ತಾವರಗೇರಾ ಪಟ್ಟಣದ ಮುಖಂಡರು ಹಾಗೂ ಹಿರಿಯ ಹೋರಾಟಗಾರರ ಜೊತೆ ನಾನಾ ರೀತಿಯ ಅಭಿವೃದ್ಧಿಗಾಗಿ ಸಭೆ…..…..

Spread the love

ತಾವರಗೇರಾ ಪಟ್ಟಣದ ಮುಖಂಡರು ಹಾಗೂ ಹಿರಿಯ ಹೋರಾಟಗಾರರ ಜೊತೆ ನಾನಾ ರೀತಿಯ ಅಭಿವೃದ್ಧಿಗಾಗಿ ಸಭೆ…..

ತಾವರಗೇರಾ ಪಟ್ಟಣಕ್ಕೆ ನಿನ್ನೆ ಸಂಜೆಯ ವೇಳೆಗೆ ಮಾನ್ಯ ಶಾಸಕರು ಹಾಗೂ ಮಾನ್ಯ ತಹಶಿಲ್ದಾರರು ಜೊತೆಗೆ ಡಿ.ಹೆಚ್.ಓ.ಜಿಲ್ಲಾ ಆಸ್ಪತ್ರೆಯವರು ಅನಿರೀಕ್ಷಿತವಾಗಿ ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಟೆ. ಕೆಲವೊತ್ತು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುಪ್ತ ಚರ್ಚೆ ನಡೆಸಿ. ಹೊರಗಡೆ ಬಂದ ನಂತರ ಮಾನ್ಯ ತಹಶಿಲ್ದಾರರು ಹಾಗೂ ಡಿ.ಹೆಚ್.ಓ. ಜಿಲ್ಲಾ ಆಸ್ಪತ್ರೆ ಅಧಿಕಾರಿಗಳ ಜೊತೆಗೆ ಮಾದ್ಯಮದವರ ವಾಗ್ವಾದ ನಡೆಯಿತು. ತದ ನಂತರ ಪಟ್ಟಣದ ಸರಕಾರಿ ಪ್ರಥಮ ಧರ್ಜೆ ಕಾಲೇಜಿನಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ಹಾಗೂ ಶಾಲಾ ಕಂಪೌಡಿನ ಅಭಿವೃದ್ಧಿಗಾಗಿ ಗೇಟ್ ಹಾಗೂ ಕಂಪೌಡಿಗಾಗಿ ಜೊತೆಗೆ ಮುಖ್ಯ ರಸ್ತೆಗಾಗಿ ಊರಿನ ಗಣ್ಯರ ಜೋತೆ ಧೀರ್ಘವಾಗಿ ಚರ್ಚೆ ನಡೆಯಿತು.  ಮುಖ್ಯೆವಾಗಿ ಶಾಲೆಯ ಕಂಪೌಂಡು ಹಾಗೂ ಶಾಲೆ ಕಟ್ಟಡವನ್ನು ತೇರವುಗೊಳಿಸಿ ತಮ್ಮ ಲಾಭಕ್ಕಾಗಿ ಈ ಎಲ್ಪಾ ತಂತ್ರಗಳು ನಡೆಯುತ್ತಿವೆ. ಅದು ಅಲ್ಲದೆ ಇಲ್ಲಿ ಮುಖ್ಯವಾಗಿ ಎರಡು ಕಂಪೌಂಡು ನಿರ್ಮಾಣ ಮಾಡಿ ಒಂದು ಸರಕಾರಿ ಆಸ್ಪತ್ರೆಗೆ ಮತ್ತೊಂದು ನಿಮ್ಮ ಓಣಿಗೆ ಮುಖ್ಯ ರಸ್ತೆ ಅವಶ್ಯವಿದೆ ಎಂದು ಅಧಿಕಾರಿಗಳು ಜೊತೆಗೆ ಮಾನ್ಯ ತಹಶಿಲ್ದಾರರು ಈ ಸಭೆಯಲ್ಲಿ ಚರ್ಚಿಸಿದರು. ಇದಕ್ಕೆ ಪ್ರತಿರೋಧವಾಗಿ ಹಿರಿಯ ಹೋರಾಟಗಾರರಾದ ಆನಂದ ಬಂಡಾರಿಯವರು ಈ ಹಿಂದೆ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮುಖ್ಯ ರಸ್ತೆಯಾಗಿ ನೇರ ಒಂದೆ ರಸ್ತೆ ಇತ್ತು. ಸದ್ಯ ಲಾಭಕ್ಕಾಗಿ ಎರಡು ಮುಖ್ಯ ರಸ್ತೆ ಯಾಕೆ ಎಂದು ನೇರ ಆರೋಪ ಮಾಡಿದರು. ಇದರಿಂದ ಅಧಿಕಾರಿಗಳಲ್ಲಿ ಹಾಗೂ ಮಾನ್ಯ ಶಾಸಕರಲ್ಲಿ ಗೊಂದಲ ಸುರುವಾಯಿತು. ಕೊನೆಗೆ ಹಿರಿಯ ಹೋರಾಟಗಾರರು ಈ ಸಭೆಯಿಂದ ಹೊರಗಡೆ ನಡೆದರು. ಇವರು ಮಾರೇಗೌಡೆಲ್ ಸಭೆಯಿಂದ ಹೊರಗಡೆ ಬಂದ ಕೇಲವೆ ಕ್ಷಣಗಳಲ್ಲಿ ಸಭೆಯು ಮುಕ್ತಾಯವಾಯಿತು. ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಅಮಾರೇಗೌಡ ಎಲ್ ಬಯ್ಯಾಪೂರ ಹಾಗೂ ಮಾನ್ಯ ತಾಲೂಕ ದಂಢಾಧಿಕಾರಿಗಳಾದ ಗುರುರಾಜ್ ಎಮ್. ಹಾಗೂ ಊರಿನ ಗಣ್ಯರಾದ ಶೇಖರಗೌಡ ಪೋಲಿಸ್ ಪಾಟೀಲ್, ಚಂದ್ರಪ್ಪ ನಾಲತವಾಡ್, ಆನಂದ ಬಂಡಾರಿ, ಶ್ಯಾಮೀದ್ ದೋಟಿಹಾಳ, ನಾಧರಪಾಷ ಮುಲ್ಲಾ, ಸಾಗರ ಬೇರಿ, ಶ್ಯಾಮಣ್ಣ ಸುಣಗಾರ, ರಾಜಾನಾಯಕ, ಯಮನೂರಪ್ಪ ಬಿಳೆಗುಡ್ಡ, ಶ್ಯಾಮೀದಸಾಬ ಮೇಳೆದಾಳ, ಅಮಾರೇಶ ಗಾಂಜಿ, ವಿರುಪಣ್ಣ ನಾಲತವಾಡ, ಇತರರು ಊರಿನ ಗಣ್ಯರು ಹಾಗೂ ಸಂಂಘ ಸಂಸ್ಥೆಯ ಮುಖಂಡರು ಪಾಲುಗೊಂಡಿದ್ದರು.

 ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *