ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷಾ ಶುಲ್ಕ ಕಡಿಮೆ ಮಾಡುವಂತೆ ವಿಧ್ಯಾರ್ಥಿಗಳಿಂದ ಹೋರಾಟ.

Spread the love

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷಾ ಶುಲ್ಕ ಕಡಿಮೆ ಮಾಡುವಂತೆ ವಿಧ್ಯಾರ್ಥಿಗಳಿಂದ ಹೋರಾಟ.

ಪರೀಕ್ಷಾ ಶುಲ್ಕವನ್ನು ಏರಿಸುವುದೆನದರೆ ಬಡವರ ಮಕ್ಕಳ ಶಿಕ್ಷಣದ ಮೇಲೆ ಬರೆ ಎಳದಂತೆ. ಎಂ.ಕೆ ಸಾಹೇಬ್ ನಾಗೇಶಹಳ್ಳಿ  ಹೇಳಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಹೋರಾಟದಲ್ಲಿ  ಭಾಗಿಯಾಗಿದ್ದರು. ಬಳ್ಳಾರಿ ವಿಶ್ವವಿದ್ಯಾಲಯದ 240 ಕಾಲೇಜುಗಳಲ್ಲಿ ಎರಡನೇ ಸೆಮಿಸ್ಟರ್ ಪರೀಕ್ಷಾ ಶುಲ್ಕವನ್ನು 1300 ಮತ್ತು 1450 ರೂಗಳನ್ನು ಹೆಚ್ಚು ಮಾಡಿದ್ದಾರೆ. ಕಳೆದ ಬಾರಿ ಬಿ.ಎ,ಬಿ.ಕಾಂ,ಬಿ.ಎಸ್ಸಿ, ಬಿಬಿಎ/ಎಮ್ ನ ಮೊದಲ ಸೆಮಿಸ್ಟರ್ ನಲ್ಲಿ 150 ಪರೀಕ್ಷಾ ಶುಲ್ಕವನ್ನು ಕಟ್ಟಿಸಿಕೊಂಡಿದ್ದರು. ಮೊದಲ ಸೆಮಿಸ್ಟರ್ ನಲ್ಲಿ ಎನ್.ಇ.ಪಿ ಅಡಿಯಲ್ಲಿ ಕಡಿಮೆ ಶುಲ್ಕವನ್ನು ಕಟ್ಟಿಸಿಕೊಂಡಿದ್ದ ವಿಶ್ವವಿದ್ಯಾಲಯ, ಇವಾಗ ಎನ್.ಇ.ಪಿ ಹೆಸರಲ್ಲಿ  ಹಗಲು ದರೋಡೆಗೆ ಇಳಿದಿದೆ. ಬಡ ಮಕ್ಕಳ ಭವಿಷ್ಯದ ಮೇಲೆ ವಿಶ್ವವಿದ್ಯಾಲಯ ಪದೆ ಪದೆ  ಹುಡುಗಾಟ ಆಡುತ್ತಿದೆ. ಎನ್.ಇ.ಪಿ ಎಂಬುದು ಖಾಸಗೀಕರಣದ ಮೋಸದ ಜಾಲ ಎಂಬುದು ಇವಾಗ ಅರಿವಾಗುತ್ತಿದೆ. ಬಡ ವಿಧ್ಯಾರ್ಥಿಗಳು ನೂರರಿಂದ ಎರಡ್ನೂರು ರೂಪಾಯಿಗಳನ್ನು ಕಟ್ಟದೆ ಪರದಾಡುತ್ತಾರೆ. ಇಂತಹ ಸಂದರ್ಭದಲ್ಲಿ 1300,1450 ಕಟ್ಟಿ ಎಂದರೆ ಅವರು ಎಲ್ಲಿಂದ ತರಬೇಕು? ಎಂದು ಗೌತಮ್ ಬಳಗನೂರ ಪ್ರಶ್ನೆ ಮಾಡಿದರು. ಹೋರಾಟಕ್ಕೆ ಮಣಿದು ವಿಶ್ವವಿದ್ಯಾಲಯದ  ಸಿಂಡಿಕೇಟ್ ಸದಸ್ಯರಾದ ಬಸವರಾಜ್ ಪೂಜಾರ ಅವರು ಬಂದು ಮನವಿ ಸ್ವೀಕರಿಸಿ, ಇವತ್ತು ಅಥವಾ ನಾಳೆಯ ಒಳಗಡೆ ಪರೀಕ್ಷಾ ಶುಲ್ಕ ಕಡಿಮೆ ಆಗುತ್ತೆ ಎಂಬ ಭರವಸೆ ನೀಡಿದ್ದಾರೆ. ಒಂದುವೇಳೆ ಇವರ ಮಾತು ಹುಸಿಗೊಂಡರೆ,ಮುಂದಿನ ದಿನಗಳಲ್ಲಿ ದೊಟ್ಟ ಮಟ್ಟದ ಹೋರಾಟ ಮಾಡಲಾಗುವುದು ಎಂದು ವಿಧ್ಯಾರ್ಥಿಗಳೆಲ್ಲ ಒಕ್ಕೊರಲಿನಿಂದ ಹೇಳಿದ್ದಾರೆ. ಇದೆ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಎಂ.ಕೆ ಸಾಹೇಬ್ ನಾಗೇಶನಹಳ್ಳಿ, ಶಿಕ್ಷಣ ಪ್ರೇಮಿಗಳಾದ ಗೌತಮ್ ಬಳಗನೂರ,ರಘು ಚಕ್ರಿ,ಗವಿ ಹೂಗಾರ,ರಮೇಶ್ ಭೀಮಣ್ಣ,ನವೀನ್ ಹೊಸಕೋಟೆ ಮುಂತಾದವರ  ನೇತೃತ್ವದಲ್ಲಿ ಈ ಹೋರಾಟ ನಡೆಯಿತು.

ವರದಿ – ಉಪ್ಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *