AAP ವತಿಯಿಂದ ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಧಿಕಾರಿಗಳನ್ನು ಕೂಡಲೇ ವರ್ಗಾವಣೆಗೊಳಿಸಲು ಮಾನ್ಯ ಶಾಸಕರಿಗೂ ಹಾಗೂ ಡಿ.ಹೆಚ್.ಓ. ಅಧಿಕಾರಿಗಳಿಗೆ ಮನವಿ.
ಇಂದು ತಾವರಗೇರಾ ಪಟ್ಟಣಕ್ಕೆ ಅನಿರೀಕ್ಷಿತವಾಗಿ ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಾನ್ಯ ಶಾಸಕರಾದ ಅಮಾರೇಗೌಡ ಎಲ್.ಬಯ್ಯಾಪೂರ ಹಾಗೂ ಮಾನ್ಯ ತಹಶಿಲ್ದಾರರಾದ ಗುರುರಾಜ ಎಮ್ ರವರು ಬೇಟಿ ನೀಡಿದರು. .ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲವು ನಿಮಿಷಗಳಕಾಲ ಗುಪ್ತ ಚರ್ಚೆ ನಡೆಸಿ ಕೊನೆಗೂ ಮಾದ್ಯಮದವರ ಜೊತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು..ಇದೆ ಸಂದರ್ಭದಲ್ಲಿ AAP ವತಿಯಿಂದ ತಾವರಗೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಧಿಕಾರಿಗಳನ್ನು ಇಲ್ಲಿಂದ ಕೂಡಲೇ ವರ್ಗಾವಣೆಗೊಳಿಸಬೇಕೆಂದು ಮಾನ್ಯ ಶಾಸಕರಿಗೂ ಹಾಗೂ ಡಿ.ಹೆಚ್.ಓ.ಕೊಪ್ಪಳ ಇವರಿಗೆ ಮನವಿ ಸಲ್ಲಿಸಿದರು..ತಾವರಗೇರಾ ಪಟ್ಟಣ ಹಾಗೂ ತಾವರಗೇರಾ ಹೋಬಳಿಯ ಸಾರ್ವಜನಿಕರ ಹೇಳಿಕೆಯ ಪ್ರಕಾರ ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಗಳಾದ ಶ್ರೀಮತಿ ಕಾವೇರಿ ಉಪ್ಪಳ ಇವರನ್ನು ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದಿಂದ ಕೂಡಲೇ ವರ್ಗವಣೆಗೊಳಿಸಬೇಕು. ಕಾರಣ ತಾವರಗೇರಾ ಹೋಬಳಿಗೆ ಸಂಬಂದಿಸಿದಂತೆ ಸುಮಾರು ಹಳ್ಳಿಗಳಿಂದ ಸಾರ್ವಜನಿಕರು ಹಾಗೂ ಬಡ/ಕೂಲಿ/ಕಾರ್ಮಿಕ ಜನರು ಈ ಸಮುದಾರಯ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದು.. ಸೌಜನ್ಯ ತೋರದ ವೈದ್ಯಾಧಿಕಾರಿಗಳ ವಿರುದ್ದ ಸಾರ್ವಜನಿಕರು ಹಲವು ಬಾರಿ ನಾನಾ ರೀತಿಯ ಆರೋಪಗಳು ಕೇಳಿದ್ದಲ್ಲದೆ . ಅದು ಅಲ್ಲದೆ ಮಾನ್ಯ ಶಾಸಕರು ಸಹ ಒಂದು ಬಾರಿ ಇವರ ಬಗ್ಗೆ ನೇರ ಆರೋಪ ಮಾಡಿ, ತೀಳಿ ಹೇಳಿದ್ದರು ಸಹ ಕ್ಯಾರೆ ಎನ್ನುತ್ತಿದ್ದಾರೆ. ಅಧಿಕಾರದ ಧಾಹ ತೊರಿಸುತ್ತಿದ್ದಾರೆ. ಹಾಗಾಗಿ ಕೂಡಲೇ ಮುಖ್ಯ ವೈದ್ಯಾಧಿಕಾರಿಗಳನ್ನು ತಾವರಗೇರಾ ಸಮೂದಾಯ ಆರೋಗ್ಯ ಕೇಂದ್ರದಿಂದ ವರ್ಗಾವಣೆಗೊಳಿಸಬೇಕು. ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಕಿಚ್ಚಿಂತ್ತು ಬೆಲೆ ನೀಡದ ವೈದ್ಯ ಅಧಿಕಾರಿಗಳು ನಮಗೆ ಬೇಡವೆ ಬೇಡಾ.. ಎಂದು ಆಮ್ ಆದ್ಮಿ ಪಾರ್ಟಿ ರೈತ ಸಂಘ ಹಾಗೂ ಯುವ ಘಟಕದವತಿಯಿಂದ ಆಗ್ರಹ ಮಾಡಿದರು. ಸಾರ್ವಜನಿಕರ ಜೊತೆ ವೈದ್ಯರಿಂದ ಕಿಚಿಂತು ಸ್ಪಂದನೆ ಇಲ್ಲವೆ ಇಲ್ಲಾ. ಆದ್ದರಿಂದ ಸಾರ್ವಜನಿಕರು ಬೇಸತ್ತು ಖಾಸಗಿ ಆಸ್ಪತ್ರೆಗಳಿಗೆ ಸಾಗುತ್ತಿದ್ದಾರೆ, ಇನ್ನು(ಗರ್ಭಿಣಿ ಮಹಿಳೆಯರು) ಸಮಸ್ಯೆಗಳು ಬಗ್ಗೆ ಹೇಳ ತೀರದು) ಕಾರಣ ಮಹಿಳೆಯರು ತುಂಬು ಗರ್ಬಿಣಿ ಸಂದರ್ಭದಲ್ಲಿ ಈ ಸರಕಾರಿ ಆಸ್ಪತ್ರೆಗೆ ಬಂದರೆ ಸರಿಯಾದ ಚಿಕಿತ್ಸೆ ದೊರಕದೆ ನರಳುತ್ತಿರುವ ಸನ್ನಿವೇಶಗಳು ಸಾವಿರಾರು ಕಣ್ಣಮುಂದೆ ಇವೆ. ಎಂದು ಸಂಘಟಕರು ದೂರಿದರು. ಜೊತೆಗೆ ಪ್ರತಿ ಗರ್ಬಿಣಿಯರನ್ನು (ನಾರ್ಮಲ್) ಸಹಜವಾಗಿ ಹೇರಿಗೆ ಮಾಡದೆ, ಸಿಜಿರಿಂಗ್ ಹೇರಿಗೆ ಹೆಚ್ಚಾನೆಚ್ಚು ಮಾಡುತ್ತಿದ್ದಾರೆ ಎಂದು ದೂರಿದರು. ಈ ವಿಷಯ ಕುರಿತಂತೆ ಮಾನ್ಯ ಡಿ.ಹೆಚ್.ಓ. ಯವರಿಗೆ ಸಾಮಾನ್ಯರು ಪ್ರಶ್ನೆ ಮಾಡಿದಾಗ ಡಿ.ಹೆಚ್.ಓ. ಮೌನವಾದರು. ಹಾಗೂ ಮಾನ್ಯ ಶಾಸಕರಿಗೂ ಮತ್ತು ಮಾನ್ಯ ತಹಶಿಲ್ದಾರರವರಿಗೂ ತಾವರಗೇರಾ ಪಟ್ಟಣದ ಆರೋಗ್ಯ ಸಮುದಾಯದ ಕೇಂದ್ರದ ಬಗ್ಗೆ ಹಾಗೂ ಸ್ಥಳಿಯ ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಯಮನೂರಪ್ಪ ಬಿಳೆಗುಡ್ಡ ಅಧ್ಯಕ್ಷರು ಆಮ್ ಆದ್ಮಿ ಪಾರ್ಟಿ ಹಾಗೂ ಬಾಲರಾಜ ಯಾದವ್ ತಾಲೂಕ ಪ್ರದಾನ ಕಾರ್ಯದರ್ಶಿ. ರವಿ ಆರೇರ್ ರೈತ ಸಂಘದ ಅಧ್ಯಕ್ಷರು.ಉಪ್ಪಳೇಶ ವಿ.ನಾರಿನಾಳ್ ಯುವ ಘಟಕ ಅಧ್ಯಕ್ಷರು. ಆರ್.ಬಿ.ಅಲಿಆದಿಲ್. ಮಂಜುನಾಥ್ ಕಲಾಲ್. ದೇವಣ್ಣ ಹುನಗುಂದ್. ಶ್ಯಾಮೀದ ಸಾಬ್ ಮೇಣೆದಾಳ. ಕ.ನ.ನಿ.ಸಂಘದ ಅಧ್ಯಕ್ಷರಾದ ಸಿದ್ದನಗೌಡ. ಹಾಗೂ ಹನುಮನಗೌಡ ಕಟ್ಟಿಮನಿ ಇತರರು ಪಾಲುಗೊಂಡಿದ್ದರು.
ವರದಿ – ಸಂಪಾದಕೀಯಾ