AAP ವತಿಯಿಂದ ಸರಕಾರಿ ಆಸ್ತಿ ಉಳಿವಿಗಾಗಿ ಹೋರಾಟದ ಕುರಿತು ಇಂದು ಸಭೆ ನಡೆಸಿ ಪತ್ರಿಕಾ ಪ್ರಕಟಣೆಗೆ ಮನವಿ ಸಲ್ಲಿಸಲಾಯಿತು.
ವಿಷೆಯ:- ಖೊಟ್ಟಿ ದಾಖಲೆ ಸೃಷ್ಟಿಸಿ ಸರಕಾರಿ ಆಸ್ತಿಯನ್ನೆ ಗುರಿ ಮಾಡಿಕೊಂಡು ಸರಕಾರದ ಬೋಗ್ಗಸಕ್ಕೆ ಕನ್ನ ಹಾಕುತ್ತಿರುವ ಖಾಸಗಿ ವ್ಯಕ್ತಿಗಳಿಗೆ ತಾವರಗೇರಾ ಹೋಬಳಿ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕ ಮಟ್ಟದ ಅಧಿಕಾರಿಗಳ ನಡೆ ಖಂಡಿಸಿ.
ಮಾನ್ಯರೆ :- ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣಕ್ಕೆ ಹೊಂದಿಕೊಂಡಿರುವ ಸ.ನಂ : 54 ಹಾಗೂ ಸ.ನಂ : 221/1 ರ ಮಧ್ಯ ಭಾಗದಲ್ಲಿ ಬರುವ ನಿ.ನಿ. ಜಮೀನು ಅಂದರೆ ಸರ್ಕಾರಿ ಮೂಲ ಗೌಂವಠಾಣ ಜಮೀನು ಇದ್ದು. ಜೊತೆಗೆ ಈ ಜಮೀನು ಮುಂದಿನ ಪೀಳಿಗೆಗೆ ಅತ್ಯವಶ್ಯಕ ಇರುವುದರಿಂದ. ಈ ಜಮೀನು ಉಳಿಸುವ ಸಂಪೂರ್ಣ ಜವಬ್ದಾರಿ ಸರಕಾರದ್ದು ಇರುತ್ತದೆ, ಆದರೆ ಬೆಲಿನೆ ಎದ್ದು ಹೊಲ ಮೈದಂತೆ ಕಾಣುತ್ತಿದೆ. ಈ ಜಮೀನು ಸದ್ಯ ಕೊಟಿಗಟ್ಟಲೆ ಬೆಲೆ ಬಾಳುವ ಆಸ್ತಿಯಾಗಿದೆ. ಈ ಸರ್ಕಾರಿ ಮೂಲ ಗೌಂವಠಾಣ ಜಮೀನು ಉಳಿವಿಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದರು ಸಹ ಅಧಿಕಾರಿಗಳು ಸಂಪೂರ್ಣ ಭ್ರಷ್ಟರ ಜೊತೆ ಕೈಮೀಲಾಯಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುಹುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ತಾವರಗೇರಾ ಪಟ್ಟಣಕ್ಕೆ ಹೊಂದಿಕೊಂಡಿರುವ ಮೂಲ ಗೌಂವಠಾಣ ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳು ಭೂ ಕಬಳಿಕೆ ಮಾಡುತ್ತಿದ್ದು ಕಾನೂನು ಬಾಹಿರವಾಗಿದೆ. ಈದಾಗ್ಯೂ ಸ್ಥಳೀಕ ಅಧಿಕಾರಿಗಳು ಸಂಪೂರ್ಣ ಖಾಸಗಿ ವ್ಯಕ್ತಿಗಳ ಪರ ನಡೆದುಕೊಳ್ಳುತ್ತಿದ್ದಾರೆ. ನಮ್ಮವರು ನೇರವಾಗಿ ಕರೆ ಮಾಡಿ ಮಾತನಾಡಿದರೆ ಸ್ಪಂದನೆವಿಲ್ಲದೆ ಏಕಾಬಿಟ್ಟಿ ಮಾತನಾಡುತ್ತಿದ್ದರೆ. ಆದ್ದರಿಂದ ಈ ನಮ್ಮೆಲ್ಲ ಉತ್ತರಗಳಿಗೆ ಮಾನ್ಯ ಜಿಲ್ಲಾಧಿಕಾರುಗಳು ಹಾಗೂ ಸಹಾಯಕ ಆಯುಕ್ತರು ಉತ್ತರ ನೀಡಲೆ ಬೇಕು ಜೊತೆಗೆ ಈ ಸ್ಥಳಕ್ಕೆ ತಾವುಗಳು ಬಂದು ಶಿಗ್ರ ಪರಿಹಾರ ನೀಡುವವರೇಗೂ ಈ ಸ್ಥಳದಿಂದ ಕದಲುವುದಿಲ್ಲವೆಂದು ಇದೆ ದಿನಾಂಕ 15/09/2022 ರಂದು ಗುರುವಾರ ದಿನದೊಂದು ಈ ಸರಕಾರಿ ಜಮೀನಿನ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳುತ್ತಿದ್ದೆವೆ. ಮುಖ್ಯಾಧಿಕಾರಿ ಪಟ್ಟಣ ಪಂಚಾಯತ ತಾವರಗೇರಾ. ಖಾಸಗಿ ವ್ಯಕ್ತಿಗಳಿಗೆ ನೀಡಿರುವ ಖೊಟ್ಟಿ ದಾಖಲೆ ಸೂಕ್ತ ಪರಿಶೀಲನೆಯಾಗಲೆಬೇಕು. (ಪಟ್ಟಣಫಂಚಾಯತ ಕಾರ್ಯಲಯದಿಂದ ನೀಡಿರುವ ದೃಢೀಕರಣ ಪತ್ರ ಲಗತ್ತಿಸಲಾಗಿದೆ) ಈ ರೀತಿ ಖೊಟ್ಟಿ ದಾಖಲಾತೆ ಸೃಷ್ಟಿಸಲು ಸಾತ್ ನೀಡಿದ ಅಧಿಕಾರಿಗಳನ್ನು ಕೂಡಲೆ ಸರ್ಕಾರಿ ನೌಕರಿಯಿಂದ ವಜಾಗೊಳಿಸಬೇಕು. ನಾವು ಹಲವು ವರ್ಷಗಳಿಂದ ಇಲ್ಲಿ ನಡೆಯುವ ಕೆಲಸ ಕಾರ್ಯವನ್ನು ತಡೆಯುತ್ತ ಬಂದಿದ್ದೆವ. ಅಲಿಂದ ಇಲ್ಲಿಯವರೆಗೂ ಯಾವುದೇ ದಾಖಲಾತೆಗಳು ಇರುವುದಿಲ್ಲ.
ಇಂದು ಏಕಾಎಕಿಯಾಗಿ ಖೊಟ್ಟಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಲ್ಲಿ ಆಸ್ತಿ ಇದೆ ಎಂದು ದೃಢೀಕರಣ ನೀಡಿದ್ದಾರೆ. ಆದರೆ ಈ ದೃಢೀಕರಣದಲ್ಲಿ ಯಾವುದೆ ಅಧಿಕೃತವಾಗಿ ಸೈಜ್ ಇರುವುದಿಲ್ಲವೆಂದು ತಾವೆ ಒಪ್ಪಿಕೊಂಡಿದ್ದಾರೆ. ಈ ರೀತಿ ಖೊಟ್ಟಿ ದಾಖಲೆ ಸೃಷ್ಟಿಸಿ ಸರಕಾರಿ ಆಸ್ತಿಯನ್ನೆ ಗುರಿ ಮಾಡಿಕೊಂಡು ಸರಕಾರದ ಬೋಗ್ಗಸಕ್ಕೆ ಕನ್ನ ಹಾಕುತ್ತಿರುವ ಸ್ಥಳೀಕ ಮಟ್ಟದ ಅಧಿಕಾರಿಗಳು ಹಾಗೂ ಭ್ರಷ್ಟಚಾರಿ ವ್ಯಕ್ತಿಗಳು ಒಂದಾಗಿ ಸರಕಾರಿ ಮೂಲ ಗೌಂವಠಾಣ ಜಮೀನು ನುಂಗುವಲ್ಲಿ ಪ್ರಮೂಖ ಪಾತ್ರ ವಹಿಸುತ್ತಿದ್ದಾರೆ. ಜೊತೆಗೆ ಪಟ್ಟಣದ 10ನೇ ವಾರ್ಡನಲ್ಲಿ ಹಾದು ಹೋಗುವ ಸಾರ್ವಜನಿಕ ಅಂಗಳವನ್ನು ವತ್ತುವರಿ ಮಾಡಿದ್ದಾರೆ ಎಂದು ಹಲವು ವರ್ಷಗಳಿಂದ ದೂರಿದರು ಕ್ಯಾರೆ ಎನ್ನದೆ ಮೌನವಾಗಿರುವುದ ಖಂಡನಿಯ. ಅಂದಾಜು ಈ ಜಮೀನಿನ ವಿವರ 100 ಪೀಟ್ ಉದ್ದ 40 ಅಗಲ ಇದ್ದು, ಇಲ್ಲಿ ಪ್ರತಿ ವರ್ಷ ಮೋರಂ ಸಮಯದಲ್ಲಿ ಊರಿನ ಸಾರ್ವಜನಿಕರು ಊರು ಸುತ್ತ ಅಲಾಯಿ ಆಡಿ ಈ ಸ್ಥಳಕ್ಕೆ ಬಂದು ಅಲಾಯಿ ಮುಕ್ತಾಯಗೊಳಿಸುತ್ತಿದ್ದರು. ಆಮ್ ಆದ್ಮಿ ಪಾರ್ಟಿ ತಾಲೂಕು ಘಟಕದವತಿಯಿಂದ ಅಗ್ರಹ ಮಾಡುವುದೇನಂದರೆ ಹಲವು ವರ್ಷಗಳಿಂದ ಈ ಜಮೀನುಗಾಗಿ ಹೋರಾಟ ಮಾಡುತ್ತ ಬಂದಿದ್ದು. ಸದ್ಯ ಈ ಜಮೀನಿನಲ್ಲಿ ನಡೆಯುವ ಕೆಲಸ ಕಾರ್ಯವನ್ನು ಕೂಡಲೆ ತಡೆಯಿಡಿಯಬೇಕು. ಜೊತೆಗೆ ಭ್ರಷ್ಟರಿಗೆ ಸಾಥ್ ನೀಡುವ ಸರಕಾರಿ ನೌಕರ ಅಧಿಕಾರಿಗಳನ್ನ ಸರಕಾರಿ ಹುದ್ದೆಯಿಂದ ವಜಾಗೋಳಿಸಬೆಕೇಂದು ಅಗ್ರಹ ಮಾಡಿದರು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಈ ಸರ್ಕಾರಿ ಜಮೀನಿನ ಮುಂದೆ ಆಮ್ ಆದ್ಮಿ ಪಾರ್ಟಿವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೆವೆ ಎಂದು ಎಚ್ಚರಿಕೆ ನೀಡಿದರು. ಜೊತೆಗೆ ಇದೆ ದಿನಾಂಕ 15/09/2022 ರಂದು ಈ ಸರ್ಕಾರಿ ಜಮೀನಿನ ಮುಂದೆ ಸರ್ಕಾರಿ ಜಮೀನು ಉಳಿವಿಗಾಗಿ ನಿರಂತರ ಧರಣಿ ಹಮ್ಮಿಕೊಳ್ಳಲು ಜಿಲ್ಲಾ ಸಮಿತಿಯಿಂದ ತೀರ್ಮಾನ ಕೈಗೊಂಡಿದ್ದೆವೆ, ಈ ವಿಷೆಯಕ್ಕೆ ಸಂಬಂದಿಸಿದಂತೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ, ಹಾಗೂ ನಾಡ ಕಚೇರಿ ಉಪ-ತಹಶೀಲ್ದಾರರವರಿಗೆ ಹಾಗೂ ಮಾನ್ಯ ತಹಶೀಲ್ದಾರರವರಿಗೆ
ಜೊತೆಗೆ ಇಂದು ಪಟ್ಟಣದ ಪೊಲೀಸ್ ಇಲಾಖೆಗೆ ಈ ಧರಣಿ ಕುರಿತು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಯಮನೂರಪ್ಪ ಬಿಳೆಗುಡ್ಡ ತಾವರಗೇರಾ ಹೋಭಳಿ ಘಟಕದ ಅಧ್ಯಕ್ಷರು. ಬಾಲರಾಜ ಯಾದವ್ ತಾಲೂಕ ಪ್ರಧಾನ ಕಾರ್ಯದರ್ಶಿ. ರವಿ ಆರೇರ್ ರೈತ ಘಟಕದ ಅಧ್ಯಕ್ಷರು. ಉಪ್ಪಳೇಶ ವಿ.ನಾರಿನಾಳ ಯುವ ಘಟಕದ ಅಧ್ಯಕ್ಷರು. ಶ್ಯಾಮೀದಸಾಬ ಮೆಣೇದಾಳ. ಮಂಜುನಾಥ ಕಲಾಲ್ ಯುವ ಘಟಕದ ಕಾರ್ಯದರ್ಶಿ. ಸಿದ್ದನಗೌಡ ಪುಂಡಗೌಡ್ರು. ಕ.ನ.ಸೇ ಸಂಘ ಅಧ್ಯಕ್ಷರು. ಆರ್.ಬಿ.ಅಲಿಆದಿಲ್ ಮಾಧ್ಯಮ ಸಂಯೋಜಕರು. ದೇವರಾಜ್ ಹುನಗುಂದ್. ನಾಗೇಶ ಹುನಗುಂದ್, ಖಾಜಾಖಾನ್ ಪಠಾಣ, ವಿರೇಶ ನವಲಿ. ಹಾಗೂ ಇತರರು ಪಾಲುಗೊಂಡಿದ್ದರು.
ವರದಿ – ಸಂಪಾದಕೀಯಾ