ರಾಮಾಣಿಕತೆ ಪ್ರಬುದ್ಧತೆ ನಿಷ್ಕಲ್ಮಶ ಮನಸ್ಸಿನಿಂದ ಸತ್ಯವನ್ನು ಹೇಳುವ ಮತ್ತು ಬೆರೆಯುವ ಕೆಲಸ ಮಾಡದೇ ಇರಲು ಹೇಗೆ ಸಾಧ್ಯ ಇದೆ ಹೇಳಿ?…… ಇನ್ನು ಇದ್ದಿದ್ದು ಇದ್ದ ಹಾಗೆ ಬರೆದರೆ…. ಕೆಲವರಿಗೆ ಇದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವೈಯಕ್ತಿಕವಾಗಿ ನಿಂದಿಸುವ ಕೆಲಸ ಮಾಡುತ್ತಿದ್ದಾರೆ.ಅಂದರೆ ಇವರಿಗೆ ಬಸವರಾಜನ್ ಮಾಡಿರುವ ಮತ್ತು ಮಾಡುತ್ತಿರುವ ಅನ್ಯಾಯದ ಕೆಲಸಗಳು ಕಾಣುವುದಿಲ್ಲ.ಅವನ ವಿರುದ್ಧ ಇವರು ಮಾತನಾಡುವುದಿಲ್ಲ. ಮಾತನಾಡುವ ಶಕ್ತಿ ಇವರಿಗೆ ಖಂಡಿತಾ ಇಲ್ಲವೇ ಇಲ್ಲ … ಎಂಬುದು ಅರ್ಥವಾಗುತ್ತಿದೆ. ಅಲ್ಲದೆ ಆ ಬಸವರಾಜ ಆಸಾಮಿ ನಾಪತ್ತೆ ಬೇರೆ….. ಆದರೂ ಸಹ ಬಸವರಾಜ ಬಗೆ ಇವರಿಗೆ ಬಹಳ ಕನಿಕರ ಇದೆ ಎಂಬುದು ಸ್ಪಷ್ಟವಾಗುತ್ತದೆ. ಇರಲಿ ಪರವಾಗಿಲ್ಲ……ಆದರೆ ಇಂದಿನ ಕೆಲ ಮಾಧ್ಯಗಳು ಸೇರಿದಂತೆ ಕೆಲ ಸ್ವಾರ್ಥಿಗಳು ಸತ್ಯಾಂಶದ ಕುರಿತು ಯಾಕೇ ಬರೆಯುವುದಿಲ್ಲ.ಹೇಳುವುದಿಲ್ಲ….ಎನ್ನುವದೇ ತಿಳಿಯದ ಡಾಲರ್ ಪ್ರಶ್ನೆ…..?…..ಇನ್ನು ಈ ವ್ಯವಸ್ಥಿತ ಆರೋಪದಲ್ಲಿ ಒಡನಾಡಿ ಸಂಸ್ಥೆಯವರ ಪಾತ್ರ ಏನು? ಪಾತ್ರದ ಬಗೆಯೂ ಸಂಪೂರ್ಣ ತನಿಖೆ ಮಾಡಬೇಕಲ್ಲವೇ…. ಯಾಕೇ ಆಗುತ್ತಿಲ್ಲ. ಇಂತಹ ನೂರಾರು ಪ್ರಶ್ನೆಗಳು ಕಾಡುತ್ತಿರುವ ಈ ಸಂದರ್ಭದಲ್ಲಿ ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಇಂತಹ ಪ್ರಶ್ನೆಗಳು ಎತ್ತಿರುವ ವ್ಯಕ್ತಿಗಳನ್ನು ನಿಂದಿಸಿ, ಟೀಕೆ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಹಾಗಾದರೆ ಇದುವೇ ಪ್ರಜಾಪ್ರಭುತ್ವವೇ….