ಸ್ವಚ್ಛ ಗ್ರಾಮ ಹಸಿರು ಗ್ರಾಮಕ್ಕೆ ಆದ್ಯತೆ ನೀಡಿ: ಚಂದ್ರಶೇಖರ್ ಕಂದಕೂರ.

Spread the love

ಸ್ವಚ್ಛ ಗ್ರಾಮ ಹಸಿರು ಗ್ರಾಮಕ್ಕೆ ಆದ್ಯತೆ ನೀಡಿ: ಚಂದ್ರಶೇಖರ್ ಕಂದಕೂರ.

ಅವರು ತಾಲೂಕಿನ ಚಿಕ್ಕಮಾದಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗುಡ್ಡ ಗ್ರಾಮದಲ್ಲಿ  ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ ಚಿಲುಮೆ 2 ಕಾರ್ಯಕ್ರಮದ ಅಂಗವಾಗಿ ಸ್ವಚ್ಛ ಶುಕ್ರವಾರ ನಿಮಿತ್ಯ ಕರಡಿಗುಡ್ಡ ಗ್ರಾಮದ ಸಮುದಾಯ ಭವನ ಮತ್ತು ಆಂಜನೇಯ ದೇವಸ್ಥಾನ ಆವರಣದ ಸುತ್ತಮುತ್ತಲಿನ ಸ್ಥಳದಲ್ಲಿ  ಶ್ರಮದಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸ್ವಚ್ಛ ಶುಕ್ರವಾರ ಎಂಬುವುದು ಬರಿ ಒಂದು ದಿನದ ಕಾರ್ಯಕ್ರಮವಾಗಿ ಉಳಿಯಬಾರದು ನಿತ್ಯವೂ ಗ್ರಾಮದ ಪ್ರತಿ ವಾರ್ಡ್ ಗಳಲ್ಲಿ ಪ್ರತಿ ಮನೆ ಮುಂದೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ ಸ್ವಚ್ಛ ಗ್ರಾಮ ಹಸಿರು ಗ್ರಾಮ ಮಾಡುವಲ್ಲಿ ಗ್ರಾಮದ ಎಲ್ಲಾ ಸಾರ್ವಜನಿಕರು ಸಹಕರಿಸಬೇಕೆಂದು ಹಾಗೂ ಪ್ರತಿ ಮನೆಯ ಕಸವನ್ನು ಹಸಿಕಸ ಮತ್ತು ಒಣ ಕಸವನ್ನಾಗಿ ವಿಂಗಡಣೆ ಮಾಡಿ ಸ್ವಚ್ಛ ವಾಹಿನಿ ರಥಕ್ಕೆ ನಿಮ್ಮ ಕಸಗಳನ್ನು ಹಾಕುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ ಯೋಜನಾಧಿಕಾರಿ  ರಾಜಶೇಖರ್, ಪಿಡಿಓ ಲಕ್ಷ್ಮಿಬಾಯಿ ,ಗ್ರಾ,ಪಂ ಅಧ್ಯಕ್ಷರಾದ ತಿಪ್ಪಣ್ಣ ಗಿಡ್ಡಿ, ಉಪಾಧ್ಯಕ್ಷ,ಹುಲಿಗೆಮ್ಮ,ಸರ್ವ ಸದೆಸ್ಯರಾದ ವೆಂಕಟೇಶ್,ಬೀರಪ್ಪ, ಪಾಮಣ್ಣಾ, ಕನಕಪ್ಪ, ಬೀರಪ್ಪ, ಮಲಿಯಪ್ಪ, ಮಾರುತಿ, ಉಮೇಶ್, ತಾ ಪಂ ಸಿಬ್ಬಂದಿ ಪವನ್,ಯಂಕೊಬ್,ಹನುಮಂತು, ತನ್ವೀರ್, ಚಂದ್ರಶೇಖರ್, ಮೇಘರಾಜ, ಶ್ರೀಕಾಂತ್,ತಾಂತ್ರಿಕ ಸಹಾಯಕರಾದ ರಮೇಶ್, ಗುರುರಾಜ್, ಯೋಗೇಶ್, ಮಂಜುನಾಥ್,ಸುನೀತಾ,ವಿಜಯಲಕ್ಷ್ಮೀ,ಗ್ರಾ ಪಂ ಸಿಬ್ಬಂದಿ ಮಾರುತಿ, ಬೀರಪ್ಪ,ಶಂಕರ್,ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು. ತಾಲೂಕಿನ ಚಿಕ್ಕ ಮಾದಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಕರಡಿ ಗುಡ್ಡ ಗ್ರಾಮದಲ್ಲಿ ತಾಲೂಕ ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸರ್ವ ಸದಸ್ಯರಿಂದ ಶ್ರಮದಾನ ನಡೆಯಿತು.

ವರದಿ – ಆದಪ್ಪ ಮಾಲಿಪಾಟೀಲ್

Leave a Reply

Your email address will not be published. Required fields are marked *