ಸರ್ಕಾರಿ (ಗೌಂವಠಾಣ) ಜಮೀನು ಉಳಿವಿಗಾಗಿ ಇಂದು ಎಎಪಿವತಿಯಿಂದ ಮಾನ್ಯ ತಹಶಿಲ್ದಾರರ ರವರಿಗೆ ಮನವಿ..

Spread the love

ಸರ್ಕಾರಿ (ಗೌಂವಠಾಣ) ಜಮೀನು ಉಳಿವಿಗಾಗಿ ಇಂದು ಎಎಪಿವತಿಯಿಂದ ಮಾನ್ಯ ತಹಶಿಲ್ದಾರರ ರವರಿಗೆ ಮನವಿ..

ತಾವರಗೇರಾ ಪಟ್ಟಣಕ್ಕೆ ಹೊಂದಿಕೊಂಡಿರುವ ಅಂದರೆ ಹೃದಯ ಭಾಗವಾದ ಈ ಜಮೀನು ಇಂದು ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿಯಾಗಿದ್ದು ಇರುತ್ತದೆ. ಆದ್ದರಿಂದ ಈ ಸರಕಾರಿ ಮೂಲ ಗೌಂವಠಾಣ ಜಮೀನು ಭೂ ಹಿನರಿಗೆ ಹಂಚಿಕೆ ಮಾಡಬೇಕು. ಒಂದುವೇಳೆ ಇದರಲ್ಲಿ ತಾರತಮ್ಯ ಮಾಡಿದ್ದಲ್ಲಿ  ಮುಂದಿನ ದಿನಮಾನಗಳಲ್ಲಿ ಸರಕಾರಿ ಜಮೀನು ಉಳಿವಿಗಾಗಿ ಎಎಪಿ ತಾವರಗೇರಾ ಹೋಬಳಿ ಘಟಕದವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಇಂದು ಈ ಮೇಲ್ಕಾಣಿಸಿದ ಉಲ್ಲೇಖಕ್ಕೆ ಸಂಬಂಧಿಸಿದಂತೆ ನಾವು ಅಂದರೆ ಯಮನೂರಪ್ಪ ಬಿಳೆಗುಡ್ಡ ಅಧ್ಯಕ್ಷರು ಆಮ್ ಆದ್ಮಿ ಪಾರ್ಟಿ ತಾವರಗೇರಾ ಹೋಬಳಿ ಘಟಕ ಹಾಗೂ ಪ್ರಗತಿಪರ ಚಿಂತಕರವತಿಯಿಂದ    ಮನವಿ ಸಲ್ಲಿಸುವುದೇನಂದರೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣಕ್ಕೆ ಹೊಂದಿಕೊಂಡಿರುವ ಸ.ನಂ 51 * ಸರ್ವೆ ನಂ 52 / , ಹಾಗೂ ಸರ್ವೇ ನಂ : 54 ಜೊತೆಗೆ 221/1 , ರ ಮದ್ಯ ಭಾಗದಲ್ಲಿ ಬರುವ ಈ ನಿ.ನಿ. ಜಮೀನು ಇದ್ದು, ಅಂದರೆ (ಗೌಂವಠಾಣ) ಸರಕಾರಿ ಜಮೀನು ಇದ್ದು , ಈ ಜಮೀನಿನಲ್ಲಿ ಸಾಕಷ್ಟು ಬಲಿಷ್ಠರು ಅಕ್ರಮವಾಗಿ ವಾಣಿಜ್ಯ ಮಳಿಗೆ (ಶೆಡ್ಡು) ನಿರ್ಮಾಣ ಮಾಡಿ, ಬಾಡಿಗೆ ರೂಪದಲ್ಲಿ ಹಣ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ, ಸಮಾಜ ಸೇವೆಗೆಂದು ಪ್ರಮಾಣ ವಚನ ಸ್ವೀಕರಿಸಿದ ಪಟ್ಟಣ ಪಂಚಾಯತಿಯ ಸದಸ್ಯರು ಹೆಚ್ಚು ಹೆಚ್ಚು ಬ್ರಷ್ಟರಾಗಿ ಸರಕಾರಿ ಜಮೀನುಗಳನ್ನೆ (ಟಾರ್ಗೇಟ್) ಗುರಿ ಮಾಡಿಕೊಂಡು ಸಾಕಷ್ಟು ಬೇನಾಮಿ ಆಸ್ತಿ  ಮಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟು ಇವೆ. ಇಂತಹ ರಾಜಕೀಯ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಉಳಿದ ಸರಕಾರಿ ಆಸ್ತಿಗಳ ಬಗ್ಗೆ ಸಂಪೂರ್ಣ ತನಿಖೆ ಕೈಗೊಳ್ಳಬೇಕು. ಅಕ್ರಮವಾಗಿ ನಿರ್ಮಾಣಗೊಂಡ ವಾಣಿಜ್ಯ ಮಳಿಗೆ (ಶೆಡ್ಡು)ಗಳನ್ನ ಕೂಡಲೇ ತೆರವುಗೊಳಿಸಬೇಕು . ನೀಜವಾದ ಕಡು / ಬಡವ / ನಿರ್ಗತಿಕ ಕುಟುಂಬದವರಿಗೆ ಅಂದರೆ ಭೂ ಹಿನರಿಗೆ ಈ ಜಮೀನಿನ್ನು ಹಂಚಿಕೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಈ ಸರಕಾರಿ (ಮೂಲ ಗೌಂವಠಾಣ) ಜಮೀನು ಉಳಿವಿಗಾಗಿ ಈ ಸ್ಥಳದಲ್ಲಿ ದಿನಾಂಕ 15/09/2022 ರಂದು ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದು. ಹಕ್ಕೊತ್ತಾಯಗಳು : 1) ಸರಕಾರಿ ಜಮೀನಿನಲ್ಲಿ ಅಂದರೆ ಸ.ನಂ 54 ರಲ್ಲಿ ಬರುವ 18 ಎಕರೆ 34 ಗುಂ ಜಮೀನು ಸರ್ವೇಯಾಗಿದ್ದು. ಕೂಡಲೆ ಹದ್ದು / ಬಸ್ತು ಮಾಡಿ ತಮ್ಮ ಇಲಾಖೆ ವ್ಯಾಪ್ತಿಗೆ ತೆಗೆದುಕೊಳ್ಳಬೇಕು. 2) ಸ.ನಂ 54 ರಲ್ಲಿ ಬರುವ 18 ಎಕರೆ 34 ಗುಂ ಜಮೀನಿನಲ್ಲಿ ಹಾಲಿನ ಕೇಂದ್ರದ ಮುಂದೆ ಹೊಸದಾಗಿ ಶೇಡ್ಡು ಹಾಕಿರುವುದನ್ನು ಕೂಡಲೇ ತೆರವುಗೊಳಿಸಬೇಕು , 3) ಮೂಲ ಗೌಂವಠಾಣ ಸರಕಾರಿ ಜಮೀನಿನಲ್ಲಿ ಕಾನೂನು ಬಾಹೀರವಾಗಿ ಗ್ರಾಂ.ಪಂ ಅಡಿಯಲ್ಲಿ ಅಂದರೆ 2009 ರಲ್ಲಿ ಗ್ರಾಮ ಸಭೆ ಮಾಡದೇ ಕೇವಲ ಸಾಮಾನ್ಯ ಸಭೆ ಮಾಡಿ ತಮ್ಮ ಹೆಸರಿನಲ್ಲಿ ಮಾಡಿಕೊಂಡಿರುವ ಆಸ್ಥಿಯನ್ನು ಡಿಮಾಂಡ ಖಾತೆಯಿಂದ ಕೈ ಬೀಡಬೇಕು. 4) ಸರ್ವೆ ನಂ : 51 ರಲ್ಲಿ ಸರಕಾರಿ ಜಮೀನು 1 ಎಕರೆ 22 ಗುಂಟೆ ಜಮೀನಿನಲ್ಲಿ 17 ಜನರಿಗೆ ಮಾತ್ರ ಮಾನ್ಯ ಸಹಾಯಕ ಆಯುಕ್ತರು 1987-1988 ರಲ್ಲಿ ಹಂಚಿಕೆ ಮಾಡಿದ್ದು ಇರುತ್ತದೆ. ಇನ್ನೂಳಿದ ಜಮೀನನ್ನು ಆಕ್ರಮಿಸಿ ವಾಣಿಜ್ಯ ಮಳೆಗೆ ಕಟ್ಟಿಕೊಂಡು ಪೀತ್ರಾಜೀತ್ ಆಸ್ತಿಯಂತೆ ಮೇರೆಯುವವರ ಮಗ್ಗಲು ಮುರಿಯಬೇಕು. ಜೊತೆಗೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು . 5) ಪಟ್ಟಣದಲ್ಲಿ ನಿರುದ್ಯೋಗಿಗಳಿಗೆ / ಭೂ ಹಿನರಿಗೆ ಈ ಸರಕಾರಿ (ಮೂಲಗೌಂವಠಾಣ) ಜಮೀನನ್ನು ಹಂಚಿಕೆ ಮಾಡಬೇಕು. 