ಪೂಜ್ಯ ಶಿವಮೂರ್ತಿ ಮುರುಘಾ ಶರಣರನ್ನು ಟೀಕಿಸುವ ನೀವು. ನಿಮ್ಮ ಸ್ವಾರ್ಥದ ನಡೆಯನ್ನು ಜನರಿಗೆ ತಿಳಿಸುವ ಕಾರ್ಯ ನಾವು ಮಾಡಿದರೇ….. ನಿಮಗೆ ಏಕೇ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂದರೆ ಸತ್ಯ ಜನರಿಗೆ ಗೊತ್ತಾದರೆ…. ನಿಮ್ಮ ಕುತಂತ್ರದ ಆಟ ನಡೆಯುವುದಿಲ್ಲ… ಎಂಬ ಹೆದರಿಕೆಯೇ ?…..ಹೇಗೆ?…….ಅಲ್ಲದೆ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಹೀಗಾದರೆ ಸುಮನ್ನೇ ಕೂಡುತ್ತಿದ್ದರೆ.ಎನ್ನುವ ಪ್ರಶ್ನೆಗಳು ನಮ್ಮನ್ನು ನೀವು ಕೇಳಿ, ಸತ್ಯವನ್ನು ಅಂದರೆ ನಮ್ಮ ಬಾಯಿ ಮುಚ್ಚಿಸುವ ಕೆಲಸ ನೀವುಗಳು ವ್ಯವಸ್ಥಿತವಾಗಿ ಮಾಡುತ್ತಿದ್ದೀರಿ.ಅಂದರೆ ಮತ್ತೇನು ಹೇಳಬೇಕು….. ಇಂತಹ ಅವಿವೇಕದ, ಆವೇಶದ, ಆತುರದ ಮಾತುಗಳನ್ನು ಆಡಿಕೊಂಡು ನಮ್ಮನ್ನು ಹೆದರಿಸುವ ಕೆಲಸ ನಿಮ್ಮಂತಹ ಜನರಿಂದಲೇ ಆಗುತ್ತಿದೆ.ಎನ್ನುವುದು ಮುರಿಯಬೇಡಿ. (ಒಂದು ಮಾತನ್ನು ಈ ಸಂದರ್ಭದಲ್ಲಿ ಹೇಳಲೇಬೇಕಾಗಿದೆ… ಯಾರ – ಯಾವ,… ಮನೆಯ ಹೆಣ್ಣು ಮಕ್ಕಳಿಗೆ ಅನ್ಯಾಯ ಆದರೆ, ಅವರಿಗೆ ಅನ್ಯಾಯವಾದರೇ ಖಂಡಿತ ಸಹಿಸಿಕೊಳ್ಳುವುದಿಲ್ಲ. ಸಮರ್ಥನೆಯಂತೂ ಎಂದೂ ಯಾವತ್ತೂ ಮಾಡಿಕೊಳ್ಳುವುದಿಲ್ಲ. ಹೆಣ್ಣು ಮಕ್ಕಳ ನ್ಯಾಯಕ್ಕಾಗಿ ಹಗಲಿರುಳು ಹೋರಾಡುತ್ತೇವೆ. ಅವರ ನ್ಯಾಯಕ್ಕಾಗಿ ನಮ್ಮ ಜೀವ ಕೊಡಲು ಹಿಂಜರಿಯುವುದಿಲ್ಲ.) ಎನ್ನುವುದು ನೀವು ಮರೆಯಬಾರದು. ಸತ್ಯಕ್ಕೆ ಸಾವಿಲ್ಲ….ಎಂಬ ದಾರಿಯಲ್ಲಿ ಬದುಕುತ್ತಿರುವವರು,ನಾವು…..