ನ್ಯಾಷನಲ್ ಐಕಾನಿಕ್ ಪ್ರಶಸ್ತಿಗೆ ಜಾಗೃತಿ ಓಟಗಾರ ಮೋಹನ್ ಕುಮಾರ್ ದಾನಪ್ಪ ಆಯ್ಕೆ, ಸೆ 18 ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರಧಾನ!
ಸೆ:1, ಕವಿತಾ ಮೀಡಿಯಾ ಸೋರ್ಸ್ ಪ್ರೈವೇಟ್ ಲಿಮಿಟೆಡ್ ನ ಹೈಬ್ರಿಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿಯು ಕಂಪ್ಲಿ ನಿವಾಸಿ ಪ್ರಸ್ತುತ ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಮೋಹನ್ ಕುಮಾರ್ ದಾನಪ್ಪನವರನ್ನ ನ್ಯಾಷನಲ್ ಐಕಾನಿಕ್ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ವಾಹಿನಿಯ ಸಂಪಾದಕರಾದ ಬಿ.ಎನ್.ಹೊರಪೇಟಿ ರವರು ತಿಳಿಸಿದ್ದಾರೆ. ರಾಜ್ಯದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಹಲವಾರು ಪ್ರಮುಖ ವಿಷಯಗಳ ಕುರಿತು ಜಾಗೃತಿಗಾಗಿ ವಿನೂತನ ಮ್ಯಾರಥಾನ್ ಮಾಡುವ ಮೂಲಕ ಮತ್ತು ಸುಮಾರು ವರ್ಷಗಳಿಂದ ಹಲವಾರು ಮ್ಯಾರಥಾನ್ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕಳೆದ ವರ್ಷ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರ ಪಡೆದ ಜಾಗೃತಿ ಓಟಗಾರ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರ ಕ್ರೀಡಾ ಕ್ಷೇತ್ರದಲ್ಲಿನ ಸೇವೆಯನ್ನ ಪರಿಗಣಿಸಿ ಕವಿತಾ ಮೀಡಿಯಾ ಸೋರ್ಸ್ ಪ್ರೈವೇಟ್ ಲಿಮಿಟೆಡ್ ನ ಹೈಬ್ರಿಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿಯು ನ್ಯಾಷನಲ್ ಐಕಾನಿಕ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ, ಇದೇ ತಿಂಗಳು18 ರಂದು ದೆಹಲಿಯಲ್ಲಿ ನಡೆಯುವ ದೆಹಲಿ ಕನ್ನಡ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ತಿಳಿಸಿದ್ದಾರೆ,
ವರದಿ – ಮಹೇಶ ಶರ್ಮಾ