ಯಲಬುರ್ಗಾ : ಪಟ್ಟಣದ ಚೆನ್ನಮ್ಮ ವೃತ್ತದ ಬಳಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಅಭಿಯಾನ ಜಾಗೃತಿ……
ರಾಷ್ಟ್ರೀಯ ಪೋಷಣ್ ಮಾಸಾಚರಣೆ ಜಾಗೃತಿ ಅಭಿಯಾನ ಭಿತ್ತಿಪತ್ರ ಪ್ರದರ್ಶಿಸಲಾಯಿತು, ಯಲಬುರ್ಗಾ : ಪಟ್ಟಣದ ಚೆನ್ನಮ್ಮ ವೃತ್ತದ ಬಳಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ರಾಷ್ಟ್ರೀಯ ಪೋಷಣ್ ಮಾಸಾಚರಣೆ, ಜಾಗೃತಿ ಅಭಿಯಾನ ನಡೆಯಿತು. ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧೂ ಎಲಿಗಾರ್ ಅವರು ಮಾತನಾಡಿ, ‘ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿಯ ಎದೆಹಾಲು ನೀಡುವುದನ್ನು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಈ ಬಗ್ಗೆ ಎಲ್ಲರೂ ಜಾಗೃತಿ ವಹಿಸಬೇಕು. ಗರ್ಭಿಣಿಯರು, ಬಾಣಂತಿಯರು ಯಾವುದೇ ಕಾರಣಕ್ಕೂ ಅಪೌಷ್ಟಿಕತೆಯಿಂದ ಹಾಗೂ ರಕ್ತಹೀನತೆಯಿಂದ ಬಳಲದಂತೆ ಸದಾ ನಿಗಾವಹಿಸಬೇಕು. ಇದರಿಂದ ಎರಡೂ ಜೀವಗಳು ಅನಾರೋಗ್ಯಕ್ಕೆ ತುತ್ತಾಗುವ ಅಪಾಯಗಳು ಹೆಚ್ಚಾಗಲಿವೆ. ಮನೆಯಂಗಳದಲ್ಲಿ ಕೈತೋಟ ಬೆಳೆಸುವುದು, ಮಕ್ಕಳಿಗೆ ಕೋಳಿ ಮೊಟ್ಟೆ, ಮೊಳಕೆ ಕಾಳು ತಿನ್ನಿಸುವುದು ಮೊದಲಾಗಿ ಒಂದು ತಿಂಗಳ ಕಾಲ ಪೋಷಣ್ ಮಾಸಾಚರಣೆಯ ಅಭಿಯಾನದ ಉದ್ದೇಶವಾಗಿದೆ. ಈ ಕುರಿತಂತೆ ತಾಯಂದಿರಲ್ಲಿ ಅರಿವು ಮೂಡಿಸಲು ಯಲಬುರ್ಗಾ ಪಟ್ಟಣ ಹಾಗೂ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಸಲಾಗುತ್ತಿದೆ’ ಎಂದರು. ಇದೇ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕರಾದ ಜಯಲಕ್ಷ್ಮಿ, ಹಾಗೂ ಚೆನ್ನಮ್ಮ, ಪಟ್ಟಣದ ಹಾಗು ತಾಲೂಕಿನ ಎಲ್ಲಾ ವಲಯದ ಮೇಲ್ವಿಚಾರಕರು ಅಂಗನವಾಡಿ ಕಾರ್ಯಕರ್ತೆಯರು ಇದ್ದರು,
ವರದಿ – ಹುಸೇನಬಾಷ ಮೋತೆಖಾನ್