5) 10ನೇ ವಾರ್ಡಿನಲ್ಲಿ ಹಾದು/ಹೋಗುವ ಸಾರ್ವಜನಿಕ ಅಂಗಳ ಒತ್ತುವರಿಯನ್ನು ಕೂಡಲೇ ತೇರವುಗೊಳಿಸಬೇಕು. ಈ ಮೂಲ ಹಕ್ಕೋತ್ತಾಯಗಳೊಂದಿಗೆ ತಮ್ಮಲ್ಲಿ ಮನವಿ ಮೂಲಕ ದೂರು ನೀಡುತ್ತಿದ್ದು , (ಮುಂದಿನ ದಿನಮಾನಗಳಲ್ಲಿ ಈ ಸರಕಾರಿ ಜಮೀನಿನಲ್ಲಿ ಯಾರಾದರು ಬಂದು ಅತೀಕ್ರಮಿಸಿದರೆ ಮತ್ತು ಈ ಜಮೀನಿನಲ್ಲಿ ಹೊಸದಾಗಿ ಶೇಡು ಮತ್ತು ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲು ಬಂದಲ್ಲಿ ತಾವುಗಳು ತಮ್ಮ ಕಾರ್ಯಲಯದಿಂದ ಅನುಮತಿ ನೀಡಬಾರದು ಮತ್ತು ಅತೀಕ್ರಮಿಸುವವರ ವಿರುದ್ಧ ಕೂಡಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಈ ಸರಕಾರಿ ಜಮೀನಿನ ಮುಂದೆ ಸರಕಾರಿ (ಗೌಂವಠಾಣ) ಜಮೀನು ಉಳಿವಿಗಾಗಿ ನಮ್ಮ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆಯನ್ನು ನೀಡಿದರು. ಜೊತೆಗೆ ನಮ್ಮ ಹಕ್ಕೊತ್ತಾಯಗಳನ್ನು ಕೂಡಲೇ ಇಡೆರಿಸದಿದ್ದಲ್ಲಿ ದಿನಾಂಕ 15/09/2022 ರಂದು ಈ ಸರಕಾರಿ (ಮೂಲ ಗೌಂವಠಾಣ) ಜಮೀನಿನ ಸ್ಥಳದಲ್ಲಿ ಉಗ್ರ ಹೋರಾಟ ಹಮ್ಮಿಕೋಳ್ಳಲು ಆಮ್ ಆದಿ ಪಾರ್ಟಿ ಹಾಗೂ ಪ್ರಗತಿಪರ ಚಿಂತಕರ ಸಮ್ಮಿಲನದಲ್ಲಿ ಹೋರಾಟ ಹಮ್ಮಿಕೊಳ್ಳಲು ತಿರ್ಮಾನಿಸಲಾಗಿದೆ ಎಂದು ಎಎಪಿ ಅಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡ ಆಕ್ರೋಶ ವ್ಯಕ್ತಪಡಿಸಿದರು.  1) ಈ ಹಿಂದೆ ಸಲ್ಲಿಸಿದ ಅರ್ಜಿಯ ಪ್ರತಿ . ಹಾಗೂ ಭಾವ ಚಿತ್ರಗಳು. 2) ಗೌಂವಠಾಣಕ್ಕೆ ಸಂಬಂಧಿಸಿದ ಮೂಲ ದಾಖಲೆಗಳು, 1) ಮಾನ್ಯ : – ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ ಕಾರ್ಯಾಲಯ ತಾವರಗೇರಾ ಇವರಿಗೆ 2) ಮಾನ್ಯ : – ಉಪ – ತಹಶೀಲ್ದಾರ ಸಾಹೇಬರು , ನಾಡ ಕಾರ್ಯಲಯ ತಾವರಗೇರಾ ಇವರಿಗೆ, 3) ಮಾನ್ಯ : – ಯೋಜನ ನಿರ್ದೆಶಕರು , ಜಿಲ್ಲಾ ನಗರಾಭಿವುದ್ದಿ ಕೋಶ್ ಕೊಪ್ಪಳ ಇವರಿಗೆ 4) ಮಾನ್ಯ : – ಜಿಲ್ಲಾಧಿಕಾರಿಗಳ ಕಾರ್ಯಲಯ ಕೊಪ್ಪಳ ಇವರಿಗೆ . 5) ಮಾನ್ಯ : – ಆರ್.