ಸಾವಿಗೆ ಹೆದರಿ ಓಡಿ ಹೋಗುವ, ಸುಳ್ಳನ್ನು ಹೇಳುವ,ವೈಭವಿಕರಿಸುವ ಸಂಸ್ಕೃತಿ ನಮ್ಮದಲ್ಲವೇ ಅಲ್ಲ. ನಮ್ಮದು ಬುದ್ದ ಬಸವ, ಕನಕದಾಸರ, ಸಂತ ವಾಲ್ಮೀಕಿ ಅಂಬೇಡ್ಕರರ, ಸ್ವಾಮಿ ವಿವೇಕಾನಂದರ, ಗಾಂಧೀಜಿ, ಕಲಾಂ ರವರ ತತ್ವ ಚಿಂತನೆಗಳು ಅಳವಡಿಸಿಕೊಂಡು ಸಾಗುವ ದಾರಿಯಲ್ಲಿ ಜೀವನ ಸಾಗುಸುತ್ತಿರುವವರು ನಾವು…..ಯಾರಿಗೂ ಅಂಜುವ,ಅಳಕುವ ಪ್ರಶ್ನೆಯೇ ಇಲ್ಲ….. ಸತ್ಯವನ್ನು ಖಡಾ ಖಂಡಿತವಾಗಿಯೂ ಹೇಳುತ್ತೇವೆ…….ಕೊನೆಯದಾಗಿ….ಶಿವಮೂರ್ತಿ ಮುರುಘಾ ಶರಣರು ಕುರಿತು ಹಗುರವಾಗಿ ಮಾತನಾಡುವುದನ್ನು ನೋಡುತ್ತಿದ್ದೇವೆ. ಅದೇ ರೀತಿ ಬಸವರಾಜನ ಬಗೆಯೂ…. ಹಗುರವಾಗಿ ಮಾತನಾಡಿ…… ಯಾಕೇ…ಮಾತನಾಡುತ್ತಿಲ್ಲ. .. ಯಾಕೇ ಇನ್ನು, ಯಾವ ವ್ಯಕ್ತಿ, ಮಾಧ್ಯಮಗಳು ಇನ್ನೂ ತುಟಕ್ಕ ಪಿಟಕ್ಕ ಎನ್ನದೇ ಇರುವುದೇ ಕಾರಣ ತಿಳಿಯುತ್ತಿಲ್ಲ….ಇವನ ಮೇಲೆಯೂ ದೌರ್ಜನ್ಯ ಕೇಸ್ ದಾಖಲಾಗಿದೆ ಅಲ್ಲವೇ….. ಯಾಕೇ ಹೀಗೇಕೆ….ಕಾನೂನು ಎಲ್ಲರಿಗೂ ಒಂದೇ ತಾನೇ,…..ಸತ್ಯ ಎಲ್ಲರಿಗೂ ಒಂದೇ ತಾನೇ,…?….. ಯಾರೇ ತಪ್ಪು ಮಾಡಿದರೂ ಸಹ ಕಠಿಣವಾದ ಶಿಕ್ಷೆಯಾಗಲಿ….ಆದರೆ ಶರಣರನ್ನು ಹೀಯಾಳಿಸಿ…ಬಸವರಾಜನ ಕುರಿತು ಯಾವುದೇ ಮಾತುಗಳು…ಆಡದೇ… ಬರೆಯದೇ ಇರುವ ಗಂಜಿ ಗಿರಾಕಿಗಳ… ಸ್ವಾರ್ಥಿಗಳ ನಡುವೆ…..ಸತ್ಯ ಮುಚ್ಚಿ ಹೋಗಬಾರದೆಂಬುದೇ ನಮ್ಮ ಕಳಕಳಿ. ಈ ಕುತಂತ್ರ ಒಳಸಂಚಿನ ರಾಜಕೀಯ ನಾಟಕ ಎಷ್ಟು ದಿನ ನಡೆಯುತ್ತದೆ ಎನ್ನುವುದು ಕಾದು ನೋಡೋಣ……ಅಂತಿಮವಾಗಿ…. ತಪ್ಪು ಯಾರೇ ಮಾಡಲಿ ಅವರಿಗೆ ಶಿಕ್ಷೆ ಆಗಲಿ…. ಹೆಣ್ಣುಮಕ್ಕಳಿಗೆ ನ್ಯಾಯ ಸಿಗಲಿ .
ವರದಿ – ಸಂಗಮೇಶ ಎನ್ ಜವಾದಿ, ಬೀದರ.