ಮಕ್ಕಳಿಗೆ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಕೂಡಲೇ ಪೀಠ ತ್ಯಾಗ ಮಾಡಿ. ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕು ಎಂದು ಸಾಮಾಜಿಕ ಸಂಘರ್ಷ ಸಮಿತಿವತಿಯಿಂದ ಒತ್ತಾಯ……
ಮುರುಘಾ ಶ್ರೀಗಳು ತಮ್ಮ ಮೇಲೆ ಬಂದಿರುವ ಆರೋಪವನ್ನು ಬುದ್ಧ, ಏಸು, ಸಾಕ್ರಟೀಸ್ ಮತ್ತು ಬಸವಣ್ಣನ ಮೇಲೆ ಬಂದ ಆರೋಪಗಳೊಂದಿಗೆ ಸಮೀಕರಿಸಿಕೊಂಡು ತಾವೂ ಆ ಮಹಾ ಚೇತನಗಳಷ್ಟೇ ಪ್ರಧಾನರೆಂದು ಬಿಂಬಿಸಿಕೊಂಡಿದ್ದಾರೆ. ಬುದ್ಧ, ಏಸು ಮತ್ತಿತರೇ ಮಹಾಪುರುಷರ ಮೇಲೆ ಆರೋಪ ಬಂದಾಗ ಆ ಎಲ್ಲರೂ ಸ್ವಯಂ ಸ್ಫೂರ್ತಿಯಲ್ಲಿ ತನಿಖೆಗೆ ಒಳಪಟ್ಟಿದ್ದರು. ಅವರಂತೆ ಮುರುಘಾ ಶ್ರೀಗಳು ತನಿಖೆಗೆ ಒಳಪಡಲಿ, ಅದಕ್ಕಾಗಿ ತನಿಖೆ ಮುಗಿಯುವವರೆಗೆ ಪ್ರಭಾವಶಾಲಿಯಾದ ತಮ್ಮ ಪೀಠದಿಂದ ದೂರವಿರಲಿ ಎಂದು ಒತ್ತಾಯಿಸಿದರು. ಆರೋಪ ಅತ್ಯಂತ ಗಂಭೀರ ಸ್ವರೂಪವಾಗಿರುವುದರಿಂದ ದಕ್ಷ, ಪ್ರಾಮಾಣಿಕ, ನೈತಿಕ, ಜಾತ್ಯಾತೀತ ಮತ್ತು ಶುದ್ಧ ನ್ಯಾಯಪರತೆಯ ವ್ಯಕ್ತಿತ್ವ ಉಳ್ಳವರ ತಂಡದಿಂದ ತನಿಖೆ ನಡೆಯಬೇಕು. ಸಂಧಾನಕ್ಕೂ ಸಿದ್ಧ ಸಮರಕ್ಕೂ ಸಿದ್ಧ ಎಂಬ ಮುರುಘಾ ಶ್ರೀಗಳ ಮಾತು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಆದ್ದರಿಂದ ಶ್ರೀಗಳ ಈ ಮಾತನ್ನು ಗಂಭೀರವಾಗಿ ಪರಿಗಣಿಸಿ ತನಿಖಾ ವ್ಯಾಪ್ತಿಗೆ ಒಳಪಡಿಸಬೇಕು ಎಂದ ಅವರು, ಸಂತ್ರಸ್ಥ ಬಾಲಕಿಯರಿಗೆ ಸೂಕ್ತವಾದ ರಕ್ಷಣೆ ಕೊಡುವ ಅಗತ್ಯವಿದೆ ಎಂದು ಹೇಳಿದರು. 1-9-2022, ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ಅಂಬೇಡ್ಕರ್ ಸರ್ಕಲ್ ನಿಂದ ಎಸಿ ಕಚೇರಿ ಅವರಿಗೂ ಪ್ರತಿಭಟನೆ ಮಾಡಲಾಗುತ್ತದೆ ಎಸಿ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗುತ್ತದೆ ಸಾಮಾಜಿಕ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷರಾದ ಪಿ ತಿಪ್ಪೇರುದ್ರಪ್ಪ ಗಾಂಧಿನಗರ, ಗೌರವ ಅಧ್ಯಕ್ಷರಾದ ಬಿ ಎನ್ ನಾಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೊಮ್ಮನೂರ್ ಪರಶುರಾಮ್, ಮತ್ತು ಜಿಲ್ಲಾ ತಾಲೂಕು ಪದಾಧಿಕಾರಿಗಳು ಭಾಗವಹಿಸಿದರು.
ವರದಿ – ಸಂಪಾದಕೀಯ