ಅಶೋಕ ಕಂದಾಯ ಸಚಿವರು ಕರ್ನಾಟಕ ಸರಕಾರ ಬೆಂಗಳೂರು ಇವರಿಗೆ , 6) ಮಾನ್ಯ : – ಶ್ರೀಯುತ ಶ್ರೀ ಥಾಯರ್ ಚಂದ್ ಗೆಹ್ಲಟ್ ಗೌರವಾನ್ವಿತ ರಾಜ್ಯಪಾಲರು ಬೆಂಗಳೂರು ಇವರಿಗೆ 7) ಮಾನ್ಯ : – ಶ್ರೀಯುತ ಪಿ.ರವಿಕುಮಾರ್ ಸರ್ಕಾರದ ಮುಖ್ಯ ಕಾರ್ಯಾದರ್ಶಿಗಳು ಬೆಂಗಳೂರು ಇವರಿಗೆ, 8) ಮಾನ್ಯ : – ಮುಖ್ಯಮಂತ್ರಿಯವರ ಸಚಿವಾಲಯ ವಿಧಾನ ಸೌಧ ಕರ್ನಾಟಕ ಸರಕಾರ ಬೆಂಗಳೂರು ಇವರುಗಳಿಗೆ ನಾಳೆನೆ ಪೋಸ್ಟ್ ಮುಖ‍ಾಂತರ ಪೋಸ್ಟ ಮಾಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಯಾದ ನಭಿಸಾಬರವರು ಮನವಿ ಸ್ವಿಕರಿಸಿ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೆವೆ. ಜೊತೆಗೆ ಮುಂದೆ ಕೆಲಸ ಕಾಮಗಾರಿ ನಡೆಯದಂತೆ ನೋಡುತ್ತೆವೆ ಎಂದು ಭರವಸೆ ನೀಡಿದರು. ಇದರ ಜೊತೆಗೆ ಪಟ್ಟಣದ ನಾಡ ಕಚೇರಿಯ ಉಪ-ತಹಶೀಲ್ದಾರರಾದ ಶರಣಪ್ಪ ಕಳ್ಳಿಮಠ ಹಾಗೂ ಆರ್.ಐಗಳಾದ ಶರಣಪ್ಪ ದಾಸರ. ಜೊತೆಗೆ ತಲಾಟಿಯವರಾದ ಸೂರ್ಯಕಾಂತರವರು ಭಾಗಿಯಾಗಿದ್ದರು. ಪಟ್ಟಣಕ್ಕೆ ಸಂಬಂಧಿಸಿದಂತೆ ನಾನಾ ಅಧಿಕಾರಿಗಳಿಗೆ ಮನವಿ ನೀಡಿ, ತದ ನಂತರ ಮಾನ್ಯ ತಹಶಿಲ್ದಾರರ ಸಾಹೇಬರಿಗೆ ಮನವಿ ಪತ್ರ ನೀಡಿ ಸರ್ಕಾರಿ (ಗೌಂವಠಾಣ) ಜಮೀನಿನ ಬಗ್ಗೆ ಕುಲಂಕುಶವಾಗಿ ಚರ್ಚಿಸಿದ ನಂತರ ಈ ಜಮೀನಿನ ಬಗ್ಗೆ ಹಿಗಾಗಲೇ ಮಾನ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೆವೆ. ಜೊತೆಗೆ ಯಾವುದೆ ಕಾರಣಕ್ಕೂ ಆ ಜಮೀನನ್ನು ಒತ್ತುವರಿ ಮಾಡಲು ಬೀಡುವುದಿಲ್ಲ ಎಂದು ಭರವಸೆ ನೀಡಿ ಎಎಪಿ ಕಾರ್ಯಕರ್ತರ ಜೊತೆ ಚರ್ಚಿಸಿದ ನಂತರ ಭರವಸೆ ನೀಡಿದ್ದಕ್ಕೆ ಎಎಪಿ ಕಾರ್ಯಕರ್ತರು ಧನ್ಯವಾದಗಳು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಯಮನೂರಪ್ಪ ಬಿಳೆಗುಡ್ಡ. ಅಲಿಆದಿಲ್. ಶ್ಯಾಮಿದಸಾಬ್ ಮೆಣೇದಾಳ.ಸಿದ್ದನಗೌಡ, ಶ್ಯಾಮ ದಾಸನೂರ. ಮಂಜುನಾಥ್ ಕಲಾಲ್. ಬಾಲರಾಜ ಯಾದವ್. ರವಿ ಆರೇರ್. ಖಾಜಾಖಾನ್ ಪಠಾಣ. ಸೋಮನಾಥ್. ಸಂಗನಾಳ್. ಉಪ್ಪಳೇಶ ವಿ.ನಾರಿನಾಳ್. ಇತರರು ಪಾಲುಗೊಂಡಿದ್ದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *