ಧುಮಾಪಾನ ಅನಾಗರಿಕತೆ ಸಂಕೇತ..!

Spread the love

ಧುಮಾಪಾನ ಅನಾಗರಿಕತೆ ಸಂಕೇತ..!

ಸಾರ್ವಜನಿಕರು ಸಾಮಾನ್ಯವಾಗಿ ಎಲ್ಲ ಹೊಣೆಗಾರಿಕೆಗಳನ್ನು ಸರ್ಕಾರದ ಮೇಲೆ ಸುಲಭವಾಗಿ ಹೇರಿ, ನಮಗೇನು ಅರಿವಿಲ್ಲದಿದಂತೆ ನಡೆಯುವುದು ಸರ್ವೆ ಸಮಾನ್ಯ ಸಂಗತಿ. ಇಲ್ಲಿ ಯಾರನ್ನು ದೂಷಿಸಬೇಕು ಎಂದು ತಿಳಿಯದು..?ಪ್ರತಿ ಸಲವೂ ಸರ್ಕಾರದ ಮೇಲೇ ಹೊಣೆ ಹೊರೆಸುವುದು ಯಾವ ನ್ಯಾಯ..? ಪ್ರತಿಯೊಬ್ಬರು ವಿದ್ಯಾವಂತರೇ ಆಗಿರಬೇಕಾದರೆ ಉತ್ತಮ ಸಮಾಜಕ್ಕೆ ನಾವು ಒಳಿತನ್ನು ಮಾಡುವುದು ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ. ಸಿನಿಮಾಗಳಲ್ಲಿ ಹಿರೋಗಳು ತಮ್ಮ ಇಮೇಜನ್ನು ಹೆಚ್ಚಿಸಿಕೊಳ್ಳಲು  ಧುಮಾಪಾನ ಮಾಡುತ್ತಾರೆ, ಆದರೆ ನಿಜವಾಗಿಯೂ ಅವರು ಸಾರ್ವಜನಿಕ ಸ್ಥಳಗಳಲ್ಲಿ ಉಪಯೋಗಿಸುವುದಿಲ್ಲ. ಎಲ್ಲರಿಗೂ ತಿಳಿದಿರುವ ಹಾಗೆ ಪ್ಯಾಕೆಟ್ ಮೇಲೆ “ಧುಮಪಾನ ಹಾನಿಕರ ” ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಈ ನಿಯಮಗಳ ಸೂಚನೆ ಘೋಷಣೆಯಲ್ಲಿ ಎಲ್ಲ ಜಾಹೀರಾತುಗಳಲ್ಲಿಯೂ ಪ್ರಕಟಿಸಲಾಗುತ್ತದೆ. ಸಿನಿಮಾದಲ್ಲಿ ಮೊದಲ ಹಾಗೂ ವಿರಾಮದ ವೇಳೆ ಹಾಕುತ್ತಾರೆ. ಆದರೆ ಈ ನಿಯಮಗಳನ್ನು ಪಾಲಿಸುವವರು ಸಾರ್ವಜನಿಕರು ಅಲ್ಲವೇ..? ಅವರೆ ಈ ರೀತಿ ತಪ್ಪು ಮಾಡಿದರೆ ಹೇಗೆ..? ಪ್ರಜ್ಞಾವಂತರಾದ ನಾಗರಿಕರೇ ಇಂತಹ ಕಾನೂನು ಬಾಹಿರ ಚಟುವಟಿಕೆಯಲ್ಲಿ ನಿರತರಾಗುತ್ತರೆಂದೆರೆ ಇದಕ್ಕೆಲ್ಲ ಏನೆಂದು ಹೇಳಬೇಕು. ನಾನು ಬಸ್ಸ್ ನಿಲ್ದಾಣ, ಟೀ ಅಂಗಡಿ ಸೇರಿದಂತೆ ಕೆಲವು ಹೋಟೆಲ್ಗಳ ಬಳಿಯೂ ಬಿಡಿ, ಸಿಗರೇಟ್ಗಳನ್ನು ಸೇದುತ್ತಾರೆ. ನಾವೇನಾದರೂ ಬುದ್ಧಿ ಹೇಳಿದರೆ ನಿಮಗೇನು..? ನಮ್ಮಿಷ್ಟ ಎಂಬ ಉಢಾಫೆಯ ಉತ್ತರವನ್ನು ನೀಡುತ್ತಾರೆ.ಇದಕ್ಕಾಗಿ ನಾವು ಕೊರ್ಟ್ ಮೊರೆ ಹೋದರೂ ಅದು ಎಷ್ಟು ಜನರ ಮೇಲೆ ಅಂತ ನಾವು ದೂರನ್ನು ನೀಡಲಾಗುತ್ತದೆ..? ಇದು ಅಸಾದ್ಯವಾದ ಮಾತು..? ಒಂದು ಸರ್ಕಾರ ಇದರ ವಿರುದ್ದ ಕಠಿಣ ನಿಯಮ ಜಾರಿಗೊಳಿಸಬೇಕು, ಇಲ್ಲವೇ ಸಾರ್ವಜನಿಕರೇ ಈ ಬಗ್ಗೆ ತಿಳಿದುಕೊಂಡು ಜಾವಬ್ದಾರಿಯುತವಾಗಿ ನಡೆದುಕೊಂಡರೆ ನಾವು ಸಹ ಬೇರೆ ದೇಶಗಳಿಗೆ ಸೆಡ್ಡು ಹೊಡೆದು ನಿಲ್ಲಬಹುದು. ಎಲ್ಲರಿಗೂ ತಿಳಿದಂತೆ ದೂಮಪಾನದಲ್ಲಿ ಹೆಚ್ಚಿನ ನಿಕೋಟಿನ್ ಎಂಬ ವಿಷಕಾರಿಯಿದ್ದರೂ ಸೇದುವ ಹಾಗೂ ಗಾಳಿಯಲ್ಲಿ ಸೇವಿಸುವ ಇತರೇ ಆರೋಗ್ಯವಂತರಿಗೂ ಸಹ ದುಷ್ಪಾರಿಣಾಮ ಬೀರುತ್ತದೆ.ಇದರ ಅರಿವಿದ್ದರೂ ಅದರ ಬಗ್ಗೆ ಮುಂಜಾಗ್ರತೆಯನ್ನು ತೆಗೆದುಕೊಳ್ಳದೆ ಬೇಜಾವಬ್ದಾರಿತನವನ್ನು ತೋರುತ್ತಾರೆ. ಇತ್ತೀಚಿನ ವರದಿಯ ಪ್ರಕಾರ ೨೦೨೦ ರಲ್ಲಿ ಭಾರತದಾದ್ಯಂತ ನಡೆಸಿದ ದೊಡ್ಡ ಪ್ರಮಾಣದ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ೩೦ ರಿಂದ ೪೪ವರ್ಷ ವಯಸ್ಸಿನ ವಯಸ್ಕರಲ್ಲಿ ಸುಮಾರು ೧೪.೮ ಪ್ರತಿಶತದಷ್ಟು ಜನರು ಧೂಮಪಾನಿಗಳಾಗಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. ಇದಲ್ಲದೆ, ಈ ವರ್ಷ ೧೪ ಪ್ರತಿಶತ ಯುವಕರು ನಿಯಮಿತವಾಗಿ ಧೂಮಪಾನ ಮಾಡುತ್ತಿದ್ದಾರೆ. ೧೨-ಫೆಬ್ರವರಿ-೨೦೨೧ರ ಪ್ರಕಾರ ೨೦% ರಷ್ಟು  ೨೦೨೬೭೨೦ ಮಿಲಿಯನ್ ಹಾಗೂ ತಂಬಾಕು ಬಳಕೆದಾರರು ೨೦% ಭಾರತದಲ್ಲಿ ಪುರುಷರು ಶೇ ೨೦೪೨.೪% ಮಹಿಳೆಯರು ಶೇ ೨೦೧೪.೨% ಯುವಕರಲ್ಲಿ ಶೇಕಡ ೯೩೧೫ % ಸೇವಿಸುತ್ತಾರೆ. ಇನ್ನೂ ಕರ್ನಾಟಕದ ಬಗ್ಗೆ ಹೇಳುವುದಾದರೆ  ೬೩.೬೮ರಷ್ಟು ಇದ್ದು, ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ವಯಸ್ಕ ಜನಸಂಖ್ಯೆಯಲ್ಲಿ ಸಿಗರೇಟ್ ಸೇದುವ ಪ್ರಮಾಣವು ಅತ್ಯಧಿಕವಾಗಿದೆ ಎಂದು ತಂಬಾಕು ನಿಯಂತ್ರಣವನ್ನು ನಿರ್ಣಯಿಸುವ ಅಂಶವನ್ನು ಇತ್ತೀಚಿನ ಸಮೀಕ್ಷೆಯು ಕಂಡುಹಿಡಿದಿದೆ. ಕರ್ನಾಟಕದಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದ್ದರೂ ಕೆಲವು ನಿಬಂಧನೆಗಳ ಪ್ರಕಾರ, ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನವನ್ನು ಅನುಮತಿಸಲಾಗುವುದಿಲ್ಲ. ೩೦ ಕ್ಕಿಂತ ಹೆಚ್ಚು ಆಸನಗಳನ್ನು ಹೊಂದಿರುವ ಯಾವುದೇ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ಗಳು ತಮ್ಮ ಆವರಣದಲ್ಲಿ ಧೂಮಪಾನವನ್ನು ಅನುಮತಿಸಲು ಗೊತ್ತುಪಡಿಸಿದ ಧೂಮಪಾನ ಪ್ರದೇಶವನ್ನು ಒದಗಿಸಬೇಕು, ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನದ ದಂಡವನ್ನು ಕೇವಲ ೨೦೦ ರೂಪಾಯಿದೆ. ಅದನ್ನು ೨,೦೦೦0 ರೂಪಾಯಿವರಗೆ ಮಾಡಿದರೆ ಖಂಡಿತ ಆ ಭಯದಿಂದದಾರೂ ಇತರರಿಗೆ ತೊಂದರೆ ತಪ್ಪುತ್ತದೆ. ಸಾವರ್ಜನಿಕರು ಇದನ್ನು ಅಷ್ಷಾಗಿ ಪರಿಣಾಮಕಾರಿಯಾಗಿ ತೆಗೆದುಕೊಂಡಿಲ್ಲ ಹೆಚ್ಚಿನ ದಂಡವನ್ನು ವಿಧಿಸಿ ಸ್ವಲ್ಪ ದಿನಗಳ ಕಾಲ ಕೋರ್ಟ್ ಕೂಡ ಜೈಲು ವಾಸದ ನಿಯಮವನ್ನು ಜಾರಿಗೊಳಿಸುವ ಅಸ್ತು ಆಗಬೇಕಿದೆ.ಅಲ್ಲದೆ ೧೮ ವಯಸ್ಸಿಗಿಂತ ಕಡಿಮೆ ವಯಸ್ಸಿನವರು ಸೇದುತ್ತಿರುವುದು ಆತಂಕಕಾರಿಯಾದ ವಿಷಯವಾಗಿದೆ ಸಿಗರೇಟುಗಳ ಮಾರಾಟ ಮತ್ತು ಸೇವನೆಯ ಕನಿಷ್ಠ ವಯಸ್ಸನ್ನು ೧೮ ರಿಂದ ೨೧ ಕ್ಕೆ ಏರಿಸಲಾಗಿದ್ದರೂ ಕೂಡ ಯುವಕ ಹಾಗೂ ಯುವತಿಯರು ಹೆಚ್ಚೆಚ್ಚು ವ್ಯಾಮೋಹಕ್ಕೆ ಬಿದ್ದು ದಾಸರಾಗಿದ್ದಾರೆ. ಕೊನೆಯದಾಗಿ ಸಾರ್ವಜನಿಕ ಸ್ಥಳಗಳಲ್ಲಿ ಆದಷ್ಟು ಬೇಗ ಜನರು ತಾವಾಗಿಯೇ ಗಮನ ಹರಿಸಿ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆ ಹಾಗೂ ಇತರೆ ಸಾರ್ವಜನಿಕರಿಗೆ ಹಾನಿಯಾಗದಂತೆ ಮಾಡುವರೇ ಅಥವಾ ನಿಯಮಗಳನ್ನು ಧೂಳಿಪಟ ಮಾಡುವರೇ ಎಲ್ಲವೂ ಸಾರ್ವಜನಿಕರಿಗೇ ಬಿಟ್ಟಿದ್ದು.ಈ ಕಾಯಕವನ್ನು ಕಾದು ನೋಡಬೇಕು ಬದಲಾವಣೆ ಮಾಡುತ್ತಾರೇ ಎಂದು..? –

ಜ್ಯೋತಿ ಜಿ,ಮೈಸೂರು (ಸಾಮಾಜಿಕ ಕಾರ್ಯಕರ್ತೆ)

Leave a Reply

Your email address will not be published. Required fields are marked *