ಗಂಗಾವತಿ ತಾಲೂಕಿನ ಗ್ರಾಮೀಣ ಭಾಗದ ಹಲವು ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ರುದ್ರ ಭೂಮಿಯ ಸಮಸ್ಯೆ……

Spread the love

ಗಂಗಾವತಿ ತಾಲೂಕಿನ ಗ್ರಾಮೀಣ ಭಾಗದ ಹಲವು ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ರುದ್ರ ಭೂಮಿಯ ಸಮಸ್ಯೆ……

ಇದ್ದು ಹಲವು ರುದ್ರ ಭೂಮಿಗಳು ಒತ್ತುವರಿಯಾಗಿ ಹಲವು ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ರುದ್ರ ಭೂಮಿಯೇ ಇರುವುದಿಲ್ಲ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕೈಗೊಳ್ಳಬೇಕೆಂದು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಇಂದು ಆಮ್ ಆದ್ಮಿ ಪಕ್ಷ ಗಂಗಾವತಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗಂಗಾವತಿ ರವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಆಮ್  ಆದ್ಮಿ ಪಕ್ಷ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ ಇವರು ಮಾತನಾಡಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗವು ಹಲವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಗ್ರಾಮೀಣ ಸಮಸ್ಯೆಗಳನ್ನು ಬಗೆಹರಿಸುವಂತಹ ದಿಟ್ಟ ನಿರ್ಧಾರವನ್ನು ಕೈಗೊಳ್ಳುವಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ . ವ್ಯಕ್ತಿ ಮರಣದ ನಂತರ  ಆತನನ್ನು ಹೂಳಲು ಕೂಡ ಜಾಗವನ್ನು ನೀಡದಷ್ಟು ಸರ್ಕಾರ ನಿರ್ಧಯಿಯಾಗಿದೆ. ಸುಮಾರು 40 ವರ್ಷಗಳಿಂದ ಆನೆಗುಂದಿ ಭಾಗದಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಿದ್ದರು ಸಹ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸುವಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ದೂರಿದರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಗಂಗಾವತಿ ತಾಲೂಕು ಅಧ್ಯಕ್ಷರಾದ ಶರಣಪ್ಪ ಸಜ್ಜಿ ಹೊಲ ರವರು ಹಲವಾರು ವರ್ಷಗಳಿಂದ ಆನೆಗುಂದಿ ಭಾಗ ರಾಂಪುರ ಮಲ್ಲಾಪುರ  ಸಣಾಪುರ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸ್ಮಶಾನ ಸಮಸ್ಯೆ ತಲೆದೋರಿದ್ದು ಗ್ರಾಮಸ್ಥರು ಈಗಾಗಲೇ ಹಲವು ಬಾರಿ ಪ್ರತಿಭಟನೆ ಮನವಿ ಅರ್ಜಿ ಸಲ್ಲಿಸಿದ್ದರು ಆದರೆ ಸರ್ಕಾರ ಈವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ .ಇದನ್ನ ಆಮ್ ಆದ್ಮಿ ಪಕ್ಷ ಉಗ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು. ನಂತರ ಮಾತನಾಡಿದ ಗ್ರಾಮೀಣ ಘಟಕದ ಅಧ್ಯಕ್ಷರಾದ ಬಸವರಾಜ ಮ್ಯಾಗಳ ಮನೆ ಯವರು ಸ್ಮಶಾನ ಸಮಸ್ಯೆ 40 ವರ್ಷಗಳಿಂದ ಇದ್ದರೂ ಕೂಡ ಅದನ್ನು ಬಗೆಹರಿಸದಿರುವುದು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ ಇನ್ನಾದರೂ ಸಮಸ್ಯೆಯನ್ನು ಬಗೆಹರಿಸದೆ ಹೋದಲ್ಲಿ ಆಮ್ ಆದ್ವಿ ಪಕ್ಷದ ವತಿಯಿಂದ ಗ್ರಾಮಸ್ಥರೊಂದಿಗೆ ಉಗ್ರವಾದ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ನಗರ ಘಟಕದ ಅಧ್ಯಕ್ಷರಾದ ಪರಶುರಾಮ್ ಒಡೆಯರ್, ಜಿಲ್ಲಾ ಖಜಂಚಿ ದೊಡ್ಡಬಸಪ್ಪ, ಗ್ರಾಮೀಣ ಜಂಟಿ ಕಾರ್ಯದರ್ಶಿ ಭೋಗೇಶ್ ಆನೆಗುಂದಿ, ಜಿಲ್ಲಾ  ಮಾಧ್ಯಮ ಪ್ರತಿನಿಧಿ ರಾಘವೇಂದ್ರ ಸಿದ್ದಿಕೇರಿ, ವಿರುಪಣ್ಣ, ಬಸಮ್ಮ, ಗಣೇಶ, ವೆಂಕಟೇಶ್ ಕೊರಮ್ಮ ಕ್ಯಾಂಪ್, ರಾಮಣ್ಣ ,ದೇವರಾಜ್, ಖಾಜಾಸಾಬ್, ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *