ಹುಲಿಹೈದರ ಗ್ರಾಮಕ್ಕೆ ಪ್ರಗತಿಪರ ಚಿಂತಕರು, ಹೈಕೋರ್ಟ್ ವಕೀಲರು, ಹೋರಾಟಗಾರರ ತಂಡವು ಭೇಟಿ ನೀಡಿ….

Spread the love

ಹುಲಿಹೈದರ ಗ್ರಾಮಕ್ಕೆ ಪ್ರಗತಿಪರ ಚಿಂತಕರು, ಹೈಕೋರ್ಟ್ ವಕೀಲರು, ಹೋರಾಟಗಾರರ ತಂಡವು ಭೇಟಿ ನೀಡಿ….

ಹುಲಿಹೈದರ ಪ್ರಕರಣ ಕುರಿತಂತೆ, ಆ ಪ್ರಕರಣದ ಹಿಂದೆ ಇರುವ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು, ಇಂದು ಹುಲಿಹೈದರ ಗ್ರಾಮಕ್ಕೆ ಪ್ರಗತಿಪರ ಚಿಂತಕರು, ಹೈಕೋರ್ಟ್ ವಕೀಲರು, ಹೋರಾಟಗಾರರ ತಂಡವು ಭೇಟಿ ನೀಡಿ ,ನೊಂದ ಕುಟುಂಬದ ಮನೆಗಳಿಗೆ ಹೋಗಿ, ಆ ಮನೆಯ ಸದಸ್ಯರೆಲ್ಲರನ್ನು ಮಾತನಾಡಿಸಿ, ಅವರುಗಳಿಗೆ ಸಾಂತ್ವನದ ಮಾತುಗಳನ್ನು ಹೇಳಿ, ದೈರ್ಯದಿಂದಿರುವಂತೆ ಕೇಳಿಕೊಂಡರು.ಅರವಿಂದ ನಾರಾಯಣ ಪಿ, ಯು, ಸಿ, ಎಲ್ ಸಂಘಟನೆಯ ರಾಜ್ಯ ಅಧ್ಯಕ್ಷರು,ಮಣಿ ಆಲ್ ಇಂಡಿಯಾ ಪೀಪಲ್ಸ್ ಫೋರಮ್ ಸಂಘಟನೆಯ ಸದಸ್ಯರು, ಮನು ಗಮನ ಮಹಿಳಾ ಸಂಘಟನೆಯ ಸದಸ್ಯರು, ಮಹ್ಮದ್ ಅಫೀಜ್ ಎ ಆಯ್ ಎಲ್ ಎ ಜೆ ಸಂಘಟನೆಯ ರಾಷ್ಟ್ರೀಯ ಸಮಿತಿಯ ಖಜಾಂಚಿ, ಮಹಾಂತೇಶ ಕೊತಬಾಳ ಅಧ್ಯಕ್ಷರು ಪಿ ಯು ಸಿ ಎಲ್ ಜಿಲ್ಲಾ ಕಮಿಟಿ ಕೊಪ್ಪಳ, ಇವರು ತಂಡದ ನೇತ್ತತ್ವವನ್ನು ವಹಿಸಿಕೊಂಡಿತ್ತು. ನೊಂದ ಕುಟುಂಬಕ್ಕೆ ಪರಿಹಾರ ಸಿಗಬೇಕು, ಉನ್ನತ ಮಟ್ಟದ ತನಿಖೆಯನ್ನು ನಡೆಸಬೇಕು, ಅಮಾಯಕರನ್ನು ಬಿಡುಗಡೆಗೊಳಿಸಿ, ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ ತಕ್ಷಣ ಬಂಧಿಸಬೇಕು.ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಶಾಂತಿ ಸಭೆಗಳನ್ನು ನಡೆಸಬೇಕು,ಮೃತ ವ್ಯಕ್ತಿಯ ಪ್ರತಿ ಕುಟುಂಬಕ್ಕೆ ತಕ್ಷಣ 50 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಬೇಕು ಹಾಗೂ ಚಿಕಿತ್ಸೆ ಪಡೆಯುತ್ತಿರುವ ಧರ್ಮಜ್ಜ ನಾಗಲಿಂಗಪ್ಪನಿಗೆ 25 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಯಿತು. ಪ್ರಕರಣ ಕುರಿತಂತೆ ನಿಜಾಂಶವನ್ನು ಲಿಖಿತ ರೂಪದಲ್ಲಿ ವರದಿಯನ್ನು ಸರ್ಕಾರಕ್ಕೆ ನೀಡುವುದು ತಂಡದ ಉದ್ದೇಶ. ಈ ತಂಡದ ಜೊತೆ ವಿವಿಧ ಸಂಘಟನೆಗಳ ಮುಖಂಡರಾದ ಬಸವರಾಜ ಶೀಲವಂತರ್, ಕ್ಲೀಪ್ಟನ್, ಕರಿಯಪ್ಪ ಗುಡಿಮನಿ, ಡಿ, ಎಚ್, ಪೂಜಾರ, ಆನಂದ ಭಂಡಾರಿ, ಕನಕಪ್ಪ ದೊಡ್ಡಮನಿ, ರಾಮಣ್ಣ ಜೋಡಿ, ಜೆ, ಭಾರಧ್ವಾಜ್, ಲೋಕೇಶ, ಪಂಪಾಪತಿ ಕೆಂಚಪ್ಪ ಹಾಗೂ ರಾಜಾನಾಯಕ  ಮುತಾದವರು ಪಾಲುಗೊಡಂದ್ದರು..

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *